ವಿದ್ಯಾರ್ಥಿನಿಯರು ಸ್ವಯಂ ಕೌಶಲ್ಯಗಳನ್ನು ಪಡೆದುಕೊಂಡು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು: ಓ.ಪರಮೇಶ್ವರಪ್ಪ

 

 

 

 

ಚಿತ್ರದುರ್ಗ: ವಿದ್ಯಾರ್ಥಿನಿಯರ ಸ್ವಯಂ ಕೌಶಲ್ಯಗಳನ್ನ ಪಡೆದುಕೊಂಡು ಆತ್ಮರಕ್ಷಣೆ ಮಾಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಹೇಳಿದರು.

 

 

 

 

ನಗರದ   ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಇಲಾಖರ  ವತಿಯಿಂದ  ವಸತಿ ನಿಲಯದಲ್ಲಿ  ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವಯಂ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಇತರರಂತೆ ಬದುಕುವಂಥ ಶಕ್ತಿಯ ತರಬೇತಿ  ಒಂದನ್ನು ಯುವ ಸಮೂಹಕ್ಕೆ ನೀಡಬೇಕಾಗಿದೆ.‌  ವಿದ್ಯಾರ್ಥಿನಿಯರಿಗೆ ತಮ್ಮ ರಕ್ಷಣೆ ಮಾಡಿಕೊಳ್ಳುವ  ಅತ್ಯವಶ್ಯಕ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಪುರುಷನಿಗೆ ಸರಿಸಮಾನವಾಗಿ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ವಿದ್ಯಾರ್ಥಿನಿಯರು ತಮ್ಮ ವ್ಯಾಸಂಗದ ಜತೆಗೆ ಇಂತಹ ಕೌಶಲಗಳನ್ನು ಕಲಿಯುವುದರ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗಿದೆ. ಅನೇಕ ಸಾಧನೆಗಳನ್ನು ಪ್ರಸ್ತುತ ದಿನಗಳಲ್ಲಿ ಮಾಡುತ್ತಿದ್ದು  ದೇಶದ ಅತ್ಯುತ್ತಮ ಸ್ಥಾನಗಳನ್ನು ಅಲಂಕಾರಿಸಿರುವುದು ನಾವು ನೋಡಿದ್ದ ಹೆಣ್ಣು ಎಲ್ಲಾವನ್ನು  ಧೈರ್ಯದಿಂದ ಎದುರಿಸುವ ಆತ್ಮ ವಿಶ್ವಾಸ ನಿಮ್ಮಲಿರಲಿ ಎಂದು ತಿಳಿಸಿದರು. ಈ‌ ಸಂದರ್ಭದಲ್ಲಿ ಸುನೀತಾ ಮತ್ತು ನಿಲಯ ಪಾಲಕರಾದ ಅನಿತಾ,  ಸೀನಿಯರ್ ವಾರ್ಡನ್ ಡಿಒ.ಯಾಶೋದಮ್ಮ ರಾತ್ರಿ ಕಾವಲುಗಾರರು ಅಡುಗೆ ಸಿಬ್ಬಂದಿಯವರು ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours