ಹದಿನೈದು ಸಾವಿರ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ಡೇಟ್ ಫಿಕ್ಸ್

 

 

 

 

ಬೆಂಗಳೂರು: ಹದಿನೈದು ಸಾವಿರ ಶಿಕ್ಷಕರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಿಕ್ಷಣ ಇಲಾಖೆಯು ಈಗಾಗಲೆ, ನೇಮಕಾತಿ ನಿಯಮವನ್ನು ಬಿಡುಗಡೆ ಮಾಡಿದೆ. ಆದರೆ, ನೇಮಕಾತಿ ಪರೀಕ್ಷೆಯನ್ನು ಯಾವಾಗ ನಡೆಸಲಾಗುತ್ತದೆ ಎಂದು ದಿನಾಂಕ ಬಿಡುಗಡೆ ಮಾಡಿರಲಿಲ್ಲ.

ಆದರೆ, ಮೇ ನಲ್ಲಿ ನಡೆಸುವುದು ಸೂಕ್ತ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಇಲಾಖಾ ಆಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದಾರೆ.

 

 

ಅದರಂತೆ ಮೇ ತಿಂಗಳಲ್ಲಿ ಸಿಇಟಿ ಹಾಗೂ ಪ್ರತಿ ವರ್ಷ ಜನವರಿ ಹಾಗೂ ಜೂನ್ ಸೇರಿ ವರ್ಷಕ್ಕೆ ಎರಡು ಬಾರಿ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ನಡೆಸುವಂತೆಯೂ ಸೂಚಿಸಿದ್ದಾರೆ. ಆದರೆ, ವಿದ್ಯಾರ್ಥಿಗಳು ಸಿಇಟಿ ಮಾಡುವ ಮುನ್ನವೇ ಟಿಇಟಿ ನಡೆಸಿ ಸಿಇಟಿಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ.

ಆದರೆ, ಇದಕ್ಕೂ ಮುನ್ನ ಅರ್ಜಿ ಆಹ್ವಾನಿಸಬೇಕು. ಇದಕ್ಕೆಲ್ಲಾ ದಿನಾಂಕವನ್ನು ಶಿಕ್ಷಣ ಇಲಾಖೆಯೇ ಬಿಡುಗಡೆ ಮಾಡಬೇಕಿದೆ. ಈ ಹಿಂದೆ 10 ಸಾವಿರ ಶಿಕ್ಷಕರ ನೇಮಕಾತಿಗೆ ನಡೆಸಿದ್ದ ಸಿಇಟಿಯಲ್ಲಿ ಪಾಸಾಗಿದ್ದವರು 3 ಸಾವಿರ ಶಿಕ್ಷಕರು ಮಾತ್ರ.

[t4b-ticker]

You May Also Like

More From Author

+ There are no comments

Add yours