ಕುಡಿಯುವ ನೀರು ಶುದ್ದವಾಗಿದ್ದರೆ ದೇಹದ ಸಾಕಷ್ಟು ಕಾಯಿಲೆಯನ್ನು ದೂರ ಮಾಡಬಹುದಾಗಿದೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ದವಾಗಿದ್ದರೆ ದೇಹದ ಸಾಕಷ್ಟು ಕಾಯಿಲೆಯನ್ನು ದೂರ ಮಾಡಬಹುದಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

ತಾಲೂಕಿನ ಗುಡ್ಡದರಂಗನವ್ವನಹಳ್ಳಿಯಲ್ಲಿ ಗ್ರಾಮೀಣ ಅಭಿವೃದ್ಧಿ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಶುದ್ದ ಕುಡಿಯುವ ನೀರು ಘಟಕ‌ ಉದ್ಘಾಟನೆ ಚಿತ್ರ

ಡಿಎಂಎಫ್ ಅನುದಾನದಲ್ಲಿ‌ 12 ಲಕ್ಷ ವೆಚ್ಚದಲ್ಲಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಶುದ್ದ ಕುಡಿಯುವ ನೀರು ಜನರ ಆರೋಗ್ಯ ಕಾಪಾಡುತ್ತದೆ. ಶುದ್ದ ನೀರು ಬಳಕೆಯಿಂದ ನೀರಿನ ಮೂಲಕ ಬರುವ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಈ ಮೊದಲು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಫ್ಲೋರೈಡ್ ನೀರು ಸೇವನೆಯಿಂದ ಆನರೋಗ್ಯದಿಂದ ಬಳಲುತ್ತಿದ್ದರು. ಸರ್ಕಾರದ ಮೂಲಕ ಶುದ್ದ ನೀರಿನ ಘಟಕಗಳ ನಿರ್ಮಾಣದಿಂದ ಜನರಿಗೆ ಶುದ್ದ ನೀರು ಸಿಗುವಂತಾಗಿ ಜನರ ಆರೋಗ್ಯ ಕಾಪಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

 

 

ಶುದ್ದ ನೀರನ್ನು ಲೀಟರ್ ಗೆ ಇಂತಿಷ್ಟು ಹಣ ನಿಗದಿ ಮಾಡಿ ಒಬ್ಬರನ್ನು ಘಟಕ‌ ನಿರ್ವಹಣೆಗೆ ನೇಮಿಸಿದರೆ ಒಳ್ಳೆಯದು. ಅನೇಕ ಶುದ್ದ ನೀರಿನ ಘಟಕಗಳು ನಿರ್ವಹಣೆ ಸಮಸ್ಯೆಯಿಂದ ಯಾರು ಬೇಕೋ ಅವರು ಉಪಯೋಗಿಸಿ ರಾಜ್ಯದಲ್ಲಿ ಸಾವಿರಾರು ಶುದ್ದ ನೀರಿನ ಘಟಕಗಳು ಕೆಟ್ಟು ನಿಂತಿವೆ.ಅಂತಹ ಘಟಕವನ್ನು ಸರಿಪಡಿಸಿದ್ದೇವೆ. ಅದಕ್ಕಾಗಿ ಉತ್ತಮ ನಿರ್ವಹಣೆ ಇದ್ದರೆ ಬಹುಕಾಲ ಉಪಯೋಗಕ್ಕೆ ಬರುತ್ತದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಲಹೆ‌ ನೀಡಿದರು.ಗ್ರಾಮ ಪಂಚಾಯತಿಯವರು ಹೆಚ್ಚು ಜವಬ್ದಾರಿ ತೆಗೆದುಕೊಂಡು ಏಜೆನ್ಸಿ ಅವರ ಮೂಲಕ ನಿರ್ವಹಣೆ ಮಾಡಿಸುವ ಹೊಣೆ ಹೊರಬೇಕು ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಹೊನ್ನುರಪ್ಪ, ಉಪಾಧ್ಯಕ್ಷ ಸಾಕಮ್ಮ, ಸದಸ್ಯರಾದ ಜ್ಯೋತಿ, ರೂಪ, ಓಬಮ್ಮ, ಲಕ್ಷ್ಮಿ, ಅಂಜಿನಮ್ಮ, ರುದ್ರಮ್ಮ, ಕ್ಯಾತಪ್ಪ, ಡಿ.ಸುರೇಶ್, ರತ್ನಮ್ಮ, ಯಲ್ಲಪ್ಫ , ಸುಧಾ ಇದ್ದರು…

ಶಾಲಾ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಚಿತ್ರ

ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ಮತ್ತು ರಸ್ತೆ ಕಾಮಗಾರಿಗೆ ಚಾಲನೆ: ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಸುಮಾರು ಸುಮಾರು 1.90 ಲಕ್ಷ ಅನುದಾನ ನೀಡಿದ್ದೇನೆ. ಅದರಲ್ಲಿ 62 ಲಕ್ಷ ವೆಚ್ಚದಲ್ಲಿ 4 ಕೊಠಡಿಗಳ ಶಾಲಾ ಕಟ್ಟಡ ಪೂರ್ಣಗೊಂಡಿದೆ. ಇಂದು ಸಹ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಸರ್ಕಾರಿ ಪ್ರೌಢಶಾಲೆಗೆ ರಾಜ್ಯ ವಲಯ ಯೋಜನೆಯಡಿ 47.2 ಲಕ್ಷ, ಡಿಎಂಎಫ್ ಅನುದಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆ‌ ಕೊಠಡಿಗೆ 48 ಲಕ್ಷ ಅನುದಾನ ನೀಡಿದ್ದು ಭೂಮಿ ಪೂಜೆ ಸಹ ಮಾಡಿದ್ದು ಒಟ್ಟು 6 ವಿಶಾಲವಾದ ಕೊಠಡಿಗಳು ನಿರ್ಮಾಣವಾಗಲಿವೆ.
ಸರ್ಕಾರಿ ಶಾಲೆಯ ಆವರಣ ಖಾಸಗಿ ಶಾಲೆಗಿಂತ ಕಮ್ಮಿ‌ಇಲ್ಲದಂತೆ ಆಕರ್ಷಣೆಯಿಂದ ನಿರ್ಮಾಣ ಮಾಡಲಾಗುವುದು ಮತ್ತು ಸಿ.ಸಿ.ರಸ್ತೆಗೆ 30 ಲಕ್ಷ ಅನುದಾನ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಭಾರತಿ, ಉಪಾಧ್ಯಕ್ಷರಾದ ಆಶಾ, ಸದಸ್ಯರಾದ ರಹಿಂ , ರುದ್ರಪ್ಪ, ಕೇಶವಪ್ಪ, ವಿದ್ಯಾವತಿ ,ಬಿಇಓ ಬಸವಾಜ್ ಶಿಕ್ಷಕರು ಮತ್ತು ಗ್ರಾಮಸ್ಥರು ಇದ್ದರು.

ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ: ಲೋಕೋಪಯೋಗಿ ಇಲಾಖೆ ವತಿಯಿಂದ ಮೆದೇಹಳ್ಳಿ ಗ್ರಾಮದಲ್ಲಿ 30 ಲಕ್ಷ , ಐನಹಳ್ಳಿ ಕುರುಬರಹಟ್ಟಿ 40 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ. ಗುಣಮಟ್ಟದ ರಸ್ತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours