ಚಿತ್ರದುರ್ಗ, ಫೆಬ್ರವರಿ04:
ಚಿತ್ರದುರ್ಗ ನಗರ ಉಪವಿಭಾಗದ ಘಟಕ-1ರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸ್ಥಳಾಂತರಿಸುವುದರಿಂದ ಫೆಬ್ರವರಿ 6ರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿತ್ರದುರ್ಗ ನಗರದ ಜೆ.ಸಿ.ಆರ್ ಎಫ್-12 ಮಾರ್ಗದ ಜೆ.ಸಿ.ಆರ್ 1ನೇ ಕ್ರಾಸ್ನಿಂದ 7ನೇ ಕ್ರಾಸ್, ವಿ.ಪಿ.ಬಡಾವಣೆ, ಬಡಾಮಕಾನ್, ಹೊರಪೇಟೆ, ಆಜಾದ್ ನಗರ, ಪ್ರಸನ್ನ ಟಾಕೀಸ್ ಸುತ್ತಮುತ್ತ, ರಾಂದಾಸ್ ಕಾಂಪೌಂಡ್, ಗೋಪಲಪುರ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ತಿಳಿಸಿದ್ದಾರೆ.
[t4b-ticker]
+ There are no comments
Add yours