ಆಸ್ಪತ್ರೆ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದೆ ಜಿಲ್ಲಾಡಳಿತದ ಅಸಹಾಯಕತೆಗೆ ಸಾಕ್ಷಿ: ಮಾಜಿ ಸಚಿವ ಡಿ.ಸುಧಾಕರ್ ಆರೋಪ‌

 

 

 

 

ಹಿರಿಯೂರು: ಆಸ್ಪತ್ರೆ ನಿರ್ಮಾಣ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದಿರುವುದ ಜಿಲ್ಲಾಡಳಿತದ ಅಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರು, ರಾಜ್ಯ ಸರ್ಕಾರದ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿದ್ದ ವೇದಿಕೆಯಲ್ಲಿ ಶಾಸಕರ ಪತಿ ಪ್ರಸ್ತಾವಿಕ ಭಾಷಣ ಮಾಡಿರುವುದು ನಾಚಿಕೆಗೇಡು ಹಾಗೂ ಇದು ಗೂಂಡಾ ವರ್ತನೆಯಾಗಿದೆ, ಕಳೆದ ಮೂರು ವರ್ಷದಿಂದ ತಾಲೂಕಿನ ಅಭಿವೃದ್ಧಿ, ಆಡಳಿತ ವಿಚಾರದಲ್ಲಿ ಶಾಸಕರ ಪತಿ ಹಸ್ತಕ್ಷೇಪ ಮಾಡಿ, ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ ಶಾಸಕರು ಯಾರು ಎನ್ನುವಂತಾಗಿದೆ, ಬಿಜೆಪಿ ಪಕ್ಷದಿಂದ ಉಚ್ಛಾಟಿತ ಮುಖಂಡನಿಗೆ ಸರ್ಕಾರಿ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ.
ತಾಲೂಕಿನ ಕೆಲ ಅಧಿಕಾರಿಗಳು ಶಾಸಕರ ಪತಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ, ತಾಲೂಕಿನ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶಾಸಕಿ-ಪತಿಯ ದುರಾಡಳಿತ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ. ಪದೇ ಪದೆ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆ, ಆಡಳಿತದಲ್ಲಿ ಹಸ್ತ ಕ್ಷೇಪವಾಗುತ್ತಿದ್ದು ಅಧಿಕಾರಿಗಳು ಭಯದಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ದಾನಿಗಳು ನೆರವಿನ ಹಸ್ತ ಚಾಚಿದ್ದು, ಇದು ನಾವು ಮಾಡಿದ್ದು ಎಂದು ಶಾಸಕರು-ಪತಿ ಪ್ರಚಾರ ಪಡೆದುಕೊಂಡರು ಎಂದು ದೂರಿದರು.

 

 

[t4b-ticker]

You May Also Like

More From Author

+ There are no comments

Add yours