ಮಾ.6ರಂದು ಉಚಿತ ಕಿವಿ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ.

 

 

 

 

ಚಿತ್ರದುರ್ಗ, ಮಾರ್ಚ್ 04:
ಕರ್ನಾಟಕ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕರ್ನಾಟಕ ಅತ್ಯಾಧುನಿಕ ವಾಕ್ ಮತ್ತು ಶ್ರವಣ ಕೇಂದ್ರದ ಸಹಯೋಗದೊಂದಿಗೆ 2022ರ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಉಚಿತ ಕಿವಿ ರೋಗ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಮಾರ್ಚ್ 06ರಂದು ಬೆಳಿಗ್ಗೆ 9ಕ್ಕೆ ಚಿತ್ರದುರ್ಗ ನಗರದ ಧವಳಗಿರಿ ಬಡವಾಣೆಯ ಕರ್ನಾಟಕ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಎನ್.ಬಿ.ಪ್ರಹ್ಲಾದ್ ಶಿಬಿರದ ನೇತೃತ್ವ ವಹಿಸಲಿದ್ದಾರೆ. ಈ ಶಿಬಿರದಲ್ಲಿ ಇತ್ತೀಚೆಗೆ ಸಂಪೂರ್ಣವಾಗಿ ಕಿವುಡುತನಕ್ಕೆ ಒಳಗಾಗಿರುವ 18 ವರ್ಷದಿಂದ 50 ವರ್ಷದೊಳಗಿನ ಬಡರೋಗಿಗಳಿಗೆ ಉಚಿತ ‘ಕಾಕ್ಲಿಯರ್ ಇಂಪ್ಲಾಂಟ್” ಅಳವಡಿಕೆ ಶಸ್ತ್ರ ಚಿಕಿತ್ಸೆ ಮತ್ತು ವಾಕ್ ಪುನಶ್ಚೇತನ ಮಾಡಲಾಗುತ್ತದೆ.
ಶಿಬಿರದಲ್ಲಿ ಕಿವಿ ಸೋರುವುದು, ಕಿವುಡುತನ, ಕಿವಿಯ ತೊಂದರೆಯಿಂದ ತಲೆ ಸುತ್ತುವುದು, ಹೊರ ಕಿವಿಯ ನ್ಯೂನತೆ, ಬೆಳವಣಿಗೆ ಇಲ್ಲದಿರುವುದು, ಮುಖದ ಲಕ್ವ, ವಯಸ್ಸಿಗೆ ತಕ್ಕಂತೆ ಮಾತು ಕಲಿಯದಿರುವುದು, ಕಿವಿನೋವು, ಕಿವಿಯಲ್ಲಿ ಅಹಿತಕರ  ಶಬ್ದ, ತೊದಲು ಮಾತು, ಹುಟ್ಟಿನಿಂದ ಕಿವುಡುತನ, ಲಕ್ವದಿಂದ ಮಾತು ನಿಂತಿರುವುದು ಇಂತಹ ತೊಂದರೆಯುಳ್ಳ ರೋಗಿಗಳು ಪಾಲ್ಗೊಳ್ಳಬಹುದು.
ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ 9483519988ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಕಿವಿ, ಮೂಗು ಮತ್ತು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಪ್ರಹ್ಲಾದ್ ಎನ್.ಬಿ. ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours