ಕ್ರೀಡೆ ಯೋಗದಿಂದ ಮಾತ್ರ ಸದೃಢ ದೇಹ ಹೊಂದಲು ಸಾಧ್ಯ: ತಹಶೀಲ್ದಾರ್ ಎನ್. ರಘುಮೂರ್ತಿ

 

 

 

 

ಚಳ್ಳಕೆರೆ: ಯುವಕರು ದೇಹದ ಸೌಂದರ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಕ್ರೀಡೆ ಮತ್ತು ಯೋಗ ಮಾತ್ರ ಮಾನದಂಡವಾಗುತ್ತದೆ ಇದನ್ನು ಹೊರತುಪಡಿಸಿ ಯಾವುದೇ ತಾತ್ಕಾಲಿಕ ಔಷಧಿ ಪರಿಣಾಮಕಾರಿಯಲ್ಲ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದಲ್ಲಿ ಹಮ್ಮಿಕೊಂಡಿದ್ದ  ಫುಟ್ಬಾಲ್‌  ಪಂದ್ಯಾವಳಿಯಲ್ಲಿ  ಭಾಗವಹಿಸಿ ಮಾತನಾಡಿ  ಇಂದಿನ ಯುವಕರು ದೇಹವನ್ನು ಹುರಿ ಮಾಡಿಕೊಳ್ಳುವುದು ಅಥವಾ ಸದೃಢ ದೇಹ  ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದರು.  ಜೊತೆಗೆ ನಗರವನ್ನು ಕ್ರೀಡಾ ನಗರ ಎಂಬ ಖ್ಯಾತಿ ಮಾಡಬೇಕೇನ್ನುವುದು   ಶಾಸಕರ ಆಶಯವಾಗಿದೆ.

 

 

ಯುವಕರಿ ಉಪಯುಕ್ತವಾದಂತಹ  ಶಟಲ್ ಬ್ಯಾಾಡ್ಮಿಂಟನ ಕ್ರೀಡಾಂಗಣ ಮತ್ತು ಈಜು ಕೊಳವನ್ನು ನಿರ್ಮಿಸುವುದು ಕೂಡ  ಶಾಸಕರ ಮತ್ತು ತಾಲೂಕ ಆಡಳಿತದ ಕನಸಿದೆ.  ಮುಂದಿನ ದಿನಗಳಲ್ಲಿ ಈ ಸೌಲಭ್ಯಗಳು ಇಲ್ಲಿನ ಯುವಕರಿಗೆ ಸಿಗುವಂತಾಗಲಿ ಇಂದಿನ  ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶ ವನ್ನು ಪ್ರತಿನಿಧಿಸಬೇಕು.  ಗಂಡು ಮೆಟ್ಟಿನ ನಾಡು ಚಿತ್ರದುರ್ಗ ಇಲ್ಲಿನ ಯುವಕರಿಗೆ ಕಟ್ಟುಮಟ್ಟಿನ ದೇಹದ ಆಕಾರ ದೈವದತ್ತವಾಗಿ ಬಂದಿದೆ. ತಮ್ಮ ಕಲಿಕೆಯ ಜೊತೆಯಲ್ಲಿ ಕ್ರೀಡೆ ಮತ್ತು ಯೋಗವನ್ನು ಅವಿಭಾಜ್ಯ ಅಂಗವಾಗಿ ಸ್ವೀಕರಿಸಿ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಪಂದ್ಯಾವಳಿಗಳನ್ನು ಆಯೋಜಿಸಿದಂತ ಭಗತ್ ಸಿಂಗ್ ಯುವಕ ಸಂಘದವರಿಗೆ ಧನ್ಯವಾದಗಳು ಅರ್ಪಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರದೀಪ್ ಕುಮಾರ್ ಯುವಕರದಂತ ಆದರ್ಶ ಕೃಷ್ಣೆಗೌಡ ಸ್ಪರ್ದಾಳುಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours