ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಅಭಿಯಾನ

 

 

 

 

ಚಿತ್ರದುರ್ಗ, ಫೆಬ್ರವರಿ 09:
30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಪ್ರತಿ ಐದು ವರ್ಷಕ್ಕೊಮ್ಮೆ ವೈದ್ಯರಲ್ಲಿ ತಪಾಸಣೆಗೊಳಪಡುವುದು ಒಳಿತು ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್ ಹೇಳಿದರು
ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ ಗ್ರಾಮದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದೊತ್ತಡ, ಪಾಶ್ರ್ವವಾಯು, ಕುರಿತು ಗ್ರಾಮದ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಮುಂದುವರಿದಂತೆ ಯುವಕರು, ಗೃಹಿಣಿಯರ ಕಾರ್ಯ ಚಟುವಟಿಕೆಗಳು  ಕಡಿಮೆಯಾಗುತ್ತಾ ಬಂದಿದ್ದು, ಆರೋಗ್ಯ ಹದಗೆಡಲು ನಾವೇ ಕಾರಣೀಭೂತರಾಗಿದ್ದೇವೆ. ರಾಸಾಯನಿಕ ಬಳಕೆ ಮಾಡಿದ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯ ಹದಗೆಡುತ್ತಿತ್ತು.
ಇದರ ಕಡೆ ಹೆಚ್ಚು ಗಮನ ಹರಿಸಬೇಕೆಂದು ಮಾಹಿತಿ ನೀಡಿದರು.
ಮಹಾಮಾರಿ ಕೋವಿಡ್ ಸೋಂಕಿನ  ಕಡೆಗೆ ಗಮನ ಕೊಡುತ್ತಾ, ಸಾರ್ವಜನಿಕರು ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಪರೀಕ್ಷೆಗೊಳಪಟ್ಟು ಸೂಕ್ಷ್ಮ ಹಂತದಲ್ಲಿ ಚಿಕಿತ್ಸೆ ಪಡೆದಲ್ಲಿ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದರು.
ಹೆಣ್ಣು ಮಕ್ಕಳಲ್ಲಿ ಸ್ತನಗಳ ಚರ್ಮ ಸುಕ್ಕಾಗಿರುವುದು, ಸ್ತನಗಳಲ್ಲಿ ಕುಳಿ ಬಿದ್ದಿರುವುದು, ಕಂಕುಳಲ್ಲಿ ಸದಾ ನೋವು, ಸ್ತನಗಳ ಗಾತ್ರ ಬದಲಾವಣೆ ಕಂಡುಬಂದಲ್ಲಿ ತಜ್ಞ ವೈದ್ಯರಲ್ಲಿ ಪರೀಕ್ಷೆ ಮತ್ತು ಸೂಕ್ಷ್ಮ ಹಂತದಲ್ಲಿ ಚಿಕಿತ್ಸೆ ಪಡೆದು ಶಿಸ್ತುಬದ್ಧ ಜೀವನ ಶೈಲಿಯಿಂದ ಸಂಪೂರ್ಣವಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಆಧುನಿಕ ದಿನಮಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿ ಆಹಾರೋತ್ಪಾದನೆ ಮಾಡಿ, ರಾಸಾಯನಿಕ ಸಿಂಪಡಿಸಿದ ಹಣ್ಣು-ಹಂಪಲುಗಳು, ಆಹಾರ ಪದಾರ್ಥಗಳ ಬಳಕೆ ಮಾಡಿ, ರೆಡಿಮೇಡ್ ಪದಾರ್ಥಗಳನ್ನು ನಿತ್ಯ ಬಳಸುತ್ತಾ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ, ಆದಷ್ಟು ಸಾವಯವ ಗೊಬ್ಬರ ಬಳಸಿ ಆಹಾರೋತ್ಪಾದನೆ ಮಾಡುತ್ತಾ ನಿತ್ಯ 30 ನಿಮಿಷದ ನಿಯಮಿತ ನಡಿಗೆ, ವ್ಯಾಯಾಮ, ಸಣ್ಣಪುಟ್ಟ ಮನೆಯ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿ, ಶುದ್ಧ ಕುಡಿಯುವ ನೀರು, ಮೊಳಕೆ ಕಾಳು, ನಾರಿನಂಶ ಇರುವ ತರಕಾರಿಗಳ ಬಳಕೆ ಮಾಡುತ್ತಾ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದರು.
ನಿತ್ಯ ಜೀವನ ಶೈಲಿ ಬದಲಾವಣೆ ಮಾಡುತ್ತಾ ತಂಬಾಕು ಸೇವನೆಗೆ ಕಡಿವಾಣ ಹಾಕಿ ಪರಿಸರ ಸ್ವಚ್ಛತೆಯನ್ನು ಕಾಪಾಡಿಕೊಂಡು ಉತ್ತಮ ಆಹಾರಾಭ್ಯಾಸಗಳಿಂದ ಆಯಸ್ಸನ್ನು  ವೃದ್ಧಿಸಿಕೊಳ್ಳಬಹುದು ಎಂದರು.
ಸಮುದಾಯ ಆರೋಗ್ಯಾಧಿಕಾರಿ ನಯನ, ಆಶಾ ಬೋಧಕರು ಪದ್ಮಜ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಪರ್ವೀನ್. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ರೇಣುಕಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ತಿಮ್ಮಣ್ಣ, ಗ್ರಾಮದ ಹಿರಿಯರು, ಆಶಾ ಕಾರ್ಯಕರ್ತರು ಇದ್ರು್.

 

 

[t4b-ticker]

You May Also Like

More From Author

+ There are no comments

Add yours