46 ವರ್ಷಗಳ ನಂತರ ಮ್ಯಾಸಬೇಡರ ಆರಾಧ್ಯ ದೈವ ಕಂಪರಂಗಸ್ವಾಮಿ ಹಂಪಿಯ ಚಕ್ರತೀರ್ಥದ ಗಂಗಾಪೂಜೆಗೆ

 

 

 

 

ಮೊಳಕಾಲ್ಮುರು: ತಾಲೂಕಿನ‌ ಪ್ರಸಿದ್ದ ಮ್ಯಾಸಬೇಡ ಜನಾಂಗದ ಆರಾಧ್ಯ ದೈವವಾದ ಚಿಕ್ಕುಂತಿ ಕಂಪಳರಂಗ ಸ್ವಾಮಿ 46 ವರ್ಷಗಳ ನಂತರ  ಗಂಗಾಪೂಜೆಯು ಮಾರ್ಚ್ 2 ರಿಂದ 5 ದಿನಗಳ ಕಾಲ ನಡೆಯಲಿದೆ.

ವಿಜಯನಗರ ಜಿಲ್ಲೆಯ ಹಂಪಿ ಹೊಳೆಯ ಚಕ್ರತೀರ್ಥದಲ್ಲಿ ಗಂಗಾಪೂಜೆ ನಡೆಯಲಿದೆ. ಇದರ ಅಂಗವಾಗಿ ಬೆಳಗ್ಗೆ ಚಿಕ್ಕುಂತಿಯಿಂದ ದೇವರುಗಳು ಮತ್ತು ದೇವರ ಎತ್ತುಗಳು ಮೆರವಣಿಗೆಯಲ್ಲಿ ಪಾದಯಾತ್ರೆ ಮೂಲಕ ಹಂಪಿಗೆ ಹೊರಡಲಿದೆ. 3 ಮಯ 4 ರಂದು ಕೂಡ್ಲಿಗಿಯ ಮರಿಯಮ್ಮನಹಳ್ಳಿ ಮಾರ್ಗವಾಗಿ ಹಂಪಗೆ ಪಾದಯಾತ್ರೆ ತಲುಪಲಿದೆ.

 

 

ಪಾದಯಾತ್ರೆ ಮಾರ್ಚ್ 5 ರಂದು ಬೆಳಗ್ಗೆ ಕಮಲಪುರದಿಂದ ಹೊರಟು ಮಧ್ಯಾಹ್ನ 12 ಗಂಟೆಗೆ ಹಂಪಿಹೊಳೆ ಚಕ್ರತೀರ್ಥ ಸೇರಿ ಗಂಗಾಪೂಜೆ ಆರಂಭವಾಗಲಿದೆ. ನಂತರ ವಿರೂಪಾಕ್ಷ ದೇವಸ್ಥಾನ ರಾಜಬೀದಿಯಲ್ಲಿ ದೇವರ ಎತ್ತುಗಳು ಮೆರವಣಿಗೆ ಮಾಡಲಾಗುವುದು.ಕಂಬಳಿ ಹಾಸುವುದು , ಕಾಸು, ಮಣೇವು ಅರ್ಪಣೆ, ನಂತರ ಹಂಪಿ ಹೇಮಕೂಟದ ಬಂಡೆ ಮೇಲೆ ತಂಗಲಾಗುವುದು.

ಮಾರ್ಚ 6 ರಿಂದ 10 ರ ವರೆಗೆ ದೇವರುಗಳನ್ನು ಗುಡಿದುಂಬಿಸುವ ಕಾರ್ಯಕ್ರಮ ನಡೆಯಲಿದೆ‌ ಇದಕ್ಕೆ ಸಚಿವರಾದ ಬಿ.ಶ್ರೀರಾಮುಲು ಅವರ ಸಹಕಾರದೊಂದಿಗೆ ದೇವರು ಗಂಗಾಪೂಜೆಗೆ ಹೋಗುತ್ತಿರುವುದು ಜನರಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

[t4b-ticker]

You May Also Like

More From Author

+ There are no comments

Add yours