ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯ ನೀಡಿದರೆ ಉತ್ತಮ ಫಲಿತಾಂಶ ಸಾಧ್ಯ: ತಹಶೀಲ್ದಾರ್ ಎನ್.ರಘುಮೂರ್ತಿ.

 

 

 

 

ನಾಯಕನಹಟ್ಟಿ:  ಸರ್ಕಾರಿ ಶಾಲೆ ಮತ್ತು ಕಛೇರಿಗಳು  ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಉತ್ತಮ ನಿರ್ವಹಣೆ ಮಾಡಿದಾಗ  ಸರ್ಕಾರ ಇಲಾಖೆಗಳ ವಾತವರಣ ಉತ್ತಮವಾಗುತ್ತದೆ ಎಂದು ತಹಶೀಲ್ದಾರ್ ಏನ್. ರಘುಮೂರ್ತಿ ಹೇಳಿದರು

ತಾಲೂಕಿಮ‌ ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯಲ್ಲಿ   ನೂತನವಾಗಿ ನಿರ್ಮಾಣ ಮಾಡುತ್ತಿರುವ ಶೌಚಾಲಯ ಮತ್ತು ಸಾಂಸ್ಕೃತಿಕ ಭವನದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಖಾಸಗಿ ಶಾಲೆಗಳ ಜೊತೆಗೆ ಸರ್ಕಾರಿ ಶಾಲೆಗಳು ಕೂಡ ಮೂಲಭೂತ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ  ಗುಣಮಟ್ಟದ ಶಿಕ್ಷಣವನ್ನು ನೀಡಿದಾಗ ದೇಶದ ಅಭಿವೃದ್ಧಿಗೆ ಪೂರಕವಾದಂಥ  ವಾತಾವರಣ ನಿರ್ಮಾಣವಾಗುವುದು. ಸಾರಿಗೆ ಸಚಿವರಾದ ಶ್ರೀರಾಮುಲು ಅವರ ಆಶಯದಂತೆ ಈ ಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತವಾದ  4 ಗುಣಮಟ್ಟದ ಶಾಲಾ ಕಟ್ಟಡಗಳು ಹಾಗೂ ಈ ಶಾಲೆಗಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ವ್ಯವಸ್ಥೆಯನ್ನು ಅತಿ ಶೀಘ್ರದಲ್ಲಿ  ಸಚಿವರು ಕ್ಷೇತ್ರಕ್ಕೆ ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದರು.

 

 

ವಿದ್ಯಾರ್ಥಿಗಳು ಉತ್ತಮ‌ ಶಿಕ್ಷಣದ   ‌ ಪ್ರಯೋಜನ ಪಡೆದು ಶೈಕ್ಷಣಿಕ ಪ್ರಗತಿ‌ ಸಾಧಿಸಬೇಕು. ಶಾಲೆಗೆ ಇಷ್ಟೊಂದು ಮೂಲಭೂತ ಸೌಕರ್ಯವನ್ನು ಒದಗಿಸಿದ ಎಂಐಟಿ ಸ್ವಾಮಿಯವರು ಶಿಕ್ಷಣದ ಬಗ್ಗೆ ಇವರಿಗಿರುವ ಅಭಿರುಚಿ ಹಾಗೂ ಬದ್ಧತೆಯನ್ನು  ಶಿಕ್ಷಣಕ್ಕೆ‌ಸಂಬಂಧಿಸಿದ‌ ಕಾರ್ಯಗಳೇ ಸಾಕ್ಷಿಯಾಗಿದೆ‌ ಎಂದು ಹೇಳಿದರು.

ಚಳ್ಳಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ ಇಷ್ಟೊಂದು ಮೂಲಭೂತ ಸೌಕರ್ಯ ಕಲ್ಪಿಸಿರುವುದು ವಿದ್ಯಾಸಂಸ್ಥೆಯ ಔದಾರ್ಯವಾಗಿದೆ. ಈಗಾಗಲೇ ತಾಲೂಕಿನಲ್ಲಿ ಶೇಕಡ ನೂರರಷ್ಟು ಫಲಿತಾಂಶವನ್ನು ಸಾಧಿಸಲಾಗಿದೆ ಮುಂದಿನ‌ ದಿನಗಳಲ್ಲಿ ಫಲಿತಾಂಶ ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು

ಸಂಸ್ಥೆಯ ಅಧ್ಯಕ್ಷರಾದಂತಹ ತಿಪ್ಪೇಸ್ವಾಮಿ,ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ, ಪ್ರಾಂಶುಪಾಲರಾದ ಶ್ರೀನಿವಾಸ್,ಎಚ್ಎಂಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ ಫಣೀಂದ್ರಪ್ಪ, ಶಾಲೆಯ ಶಿಕ್ಷಕರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರು.

[t4b-ticker]

You May Also Like

More From Author

+ There are no comments

Add yours