ಅಧಿಕಾರಿಗ ಜೊತೆ ಹೊಸ ವರ್ಷ ಆಚರಣೆ ಮಾಡಿದ ಶಾಸಕ‌ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ:  ತಾಲ್ಲೂಕು  ಕಚೇರಿಯಲ್ಲಿ ಇಂದು ತಾಲೂಕಿನ 24 ಇಲಾಖೆಗಳ ಅಧಿಕಾರಿಗಳೊಂದಿಗೆ ಹೊಸ ವರ್ಷಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಶಾಸಕ ಟಿ.ರಘುಮೂರ್ತಿ ಆಚರಿಸಿಕೊಂಡರು.

ಹೊಸ ವರ್ಷದ ಕುರಿತಯ ಮಾತನಾಡಿದ ಶಾಸಕರು ಅಧಿಕಾರಿಗಳ ಕಷ್ಟ ಸುಖಗಳ ಮತ್ತು ಸರ್ಕಾರಿ ಕೆಲಸಗಳ ಆದ್ಯತೆ ಮತ್ತು ಬಾದ್ಯತೆ ಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ನಿರ್ದಿಷ್ಟ ಕೆಲಸಗಳ ಕಾರ್ಯಸೂಚಿಯನ್ನು ಚಳ್ಳಕೆರೆ  ಸಮಸ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಹೊಸ ವರ್ಷ ಮತ್ತಷ್ಟು ಚೈತನ್ಯ ನೀಡಲಿ ಎಂದರು.ಎಲ್ಲಾ ಜನಪರ ಕಾರ್ಯಗಳನ್ನು ಇದೇ ವರ್ಷದಲ್ಲಿ ಸಾರ್ವಜನಿಕರಿಗೆ ಸಮರ್ಪಣೆ ಮಾಡಿ ಸರಕಾರಕ್ಕೆ ಮತ್ತು ತಾಲೂಕಿಗೆ ಒಳ್ಳೆಯ ಕೀರ್ತಿ ತರಲೆಂದು ಹಾರೈಸಿದರು.

 

 

ತಹಶೀಲ್ದಾರ್  ಎನ್ .ರಘುಮೂರ್ತಿ ಮಾತನಾಡಿ ಜನಸ್ನೇಹಿ ಜನಪರವಾದ 5 ಕಾರ್ಯಸೂಚಿಗಳು ಆದ ರೈತರಿಗೆ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ  ಮಾಡುವಂತಹ ಬೆಳೆನಷ್ಟ ಮತ್ತು ಮನೆ ನಷ್ಟದ ಕೆಲಸಗಳು ರೈತರ ದೈನಂದಿನ ಹಾಸುಹೊಕ್ಕಾದ ಪಹಣಿಯಲ್ಲಿ ಲೋಪದೋಷಗಳು ಮತ್ತು ವಿವಾದಾಸ್ಪದ ಪ್ರಕರಣಗಳು ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿರುವ ಎಲ್ಲ ಗ್ರಾಮಗಳ ಸಾರ್ವಜನಿಕರಿಗೆ ಶೇಕಡ ನೂರರಷ್ಟು ವ್ಯಾಕ್ಸಿನ್ ಹಾಕಿಸುವುದು ಮತ್ತು ತಾಲೂಕಿನ ಗ್ರಾಮಗಳಲ್ಲಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವುದು ಸೇರಿದಂತೆ ಈ ಎಲ್ಲಾ ಜನಪರ ಕೆಲಸಗಳನ್ನು 2022ರ ವರ್ಷದಲ್ಲಿ ಪೂರ್ಣಗೊಳಿಸಿ ಸರಕಾರಕ್ಕೆ ಮತ್ತು  ಶಾಸಕರಿಗೆ ಕೊಡುಗೆ ನೀಡುವುದಾಗಿ ತಾಲೂಕು ಆಡಳಿತ ವತಿಯಿಂದ ಭರವಸೆ ನೀಡಿದರು

 

. ಈ  ಸಮಾರಂಭದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಚಳ್ಳಕೆರೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ.ಟಿ. ಜಗನ್ನಾಥ್ ರವರು ನಗರಸಭೆ ಅಧ್ಯಕ್ಷರಾದ ಸುಮಕ್ಕ ಆಂಜನೇಯ ರವರು ಮತ್ತು ನಗರಸಭೆ ಆಯುಕ್ತರಾದ ಪಾಲಯ್ಯ ರವರು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು .

[t4b-ticker]

You May Also Like

More From Author

+ There are no comments

Add yours