ಮನೆಗೊಬ್ಬ ಯೋಧನನ್ನು ಕಳುಹಿಸುವಂತೆ ಕಾರ್ಯವಾಗಬೇಕಿದೆ: ಸರೋಜಮ್ಮ

 

 

 

 

ಚಿತ್ರದುರ್ಗ ಜು. ೨೬
ಮನೆಗೊಬ್ಬ ಯೋಧನನ್ನು ಕಳುಹಿಸುವಂತೆ ಕಾರ್ಯವಾಗಬೇಕಿದೆ ಆದರಲ್ಲೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಎಸ್.ಎಸ್.ಚೈತನ್ಯರವರ ತಾಯಿ ಸರೋಜಮ್ಮ ಅಭಿಪ್ರಾಯಪಟ್ಟಿದ್ದಾರೆ.
ವೀರಯೋಧ ಎಸ್.ಎಸ್.ಚೈತನ್ಯ ಅಭಿಮಾನಿ ಬಳಗದವತಿಯಿಂದ ನಗರದ ಸ್ಟೇಡಿಯಂ ಕ್ರಾಸ್‌ನ ವೀರಯೋಧ ಎಸ್.ಎಸ್.ಚೈತನ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಜುಲೈ ೨೬ರ ಕಾರ್ಗಿಲ್ ವಿಜಯೋತ್ಸವ ಮತ್ತು ಸೈನಿಕರಿಗೆ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮಲ್ಲಿರುವ ಮಕ್ಕಳಲ್ಲಿ ಸೈನ್ಯಕ್ಕೆ ಕಳುಹಿಸುವಂತ ಕಾರ್ಯಕ್ಕೆ ಪೋಷಕರು ಮುಂದಾಗಬೇಕಿದೆ ದುಡಿಮೆ ಮುಖ್ಯವಲ್ಲ, ನಮ್ಮಲ್ಲಿರುವ ಯೋಗ್ಯತೆ ನೋಡಿ ಹಣ ಬರುತ್ತಿದೆ. ಸಾವು ಎಲ್ಲರಿಗೂ ಬರುತ್ತದೆ ಅದರೆ ಅದಕ್ಕೆ ಹೆದರದೆ ಸೈನ್ಯಕ್ಕೆ ಸೇರಲು ಯುವಜನತೆ ಮುಂದಾಗಬೇಕಿದೆ. ದೇಶದಲ್ಲಿನ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಮುಂದಾಗಬೇಕಿದೆ. ನನ್ನ ಮಗ ಇಲ್ಲ ಎಂಬ ಭಾವನೆ ನನ್ನಲ್ಲಿ ಇಲ್ಲ ನನ್ನ ಸುತ್ತಾ ಎಲ್ಲರು ಇದ್ದಾರೆ ಇದೇ ರೀತಿ ನನ್ನ ಮಗನು ಸಹಾ ಇದ್ದಾನೆ ಎಂಬ ನಂಬಿಕೆ ಇದೆ ಎಂದರು.
ಬಿಜೆಪಿ ಮುಖಂಡರಾದ ಅನಿತ್‌ಕುಮಾರ್ ಮಾತನಾಡಿ, ಕಾರ್ಗಿಲ್ ಯುದ್ದ ನಿರಂತರವಾಗಿ ೬೦ ದಿನಗಳ ಕಾಲ ನಡೆದಿದೆ. ಈ ಸಮಯದಲ್ಲಿ ಬಹಳಷ್ಟು ಯೋಧರನ್ನು ಕಳೆದು ಕೊಳ್ಳಬೇಕಾಯಿತು. ಈ ಯುದ್ದದಲ್ಲಿ ನಾವು ಕಳೆದು ಕೊಂಡಿದ್ದ ಬಂಕರ್‌ನ್ನು ವಾಪಾಸ್ಸು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ಯುಧ್ದದಲ್ಲಿ ಸಾವನ್ನಪ್ಪಿದ ಯೋಧರ ಸವಿನೆನಪಿಗಾಗಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುವ ದಿನವಾಗಿದ್ದು ಕಾರ್ಗಿಲ್ ವಿಜಯೋತ್ಸವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.
ಇAದಿನ ದಿನಮಾನದಲ್ಲಿ ಸೈನ್ಯಕ್ಕೆ ಯೋಧರನ್ನು ಕಳುಹಿಸುವುದು ಅಪರೂಪವಾಗಿದೆ ಅಂತಹದರಲ್ಲಿ ಚೈತನ್ಯರವರ ತಾಯಿಯವರು ಅಂದಿನ ಕಾಲದಲ್ಲಿಯೇ ತಮ್ಮ ಮಗನನ್ನು ಸೈನ್ಯಕ್ಕೆ ಕಳುಹಿಸುವುದರ ಮೂಲಕ ದೇಶ ಸೇವೆಯಲ್ಲಿ ಪಾತ್ರವಹಿಸಿದ್ದಾರೆ. ಈ ವೃತ್ತಕ್ಕೆ ಚೈತನ್ಯ ವೃತ್ತ ಎಂದು ನಾಮಕರಣ ಮಾಡಿರುವುದು ಉತ್ತಮವಾದ ಕೆಲಸವಾಗಿದೆ. ಇಲ್ಲಿ ಅನೇಕ ಕಾಲೇಜುಗಳಿದ್ದು ಅಲ್ಲಿ ಓದುವ ವಿದ್ಯಾರ್ಥಿಗಳಿಗೆ ಅವರು ಸ್ಪೂರ್ತಿಯಾಗಿದ್ದಾರೆ ಎಂದು ಅನಿತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಘುಚಂದನ್, ಸಿಆರ್‌ಪಿಎಸ್.ನ ಯೋಧ ಜಗದೀಶ್, ಮೃತ ಯೋಧರ ಪತ್ನಿಯರಾದ ಮಂಜುಳ ಮಂಜುನಾಥ್, ರೇಖಾ ಪ್ರಭಾಕರ್, ಆರ್ ಎಸ್.ಎಸ್.ನ ಜಿಲ್ಲಾ ಪ್ರಮುಖ್ ರಾಜಕುಮಾರ್, ಕೆ.ಎಸೆ.ಆರ್.ಟಿ.ಸಿ.ಯ ಬಾಬು, ಪರಶುರಾಮ್, ಚಂದನ್ ಭಾಗವಹಿಸಿದ್ದರು. ನಟರಾಜ್ ಕಾರ್ಯಕ್ರಮ ನಿರೂಪಿಸಿದರು.

 

 

[t4b-ticker]

You May Also Like

More From Author

+ There are no comments

Add yours