ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಜೊತೆಗೆ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಲು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಜೊತೆಗೆ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಲು ಶ್ರಮಿಸಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಬುರುಜನಹಟ್ಟಿ ಸರ್ಕಲ್ ನಲ್ಲಿರುವ ಸೇವಾ ಇಂಟಿಗ್ರೇಟೆಡ್ ಸೊಸೈಟಿಯಲ್ಲಿ ಶಾಸಕರ ಅನುದಾನ ಅಡಿಯಲ್ಲಿ ಡಿಎಂಎಫ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸೇವಾ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಹೊಲಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ದೃಷ್ಟಿಯಿಂದ ತರಬೇತಿ ಕೊಡಿಸಲಾಗುತ್ತಿದೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 12 ಗ್ರಾಮ ಪಂಚಾಯತಿಯಲ್ಲಿ ಪ್ರತಿ ಹಳ್ಳಿಗೆ ಒಬ್ಬರು ಅಥವಾ ಇಬ್ಬರು ಮಹಿಳೆಯಂತೆ ಆಯ್ಕೆ ಮಾಡಿ ಒಟ್ಟು 52 ಮಹಿಳೆಯರಿಗೆ 25 ಲಕ್ಷ ವೆಚ್ಚದಲ್ಲಿ ಹೊಲಿಗೆ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

 

 

ಗ್ರಾಮೀಣ ಭಾಗದಲ್ಲಿ ಪ್ರತಿ ಹಳ್ಳಿಯಲ್ಲಿ ಉತ್ತಮ ತರಬೇತಿ ಪಡೆದ ಒಬ್ಬ ಮಹಿಳೆ ಇದ್ದರೆ ಅದರಿಂದ ಕನಿಷ್ಠ ಒಂದು ಕುಟುಂಬ ಸುಲಲಿತವಾಗಿ ನಡೆಯುತ್ತಿದೆ. ಒಂದೆರಡು ಬಟ್ಟೆಗೆ ಹೊಲಿಯುವ ಬೆಲೆ ದುಬಾರಿಯಾಗಿದೆ. ಹಳ್ಳಿಗಳಲ್ಲಿ ಉತ್ತಮವಾಗಿ ಹೊಲಿಗೆ ಕೆಲಸ ಮಾಡಿದರೆ ಅಕ್ಕ ಪಕ್ಕದ ಹಳ್ಳಿಯ ಜನರು ಬಂದು ಹೋಗುತ್ತಾರೆ ಎಂದರು.

ಸರ್ಕಾರಿ ಕೆಲಸಗಳು ಎಲ್ಲಾರಿಗೂ ನೀಡಲು ಆಗುವುದಿಲ್ಲ. ಸ್ವಯಂ ಉದ್ಯೋಗಕ್ಕೆ ಎಲ್ಲಾರೂ ಮೊರೆ ಹೋಗಬೇಕಿದೆ.ಈ ತರಬೇತಿಯಿಂದ ಸರ್ಟಿಫಿಕೇಟ್ ಪಡೆದರೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಸಹ ಸಿಗುತ್ತದೆ. ಇದರಿಂದ ನೀವು ಮತ್ತೊಬ್ಬರಿಗೆ ಕೆಲಸ ಸಹ ಕೊಡಬಹುದು. ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಸಾಧನೆ ಸಹ ಮಾಡಬಹುದುದಾಗಿದೆ. 60 ದಿನದ ತರಬೇತಿಯಲ್ಲಿ ಊಟದ ವ್ಯವಸ್ಥೆ ಮಾಡಿದ್ದು ಪೂರ್ಣವಾದ ಟೂಲ್ ಕಿಟ್ ಸಹಿತ ಆಧುನಿಕ ತಂತ್ರಜ್ಞಾನದ ಮೋಟರ್ ಸ್ವಿವಿಂಗ್ ಮಿಷನ್ ಉಚಿತವಾಗಿ ನೀಡಲಾಗುತ್ತಿದ್ದು ಎಲ್ಲಾರೂ ಸಹ ಇದನ್ನು ಸದ್ಬಳಕ್ಕೆ ಮಾಡಿಕೊಳ್ಳಬೇಕು. ಶ್ರದ್ಧೆಯಿಂದ ತರಬೇತಿ ಪಡೆದು ನುರಿತ ಟೈಲರ್ ರೀತಿಯಲ್ಲಿ ಎಲ್ಲಾರೂ ತರಬೇತಿ‌ ಮುಗಿಸಿ ಹೊರ ಬನ್ನಿ ಎಂದು ಶುಭ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಕೆ.ರಾಜನಾಯ್ಕ ಮಾತನಾಡಿ ಮಹಿಳೆ ಅಬಲೆ ಅಲ್ಲ ಸಬಲೆ ಮಾಡುವ ಕಡೆ ಕಾರ್ಯಕ್ರಮ ಮಾಡಲಾಗುತ್ತಿದೆ. ಶಾಸಕರು ಮಹಿಳೆಯರಿಗೆ ಹೊಲಿಗೆ ತರಬೇತಿ ವಿಶೇಷ ಕಾರ್ಯಕ್ರಮಕ್ಕೆ ಹಣ ನೀಡಿದ್ದರಿಂದ ಒಟ್ಟಿಗೆ ನಾವು 52 ಮಹಿಳೆಯರಿಗೆ ತರಬೇತಿ‌ ನೀಡುತ್ತಿದ್ದೇವೆ. ತರಬೇತಿ , ಪ್ರಮಾಣ ಪತ್ರ, ಮೋಟರ್ ಸ್ವಿವಿಂಗ್ ಮಿಷನ್ ‌ ನೀಡಲಾಗುತ್ತಿದೆ. ಉಚಿತ ಉದ್ಯೋಗ ತರಬೇತಿ ಪಡೆದು ಸ್ವಯಂ ಉದ್ಯೋಗಕ್ಕೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ, ಸೇವಾ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಸೊಸೈಟಿ ಕಾರ್ಯದರ್ಶಿ ಜಿ.ಪಾಂಡುರಂಗ,ಸ್ಥಳೀಯ ಮುಖಂಡರಾದ ಶಂಕರ್ , ರವಿ ಇದ್ದರು.

[t4b-ticker]

You May Also Like

More From Author

+ There are no comments

Add yours