ಸೀಬಾರ ಬಳಿ ಭೀಕರ ರಸ್ತೆ ಅಪಘಾತ ಸ್ಥಳದಲೇ ಮೂರು ಸಾವು

 

 

 

 

ಚಿತ್ರದುರ್ಗ: ತಾಲೂಕಿನ  ಸೀಬಾರ ಬಳಿಯಲ್ಲಿ  ಭೀಕರ ಅಪಘಾತ ಸಂಭವಿಸಿದೆ.   ಲಾರಿ- ಕಾರು ನಡುವೆ  ಅಪಘಾತ ನಡೆದಿದ್ದು  ಸ್ಥಳದಲ್ಲೇ ಮೂರು ಮಂದಿ ಸಾವಿಗೀಡಾಗಿದ್ದಾರೆ  ಎಂದು ತಿಳಿದು ಬಂದಿದೆ. . ಚಿತ್ರದುರ್ಗ ಹೊರ ವಲಯದ  ಸೀಬಾರ ಸಮೀಪದ  ಹೊಸ ಹೈವೆಯಲ್ಲಿ  ಈ ದುರ್ಘಟನೆ ನಡೆದಿದೆ. ಇನ್ನೂ ಈ  ಘಟನೆಯಲ್ಲಿ ಮೃತಪಟ್ಟವರ ಮಾಹಿತಿಯನ್ನು ಪೋಲಿಸರು ಕಲೆ ಹಾಕುತ್ತಿದ್ದು ಯಾವುದೇ ಮಾಹಿತಿ ಇನ್ನು ದೃಡಪಟ್ಟಿಲ್ಲ. ಗಾಯಾಳುಗಳನ್ನು  ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours