ಮಾದಿಗ ಸಮುದಾಯದ ವಿವಿಧ ಬೇಡಿಕೆಗೆ ಸಿಎಂಗೆ ಮನವಿ.

 

 

 

 

ಬೆಂಗಳೂರು;ಫೆ.05
ಮಾದಿಗ ಸಮುದಾಯದ ವಿವಿಧ
ಮಠಾಧೀಶರುಗಳು ಮಾಜಿ ಸಚಿವ
ಎಚ್.ಆಂಜನೇಯರವರ ನೇತೃತ್ವದಲ್ಲಿ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಅವರನ್ನು ಭೇಟಿ ಮಾಡಿ ಸಮುದಾಯದ
ವಿವಿಧ ಸಮಸ್ಯೆ ಸವಾಲುಗಳ ಕುರಿತು
ಚರ್ಚೆ ನಡೆಸಿದರು.
ಸಿಎಂರ ಗೃಹ ಕಚೇರಿ ಕೃಷ್ಣದಲ್ಲಿ
ಭೇಟಿ ಮಾಡಿದ ಸಚಿವರು ಹಾಗೂ
ಮಠಾಧೀಶರು ವಿವಿಧ
ಬೇಡಿಕೆಗಳನ್ನು ಈಡೆರಿಸುವಂತೆ
ಕೇಳಿಕೊಂಡು ಮನವಿ ಪತ್ರ
ಸಲ್ಲಿಸಿದರು.ಮುಖ್ಯಮಂತ್ರಿ ಬಸವರಾಜ್
ಬೊಮ್ಮಾಯಿರವರು ಮಾಜಿ ಸಚಿವರ
ನೇತೃತ್ವದ ಮಠಾಧೀಶ್ವರ
ನಿಯೋಗದ
ಕುಂದುಕೊರತೆಗಳನ್ನು ಆಲಿಸಿ
ಬೇಡಿಕೆಗಳನ್ನು ಈಡೇರಿಸುವುದಾಗಿ
ಭರವಸೆ ನೀಡಿದರು.
ನಿಯೋಗದಲ್ಲಿ ಸಮಾಜ ಕಲ್ಯಾಣ ಇಲಾಖೆ
ಖಾತೆಯ ಮಾಜಿ ಸಚಿವ ಎಚ್.ಆಂಜನೇಯ,
ಹಂಪಿಯ ಮಾತಂಗ ಮಠದ
ಪೂರ್ಣಾನಂದ ಭಾರತೀ ಸ್ವಾಮೀಜಿ,
ಕೋಡಿಹಳ್ಳಿಯ ಆದಿಜಾಂಬವ ಬೃಹನ್ಮಠದ
ಷಡಕ್ಷರ ಮುನಿ ಸ್ವಾಮೀಜಿ,
ಗುರುಪ್ರಕಾಶ ಮುನಿ ಸ್ವಾಮೀಜಿ,
ಮಠದ ಪ್ರಧಾನ ಕಾರ್ಯದರ್ಶಿ
ಆರ್.ಸಂತೋಷ್, ಟ್ರಸ್ಟಿಗಳಾದ
ನಾಗಕುಮಾರ್, ಚಿದಾನಂದಸ್ವಾಮಿ,
ರಂಗಸ್ವಾಮಿ, ಹಾಗೂ ಬೆಂಗಳೂರಿನಸಮುದಾಯದ ಮುಖಂಡ
ದೊಡ್ಡಗುಬ್ಬಿ ಸತೀಶ್ ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours