ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರಿ, ಕಾಲೇಜಿಗೆ ಬೇಕಾದ ಎಲ್ಲಾ ಸೌಲಭ್ಯ ಕೊಡಿಸುವ ಜವಾಬ್ದಾರಿ ನನ್ನದು ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ನಿಮ್ಮದು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರಿ, ಕಾಲೇಜಿಗೆ ಬೇಕಾದ ಎಲ್ಲಾ ಸೌಲಭ್ಯ ಕೊಡಿಸುವ ಜವಾಬ್ದಾರಿ ನನ್ನದು ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ನಿಮ್ಮದು ಎಂದು ಪ್ರಾಂಶುಪಾಲರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಯ ನೀಡಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ “ಕಾಲೇಜು ಅಭಿವೃದ್ಧಿ ಸಮಿತಿ ಸಭೆ” ಯಲ್ಲಿ ಮಾತನಾಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಬಾಲಕರ ಕಾಲೇಜು ಮಧ್ಯದಲ್ಲಿ ನೂತನ ಕಾಲೇಜು ನಿರ್ಮಾಣಕ್ಕೆ 3 ಎಕರೆ ಜಾಗ ಮಂಜೂರು ಮಾಡಿಸಿ ಕಾಲೇಜಿನ ಹೆಸರಿಗೆ ನೊಂದಣಿ ಮಾಡಲಾಗಿದೆ. ಕಾಲೇಜು ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮತ್ತು ಉನ್ನತ ಶಿಕ್ಷಣ ಸಚಿವರಿಗೆ 25 ಕೋಟಿ ಹಣ ಬಿಡುಗಡೆ ಮಾಡಲು ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಸಚಿವರು ಸಹ ಭರವಸೆ ನೀಡಿದ್ದು ಸದ್ಯದಲ್ಲಿ ಅಥವಾ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡುತ್ತಾರೆ ಎಂದರು.
ಸರ್ಕಾರಿ ಕಲಾ ಕಾಲೇಜಿನಲ್ಲಿ 9 ಕೊಠಡಿ ತರಗತಿ ನಡೆಸಲು ಅವಕಾಶ ಮಾಡಿದ್ದು, ಹೊಸ ಡೆಸ್ಕ್ ಖರೀದಿಗೆ 25 ಲಕ್ಷ ಹಣ ನೀಡಲಾಗಿದ್ದು 12.5 ಲಕ್ಷ ಬಿಡುಗಡೆಗೊಳಿಸಿದ್ದು ಡೆಸ್ಕ್ ಖರೀದಿ ಮಾಡಿಲಾಗಿದೆ. ಕಾಲೇಜಿನಲ್ಲಿ ಹೊಸ ಕೋರ್ಸ್ ಮಾಡುವುದಕ್ಕೆ ಮುಂದಾಗಿ ಅಗತ್ಯತೆಗಳನ್ನು ಪೂರೈಸುತ್ತೇನೆ. ಮುಂದಿನ ವರ್ಷ ಬಿಎಸ್ಸಿ ದಾಖಲಾತಿಗೆ ನೀವು ಪ್ರಸ್ತಾವನೆ ಸಲ್ಲಿಸಿ ತರಗತಿ ದಾಖಲಾತಿ ಆರಂಭಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಬಡ ಮಕ್ಕಳು ಖಾಸಗಿ ಕಾಲೇಜಿಗೆ ಲಕ್ಷಾಂತರ ಹಣ ಕಟ್ಟಿ ಬಿಎಸ್ಸಿಗೆ ಹೋಗುವ ಪರಿಸ್ಥಿತಿ ಇಲ್ಲ. ಗ್ರಾಮೀಣ ಭಾಗದಲ್ಲಿ ಮಕ್ಕಳು ಹಣ ಕಟ್ಟಲು ಆಗದೆ ಬಿಎ ಸೇರುತ್ತಾರೆ. ಬಿಎಸ್ಸಿ, ಕಂಪ್ಯೂಟರ್ ಸೈ‌ನ್ಸ್ ಆರಂಭಿಸಿದರೆ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ. ಕೊಠಡಿಗಳ ಸಮಸ್ಯೆ ಬಗೆಹರಿಸುತ್ತೇನೆ. ಒಂದು ವೇಳೆ ವಿಜ್ಞಾನ ಕಾಲೇಜಿನಲ್ಲಿ ಕೊಠಡಿ ಇದ್ದರೆ ಅಲ್ಲಿ ಅವಕಾಶ ಮಾಡಿಕೊಡುತ್ತೇನೆ ಎಂದರು. ಮಕ್ಕಳಿಗೆ ಕ್ರೀಡಾ ಸ್ವರ್ಧೆ, ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸಿ ಎಂದು ಪ್ರಾಂಶುಪಾಲರಿಗೆ ಸೂಚಿಸಿದರು. ಮಕ್ಕಳನ್ನು ಶಿಕ್ಷಣ ಜೊತೆಗೆ ಮೈದಾನಕ್ಕೆ ಇಳಿಸುವ ಕೆಲಸ ಆಗಲಿ. ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಶಿಕ್ಷಣಕ್ಕೆ ಒತ್ತು ಕೊಡಲಾಗುವುದು ಎಂದು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಾವಿತ್ರಿ ಬಾ ಪುಲೆ ಅವರ ಹೆಸರಿಡಲು ಎಲ್ಲರೂ ತಿಳಿಸಿದ್ದು ಅದಕ್ಕೆ ಸಭೆಯ ಮುಖಾಂತರ ಸರ್ಕಾರಕ್ಕೆ ಕಳಿಸಕೊಡಲಾಗುವುದು ಎಂದರು.

 

 

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಚನ್ನಕೇಶವ ಮಾತನಾಡಿ ಮಹಿಳಾ ಕಾಲೇಜು ಆರಂಭದಲ್ಲಿ ಕೇವಲ 60 ವಿದ್ಯಾರ್ಥಿಗಳಿಂದ ಆರಂಭವಾಗಿ ಇಂದು 742 ವಿದ್ಯಾರ್ಥಿಗಳು ಇದ್ದಾರೆ. ಕಾಲೇಜು ಸಮಸ್ಯೆ ಏನೇ ಇದ್ದರು ನಾನು ಬಗೆಹರಿಸುತ್ತೇನೆ. ದಾಖಲಾತಿ ಮಾತ್ರ ಎಲ್ಲರಿಗೂ ನೀಡಿ ಎಂದು ಶಾಸಕರು ತಿಳಿಸಿದ್ದರು ಅದರಂತೆ ನಾವು ಎಲ್ಲರಿಗೂ ಸಹ ದಾಖಲಾತಿಗೆ ಅವಕಾಶ ಮಾಡಿದ್ದೇನೆ. ಬಿಕಾಂ ಶೇ90, ಬಿಎ ಶೇ84, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಎರಡು ವಿಭಾಗ ಶೇ 100 ರಷ್ಟು ಫಲಿತಾಂಶ ಬಂದಿದೆ. ವಿಶೇಷ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದಿಂದ ವಿಶ್ವವಿದ್ಯಾಲಯ ಮಟ್ಟದಲ್ಲಿ Rank ಪಡೆಯುವ ಕಡೆಗೆ ಎಲ್ಲಾರೂ ಗಮನ ಹರಿಸುತ್ತಿದ್ದೇನೆ. 24 ವಿದ್ಯಾರ್ಥಿಗಳು ‌ವಿಶೇಷ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ಉಳಿದಂತೆ ಶೇ 100 ರಷ್ಟು ವಿದ್ಯಾರ್ಥಿ ವೇತನ ನೀಡುತ್ತಿದ್ದೇನೆ. 2019-20 ನೇ ಸಾಲಿನಲ್ಲಿ 200 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, 2020-21 ಸಾಲಿನಲ್ಲಿ 230 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಸರ್ಕಾರ ನೀಡಿದೆ. 2021-22 ಸಾಲಿನಲ್ಲಿ 330 ಟ್ಯಾಬ್ಲೆಟ್ ಪಟ್ಟಿ ಸರ್ಕಾರಕ್ಕೆ ಹೋಗಿದೆ ಎಂದರು. 3 ಎಕರೆ ಜಾಗವನ್ನು ಶಾಸಕರ ಶ್ರಮದಿಂದ ಕಾಲೇಜಿಗೆ ಕೊಡಿಸಿರುವುದಕ್ಕೆ ನಾವು ಅವರಿಗೆ ಋಣಿಯಾಗಿರುತ್ತೇನೆ. ಎನ್.ಇ.ಪಿ ಜಾರಿಯಾಗಿರುವುದರಿಂದ 8 ಕೊಠಡಿಗಳನ್ನು ಕೊಡಿಸಿ ಎಂದು ಮನವಿ ಮಾಡಿದ್ದು ಶಾಸಕರು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಎಂದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ಸುನೀತಾ, ಸ್ಪೂರ್ತಿ ಮಾತು.
ಶಾಸಕ ತಿಪ್ಪಾರೆಡ್ಡಿ ಅವರು ಎಲ್ಲಾ ಶಾಸಕರಂತೆ ಅಲ್ಲ ಕೊಟ್ಟ ಮಾತಿನಂತೆ ಭರವಸೆ ಇಡೇರಿಸುತ್ತಾರೆ. ನಮಗೆ ಕೊಠಡಿ ವ್ಯವಸ್ಥೆ ಮಾಡಿದ್ದಾರೆ. ಡೆಸ್ಕ್ ವ್ಯವಸ್ಥೆ ಮಾಡಿದ್ದಾರೆ. ಕಾಲೇಜು ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ನಮಗೆ ಸಿಕ್ಕಂತಹ ಶಾಸಕರು ಎಲ್ಲಾ ಕ್ಷೇತ್ರಕ್ಕೆ ಸಿಗಬೇಕು ಇಂತಹ ಶಾಸಕರು ಸಿಗಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.

ತಿಪ್ಪಾರೆಡ್ಡಿ ಅವರು ಶಿಕ್ಷಣ ಸಚಿವರಾಗಬೇಕಂತೆ
ವಿದ್ಯಾರ್ಥಿ ಪ್ರತಿನಿಧಿ ವಿದ್ಯಾರ್ಥಿಗಳು ಅದಷ್ಟು ಬೇಗ ನಮ್ಮ ಶಾಸಕರು ಶಿಕ್ಷಣ ಮಂತ್ರಿಯಾದರೆ ಇಡೀ ಜಿಲ್ಲೆಗೆ ಶಿಕ್ಷಣ ಕ್ಷೇತ್ರದ ಬದಲಾವಣೆ ಮಾಡಿತ್ತಾರೆ. ಅವರು ಮಂತ್ರಿಯಾಗಬೇಕು ಎಂದು ನನ್ನ ಬಯಕೆ ಎಂದು ವಿದ್ಯಾರ್ಥಿ ಸ್ಪೂರ್ತಿ ಹೇಳಿದರು.

ನಗರಸಭೆ ಸದಸ್ಯರಾದ ಚಾಲುಕ್ಯ ನವೀನ್, ಸುರೇಶ್, ಮಂಜಪ್ಪ, ಹರೀಶ್, ಕಾಲೇಜಿ ಅಭಿವೃದ್ಧಿ ಸಮಿತಿ ಸದಸ್ಯ ನಿವೃತ್ತ ಪ್ರಾಂಶುಪಾಲರಾದ ಪ್ರೋ ಲಿಂಗಪ್ಪ, ಪ್ರೋ .ಪಾಡುರಂಗಪ್ಪ ,ಕಾಲೇಜಿನ ಉಪನ್ಯಾಸಕರಾದ ತಾರುಣಿ ಶುಭದಾಯಿನಿ, ಸಿದ್ದಪ್ಪ, ಬಸವರಾಜ್, ಲೀಲಾವತಿ, ಶಕುಂತಲಾ , ಮಲ್ಲಿಕಾರ್ಜುನ್ ಇದ್ದರು.

[t4b-ticker]

You May Also Like

More From Author

+ There are no comments

Add yours