ಅಂಬೇಡ್ಕರ್ ಅವರ ಆದರ್ಶಗಳು ಇಂದಿನ ಪೀಳಿಗೆಗೆ ಸಾರಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಮೊಳಕಾಲ್ಮುರು:ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಸಂವಿಧಾನದ ಆಶಯಗಳನ್ನು ನಾವು ಪರಿಪೂರ್ಣವಾಗಿ ಪಾಲಿಸಿದಲ್ಲಿ  ಸಮಾಜದ ಋಣವನ್ನು ನಾವು ತೀರಿಸಿದಂತೆ ಎಂದು ತಹಶೀಲ್ದಾರ್ ಎನ್ .ರಘುಮೂರ್ತಿಹೇಳಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ತಾಲೂಕು ವಕೀಲ ನಗರ ಸಂಘದಿಂದ ಅಂಬೇಡ್ಕರ್ ಪರಿನಿಬ್ಬಾಣ ದಿನವನ್ನು ಉದ್ಘಾಟಿಸಿ ಮಾತನಾಡಿರು.

ಅಂಬೇಡ್ಕರ್ ಅವರಿಗೆ ತಮ್ಮ ಜೀವನದಲ್ಲಿ ಎಷ್ಟೊಂದು ನೋವು ಅಸ್ಪೃಶ್ಯತೆ ಅಸಮಾನತೆ ಘೋಷಣೆ ಇದ್ದರೂ ಕೂಡ ಎಲ್ಲದಕ್ಕಿಂತ ಮಿಗಿಲಾದ ನೋವು ಪುನಃ  ಒಪ್ಪಂದ ಮತ್ತು ಹಿಂದೂ ಆಗಿ ಹುಟ್ಟುವುದು ನನ್ನ ಕೈಯಲ್ಲಿ ಇರಲಿಲ್ಲ. ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿ ತಮ್ಮ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದು ಕಾರ್ಲ್ ಮಾರ್ಕ್ಸ್ ಮತ್ತು ಬುದ್ಧನ ಪುಸ್ತಕಗಳನ್ನು ಪ್ರಕಟಿಸಲು ಹಣದ ಅವಶ್ಯಕತೆ ಇದ್ದರೂ ಕೂಡ ಸಹಾಯ ಮಾಡಲು ಯಾರು ಮುಂದೆ ಬರಲಿಲ್ಲ.

ನೋವು ಕೂಡ ಅವರಿಗೆ ಅತಿಯಾಗಿ ಕಾಡಿತ್ತು ಎಲ್ಲದಕ್ಕಿಂತ ಮಿಗಿಲಾಗಿ ಇಡೀ ನನ್ನ ಜೀವನವನ್ನು ಸಮಾಜಕೋಸ್ಕರ  ಮುಡಪಾಗಿಟ್ಟು ಸಂವಿಧಾನವನ್ನು ರಚಿಸಿ ಸಂವಿಧಾನದ ಸವಲತ್ತುನ್ನು ಪಡೆದಂತ ಅಧಿಕಾರಿ ನೌಕರರು ಮತ್ತು ಉದ್ಯೋಗಿಗಳು ಸಮಾಜದಲ್ಲಿ ಸ್ವಾರ್ಥಿಗಳಾಗಿ ಬದುಕುತ್ತಿದ್ದನ್ನು ಮತ್ತು ಈ ಜನಾಂಗದವರ ಏಳಿಗೆಗೆ ಮುಂದಾಗದೆ ಇರುವುದನ್ನು  ಪ್ರಸ್ತಾಪಿಸಿ ತನ್ನ ಕೊನೆಯ ದಿನಗಳಲ್ಲಿ ಹೆಚ್ಚು  ನೋವನ್ನು ತೋಡಿಕೊಂಡಿದ್ದರು.

 

 

ಇಂದಿನ ಕಾರ್ಯಾಂಗ ನ್ಯಾಯಾಂಗ ಮತ್ತು ಶಾಸಕಾಂಗದಲ್ಲಿ ಕೆಲಸ ನಿರ್ವಹಿಸುತ್ತಿರುವ ನಾವುಗಳು ಅದರಲ್ಲೂ ಈ ಒಂದು ಮೀಸಲಾತಿಯನ್ನು ಉಪಯೋಗಿಸಿಕೊಂಡ ನಾವುಗಳು ಅಂಬೇಡ್ಕರ್ ಅವರ ಆಶಯ ಶೋಷಿತರಾ ದೀನದಲಿತರ ಅಸಹಾಯಕರ ಮತ್ತು ಬಡವರ ಪರ ನಿಂತು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾವು ಇಂದು ಒಂದು ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.

ಹಿರಿಯ ವಕೀಲರಾದ ರಾಜಶೇಖರ್ ನಾಯಕ ಮಾತನಾಡಿ ಚಳ್ಳಕೆರೆ ತಾಲ್ಲೂಕಿನಲ್ಲಿ ತಹಸಿಲ್ದಾರ್ ರಘುಮೂರ್ತಿಯವರು ಸಾಕಷ್ಟು ಜನ ಸ್ನೇಹಿಯಾಗಿ ಮತ್ತು ಜನಪರವಾಗಿ ಸಮಾಜಮುಖಿಯಾದ ಕೆಲಸ ನಿರ್ವಹಿಸಿದ್ದಾರೆ .ಅಂಬೇಡ್ಕರ್ ಅವರ ಆಶಯಗಳನ್ನು ಪರಿಪಾಲಿಸಿದ್ದಾರೆ ಇಂದಿನ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ನಾವೆಲ್ಲರೂ ಕೂಡ ಅಂಬೇಡ್ಕರ್ ಅವರ ಆದರ್ಶೆಗಳು ತತ್ವಗಳನ್ನು ನಮ್ಮ ಜೀವನದಲ್ಲಿ ಪರಿಪಾಲಿಸೋಣ ಎಂದರು.

ವಕೀಲರಾದ  ವಸಂತ್ ಕುಮಾರ್ ಮತ್ತು ಚಂದ್ರಪ್ಪ ,ಆನಂದಪ್ಪ ಹಿರಿಯ ವಕೀಲರಾದ  ಉಪಸ್ಥಿತರಿದ್ದರು.

 

[t4b-ticker]

You May Also Like

More From Author

+ There are no comments

Add yours