ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ (ರಿ.) ಪೊಸಳ್ಳಿ ಇದರ ಮಾಸಿಕ ಸಭೆ ಜುಲೈ 12 ರಂದು ರಮೇಶ್ ಸಾಲಿಯಾನ್ ಸಂಚಯಗಿರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ಸಂಘಕ್ಕೆ ಜೀವಮಾನದ ಅತಿಹೆಚ್ಚು ಸಮಯವನ್ನು ಮೀಸಲಿಟ್ಟು ಸಲಹೆ ಸಹಕಾರ ನೀಡಿ ಸಹಕರಿಸಿದ ಮಾಜಿ ಅಧ್ಯಕ್ಷರಾದ ಮಚ್ಚೇಂದ್ರ ಸಾಲಿಯಾನ್ ಗುರುಕೃಪಾ ರನ್ನು 2026-28 ರ ಸಾಲಿಗೆ ಗೌರವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.



