ಶೀಘ್ರ ಸಚಿವ ಸಂಪುಟ ಪುನರ್ ರಚನೆ ಆದರೆ ಒಳಿತು: ಶಾಸಕ ರೇಣುಕಾಚಾರ್ಯ ಮತ್ತೆ ಗುಡುಗು

 

 

 

 

ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಸಿಎಂ ಆಪ್ತ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿಕೆ.

ಶೀಘ್ರ ಸಚಿವ ಸಂಪುಟ ಪುನರ್ ರಚನೆ ಆದರೆ ಒಳಿತು.

ನನ್ನೊಬ್ಬನ ಭಾವನೆ ಅಲ್ಲ, ಅನೇಕ ಹಿರಿಯ ಶಾಸಕರು ಹೇಳಿದ್ದಾರೆ.

ನನ್ನ ಜತೆ ಮಾತಾಡಿದ ಶಾಸಕರು ಈ ಬಗ್ಗೆ ಮಾತಾಡಿದ್ದಾರೆ.

ಹೈಕಮಾಂಡ್, ಸಿಎಂ, ಬಿಎಸ್ ವೈ, ಕಟೀಲ್ ಬಳಿ ನಾನು ಹೇಳಿದ್ದೇನೆ.

ಬೊಮ್ಮಾಯಿ 6ತಿಂಗಳ ಸಿಎಂ ಎಂದ ಸತೀಶ ಜಾರಕಿಹೊಳಿಗೆ ಟಾಂಗ್.

ಸತೀಶ್ ಜಾರಕಿಹೊಳಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಈ ಅವಧಿಗೆ ಬೊಮ್ಮಾಯಿ ಅವರೇ ಸಿಎಂ ಎಂಬ ತೀರ್ಮಾನ ಆಗಿದೆ.

ಸಚಿವರ ವಿರುದ್ಧ ಬಳ್ಳಾರಿ ಶಾಸಕ ಸೋಮಶೇಖರ್ ಕಿಡಿ ವಿಚಾರ.

ಈಗಾಗಲೇ ಸಚಿವರ ನಿರ್ಲಕ್ಷದ ಬಗ್ಗೆ ನಾನು ಹೇಳಿದ್ದೇನೆ.

ಯಾರ ಮೇಲೂ ನನಗೆ ಒಯಕ್ತಿಕ ದ್ವೇಷ ಇಲ್ಲ.

ಸರ್ಕಾರ, ಸಂಘಟನೆಗೆ ಒಳ್ಳೆಯ ಹೆಸರು ಬರಬೇಕು.

 

 

ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೇನೆ.

ನಮ್ಮ ವಿರುದ್ಧ ಕೆಲ ಸಚಿವರು ಮಾತಾಡುತ್ತಾರೆ.

ಸಚಿವ ಸ್ಥಾನ ತ್ಯಾಗ ಮಾಡಲಿ, ಬಿಜೆಪಿ ಯಾರ ಸ್ವಂತ ಆಸ್ತಿ ಅಲ್ಲ.

ಸರ್ಕಾರ ಬಂದಾಗೆಲ್ಲ ಇವರೇ ಸಚಿವರು ಆಗಬೇಕೇ?.

ಕೆಲವರು ನಮ್ಮಿಂದಲೇ ಸರ್ಕಾರ ಎಂದು ಭಾವಿಸಿದ್ದಾರೆ.

ಅವರ ಗತ್ತು ಗಾಂಭಿರ್ಯ ನೋಡಿದರೆ ಹಾಗನ್ನಿಸುತ್ತದೆ.

ನಾನು ಯಾವುದೇ ಸಚಿವರ ಹೆಸರು ಮಾಧ್ಯಮದ ಬಳಿ ಹೇಳಲ್ಲ.

ನನ್ನ ಕರೆ ಎಲ್ಲಾ ಸಚಿವರು ಸ್ವೀಕರಿಸುತ್ತಾರೆ, ಮಾಡಲೇಬೇಕು.

ನೊಂದ ಶಾಸಕರ ಧ್ವನಿಯಾಗಿ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ.

ಅಲಕ್ಷತನ, ಸೋಮಾರಿತನ ತೋರುವ ಸಚಿವರ ಬಗ್ಗೆ ನಾಯಕರಿಗೆ ತಿಳಿಸಿದ್ದೇನೆ.

ಕೆಲವು ಸಚಿವರು ದುರಹಂಕಾರ ತೋರುತ್ತಿದ್ದು ಶಾಸಕರಿಗೆ ನೋವಿದೆ.

ನಾಲ್ಕು ಸ್ಥಾನ ಖಾಲಿ ಇವೆ, ಆರೇಳು ಸಚಿವರಿಗೆ ಕೈಬಿಡಬೇಕು.

ಹೊಸಬರಿಗೆ ಆದ್ಯತೆ ನೀಡುವ ಮೂಲಕ ಪಕ್ಷ ಬಲಪಡಿಬೇಕು.

[t4b-ticker]

You May Also Like

More From Author

+ There are no comments

Add yours