ಬಗರ್ ಹುಕುಂ ಅರ್ಜಿಗಳನ್ನು ಪೂರ್ಣವಾಗಿ ಪರಿಶೀಲಿಸಿ ಅಂತಿಮ ತಿರ್ಮಾನ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ ಜ.28
ಯಾವ ರೈತರಿಗೆ ಅನ್ಯಾಯವಾಗಬಾರದು, ಹತ್ತಾರು ವರ್ಷ ಉಳುಮೆ ಮಾಡಿಕೊಂಡು ಬಂದು ಹಕ್ಕು ಪತ್ರಗಳಿಗೆ ಅರ್ಜಿ ಹಾಕಿದ್ದು ಸಂಪೂರ್ಣ ವರದಿಗಳ ಪರಿಶೀಲನೆ ನಡೆಸಿ ಅಂತಿಮ ವರದಿಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಗರ್ ಹುಕುಂ ಸಾಗುವಳಿ ಸಕ್ರೀಮಿಕರಣ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರೈತರು ಹಲವಾರು ವರ್ಷಗಳಿಂದ ಉಳುಮೆಯನ್ನು ಮಾಡಿಕೊಂಡು ಬಂದಿದ್ದಾರೆ, ಹಕ್ಕು ಪತ್ರಗಳಿಗಾಗಿ ಅರ್ಜಿ ಸಹ ಹಾಕಿದ್ದಾರೆ. ಗ್ರಾಮ ಲೆಕ್ಕಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ನೀಡುವಾಗ ಸರಿಯಾದ ರೀತಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಆ ರೈತರಿಗೆ ಭೂಮಿ ಇದೆಯೇ ಎಂಬುದನ್ನು ದೃಢಪಡಿಸಿಕೊಂಡು
ಬಡವರಿಗೆ ಅನುಕೂಲವಾಗುವಂತೆ ವರದಿಯನ್ನು ನೀಡುವಂತೆ ಸೂಚಿಸಿದರು.

 

 

ಇಂದು ಬಗರ್ ಹುಕುಂ ಸಭೆಗೆ ಗ್ರಾಮೀಣ ಭಾಗದಲ್ಲಿ ಭೂ ಉಳುಮೆ ಮಾಡಿದ ದಂಡು ಹರಿದು ಬಂದಿತ್ತು ಇವರನ್ನು ತೋರಿಸಿದ ಶಾಸಕರು ಇವರೆಲ್ಲಾ ಬಡವರಾಗಿದ್ದಾರೆ. ಹಲವಾರು ವರ್ಷಗಳಿಂದ ಸರ್ಕಾರ ಭೂಮಿಯನ್ನು ಉಳಿಮೆ ಮಾಡಿಕೊಂಡು ಬಂದಿದ್ದಾರೆ. ಸರ್ಕಾರ ಈಗ ಇವರಿಗೆ ಭೂಮಿಯನ್ನು ನೀಡಲು ಅರ್ಜಿಯನ್ನು ಕರೆದಿದೆ. ಅವರ ದಾಖಲಾತಿಯನ್ನು ನೋಡಿ ಸರಿಯಾದ ರೀತಿಯಲ್ಲಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ. ಸಣ್ಣ-ಪುಟ್ಟ ತಪ್ಪಿದ್ದರು ಸಹಾ ಅವುಗಳನ್ನು ಪರಿಗಣಿಸದೇ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ವರದಿಯನ್ನು ನೀಡಿ ಏನಾದರೂ ಆದರೆ ನಾನು ಇದ್ದೇನೆ ಎಂದು ಹೇಳಿದರು.
ಅಕ್ರಮ ಸಕ್ರಮಕ್ಕೆ ಹಲವಾರು ಅರ್ಜಿಗಳು ಬಂದಿದೆ. ಇದರ ಬಗ್ಗೆ ಈಗ ಪರೀಶಿಲನೆಯನ್ನು ಮಾಡಲಾಗುತ್ತಿದೆ. ಅದೇ ರೀತಿ ಹಲವಾರು ಬಾರಿ ಸಭೆಯನ್ನು ಮಾಡುವುದರ ಮೂಲಕ ಕೊನೆಗೆ ಅಂತಿಮವಾಗಿ ತೀರ್ಮಾನ ಮಾಡಲಾಗುವುದು. ಸಿಂಗಾಪುರ ಕಾವಲ್‌ನಲ್ಲಿ ೨೫೦ ಎಕರೆ ಬಗ್ಗೆ ಉನ್ನತ ನ್ಯಾಯಾಲಯಕ್ಕೂ ಸಹಾ ಹೋಗಲಾಗಿದೆ ಅಲ್ಲಿ ಸರ್ಕಾರದಂತೆ ಆಗಿದೆ, ಮುಂದಿನ ಬಾರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುವುದು. ಸರ್ಕಾರದ ಮಟ್ಟದಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ಪಡೆಯಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ ಅದು ಶೀಘ್ರದಲ್ಲಿ ಸರ್ಕಾರದ ಆದೇಶವಾಗಿ ಬರಲಿದೆ ಎಂದರು.
ಆ ಸಂದರ್ಭದಲ್ಲಿ ಬೇರೆಯವರಿಗೆ ಸಹಾ ಭೂಮಿಯನ್ನು ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಚಿತ್ರದುರ್ಗ ಕಸಬಾದಲ್ಲಿ ಹಕ್ಕುಪತ್ರಗಳಿಗಾಗಿ ಬಂದ ಅರ್ಜಿಗಳಲ್ಲಿ 476 ಅರ್ಜಿಗಳು ತಿರಸ್ಕೃತಗೊಂಡಿದೆ. ಚಂದ್ರವಳ್ಳಿಯಲ್ಲಿಯೂ ನಗರಕ್ಕೆ ಹತ್ತಿರ ಇದೆ ಎಂದು 26 ಅರ್ಜಿಗಳು ತಿರಸ್ಕೃತಗೊಂಡಿದೆ. ಇದರ ಬಗ್ಗೆಯೂ ಸಹ ಮಾಹಿತಿ ಪಡೆದುಕೊಂಡು ಮುಂದೇ ಏನು ಮಾಡಬಹುದು ಎಂದು ಯೋಚಿಸುತ್ತೇನೆ. ತಿರಸ್ಕೃತ ಮತ್ತು ಬಿಟ್ಟು ಉಳಿದ ಭೂಮಿಯ ಸರ್ವೇ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭ ಮಾಡಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರವನ್ನು ನೀಡಬೇಕಿದೆ ಎಂದ ಶಾಸಕರು, ಹಿರೇಗುಂಟನೂರು ಹೋಬಳಿಯಲ್ಲಿ 947 ಅರ್ಜಿಗಳು ತಿರಸ್ಕೃತಗೊಂಡಿದ್ದು, 87 ಮಾತ್ರ ಅರ್ಹರಾಗಿದ್ದಾರೆ ಎಂದರು.

ಅಕ್ರಮ ಸಕ್ರಮದಲ್ಲಿ 25 ಸಾವಿರ ಅರ್ಜಿಗಳು ಬಂದಿದ್ದು ಇವರು ಕಳೆದ ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ತಾಲೂಕಿನಾದ್ಯಂತ ಸರ್ವೆ ಕಾರ್ಯವಾಗಬೇಕಿದೆ ಇದಕ್ಕಾಗಿ ಇಬ್ಬರು ಸರ್ವೆಯರನ್ನು ಕಳುಹಿಸುವಂತೆ ಕೇಳಲಾಗಿದೆ. ಇದು 6 ತಿಂಗಳ ಕಾಲ ನಡೆಯಲಿದೆ. ಚಿತ್ರದುರ್ಗ ವ್ಯಾಪ್ತಿಯನ್ನು ನಿಗದಿ ಮಾಡಬೇಕಿದೆ ಇದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಫ್ರವಾಗಿ ಸರ್ವೇ ಕಾರ್ಯ ಮುಗಿಸುವ ಮುಖಾಂತರ ಆಕ್ರಮ ಸಕ್ರಮ ಅರ್ಜಿ ವಿಲೇವಾರಿ ತುರ್ತು ಮುಗಿಸಿ ಎಲ್ಲಾರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಅಭಯ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಶ್ರೀಮತಿ ರೇಖಾ, ಮಂಜುನಾಥ್, ತಹಶೀಲ್ದಾರ್ ಸತ್ಯನಾರಾಯಣ, ಆರ್ ಐ. ಶರಣಪ್ಪ, ಶಿವಾನಂದ ವಿ.ಐಗಳಾದ ನರಸಿಂಹಮೂರ್ತಿ ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours