ಪ್ರಧಾನಮಂತ್ರಿ ಆವಾಸ್ ಯೋಜನೆ: ಮನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ವಂತಿಕೆ ಮೊತ್ತ ಪಾವತಿಸಲು ಸೂಚನೆ.

 

 

 

 

ಚಿತ್ರದುರ್ಗ, ಡಿಸೆಂಬರ್29:
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯ ಅಪೊರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‍ನರ್‍ಶಿಫ್ (ಎಹೆಚ್‍ಪಿ) ಜಿ+2 ಮಾದರಿಯಲ್ಲಿ ಚಿತ್ರದುರ್ಗ ನಗರಸಭೆಯ ಮೇಗಲಹಳ್ಳಿ ರಿ.ಸ. ನಂ22ರಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಯೋಜನೆ ಅನುಷ್ಠಾನಗೊಳಿಸಲು ಮನೆಗಳಿಗೆ ಆಯ್ಕೆಯಾದ ಫಲಾನುಭವಿಗಳು ವಂತಿಕೆ ಮೊತ್ತ ಪಾವತಿಸುವಂತೆ ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಒಂದು ಮನೆಯ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚ ರೂ.6.30 ಲಕ್ಷಗಳಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದ ಜನಾಂಗಕ್ಕೆ ಕೇಂದ್ರ ಸರ್ಕಾರದಿಂದ ರೂ.1.50ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ.2.00 ಲಕ್ಷ ಒಟ್ಟು ರೂ.3.50 ಲಕ್ಷಗಳ ಸಹಾಯಧನವನ್ನು ಮತ್ತು ಸಾಮಾನ್ಯ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಕೇಂದ್ರ ಸರ್ಕಾರದಿಂದ ರೂ.1.50 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ ರೂ.1.20 ಲಕ್ಷ ಒಟ್ಟು ರೂ.2.70ಲಕ್ಷ ಸಹಾಯಧನ ನೀಡಲಾಗುತ್ತಿದೆ.
ಒಂದು ಮನೆ ನಿರ್ಮಾಣಕ್ಕೆ ತಗಲುವ ವೆಚ್ಚ ರೂ.6.30ಲಕ್ಷ ಮೊತ್ತದ ಶೇ.10 ರಷ್ಟು ಅಂದರೆ ರೂ.0.63 ಲಕ್ಷಗಳನ್ನು ವಂತಿಕೆ ರೂಪದಲ್ಲಿ ಫಲಾನುಭವಿಯು ಭರಿಸಬೇಕಾಗಿರುತ್ತದೆ. ಅದರಂತೆ ಎಸ್‍ಬಿಐ ಜೆಸಿಆರ್ ಶಾಖೆ, ಚಿತ್ರದುರ್ಗ ಖಾತೆ ಸಂಖ್ಯೆ 40287009632 ಗೆ ರೂ.10,000/-ಗಳನ್ನು ಕಟ್ಟಿದ ಫಲಾನುಭವಿಗಳು ಉಳಿದ 0.53ಲಕ್ಷಗಳನ್ನು ಮತ್ತು ಇದುವರೆಗೂ ಕಟ್ಟದೇ ಇರುವ ಫಲಾನುಭವಿಗಳು ರೂ.0.63 ಲಕ್ಷಗಳನ್ನು ಕಟ್ಟಲು 2022ರ ಜನವರಿ 14 ರವರೆಗೆ ಕಾಲಾವಕಾಶ ನಿಗಧಿಪಡಿಸಲಾಗಿರುತ್ತದೆ. ಈ ಅವಧಿಯೊಳಗೆ ಫಲಾನುಭವಿಯು ವಂತಿಕೆ ಮೊತ್ತವನ್ನು ಪಾವತಿಸೇ ಇದ್ದಲ್ಲಿ ಅನರ್ಹರೆಂದು ಪರಿಗಣಿಸಿ ರದ್ದುಪಡಿಸಲಾಗುವುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours