ಇಂದಿನಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿಎಂ‌ ಬೊಮ್ಮಾಯಿ ಚಾಲನೆ

 

 

 

 

ಬೆಂಗಳೂರು: ಇಂದಿನಿಂದ ನಗರದಲ್ಲಿ ಇಲೆಕ್ಟ್ರಿಕ್ ಹಾಗೂ ಬಿಎಸ್-VI ಬಸ್ ಸಂಚಾರ ಆರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. 90 ಇಲೆಕ್ಟ್ರಿಕ್ ಹಾಗೂ 265 ಬಿಎಸ್-VI ಬಸ್ ಇಂದಿನಿಂದ ಸಂಚರಿಸುತ್ತಿವೆ.

ಒಂದೂವರೆ ಗಂಟೆ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ವರೆಗೆ ಬಸ್ ಸಂಚರಿಸುತ್ತದೆ. ಧ್ವನಿವರ್ದಕ, ಸಿಸಿಟಿವಿ ವ್ಯವಸ್ಥೆಯನ್ನೂ ಬಸ್ ಹೊಂದಿದೆ.

ಮಾಲಿನ್ಯ ಸಮಸ್ಯೆ ಕಡಿವಾಣ ಹಾಕಲು ಇಲೆಕ್ಟ್ರಿಕ್ ಬಸ್​ಗೆ ಚಾಲನೆ ನೀಡಲಾಗಿದೆ. ಮೆಟ್ರೋ ಫೀಡರ್ ಸೇರಿದಂತೆ ಕೆಂಗೇರಿ, ಯಶವಂತಪುರ, ಕೆ ಆರ್ ಪುರಂ ಘಟಕದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಬಿಎಸ್-VI ಡೀಸೆಲ್ ಬಸ್ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದ್ದು, ಬಸ್ ಅತಿ ಕಡಿಮೆ ಹೊಗೆ ಹೊರಸೂಸುತ್ತದೆ.

 

 

ಬಿಎಂಟಿಸಿಯ ಬಹು ವರ್ಷಗಳ ಕನಸು ಇಂದು ನನಸಾಗಿದ್ದು, ಈ ಮೂಲಕ ನಗರದ ಮಾಲಿನ್ಯ ನಿಯಂತ್ರಣಕ್ಕೆ ಬಿಎಂಟಿಸಿ ಕೊಡುಗೆ ನೀಡಿದೆ. ಈ ಹಿಂದೆ ಸರ್ಕಾರ ಬಜೆಟ್ನಲ್ಲಿ ನೀಡಿದ್ದ ಅನುದಾನದಲ್ಲಿ 535 ಬಿಎಸ್- VI ಡೀಸೆಲ್ ಬಸ್ ಖರೀದಿ ಮಾಡಲಾಗಿತ್ತು. ಈಗಾಗಲೇ 40 ಎಲೆಕ್ಟ್ರಿಕ್, 150 ಬಿಎಸ್- VI ಡೀಸೆಲ್ ಬಸ್ಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್ಗಳು ಸಂಚಾರ ನಡೆಸಲಿವೆ.

ಇಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬೊಮ್ಮಾಯಿ, ಇಲೆಕ್ಟ್ರಿಕ್ ಬಸ್ನಲ್ಲಿ ಸಂಚಾರ ಮಾಡಿದರು. ಈ ವೇಳೆ ಸಚಿವ ಶ್ರೀರಾಮುಲು, ಸಚಿವ ಎಸ್ ಟಿ ಸೋಮಶೇಖರ್ ಉಪಸ್ಥಿತರಿದ್ದರು.

ಚಾಲನೆ ನೀಡಿ ಮಾತನಾಡಿದ ಸಿಎಂ, ಸಬ್ಸಿಡಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಸಬ್ಸಿಡಿ ಆಧಾರದಲ್ಲಿ ಸಾರಿಗೆ ಸಂಸ್ಥೆ ನಡೆಸೋದು ಕಷ್ಟ ಈಗ. ಸಾರಿಗೆ ಇಲಾಖೆ ಹಾಗೂ ಹೆಸ್ಕಾಂ ಆರ್ಥಿಕ ಪುನಶ್ಚೇತನ ನೀಡುವುದು ಮುಖ್ಯ. ಎರಡೂ ಸಂಸ್ಥೆಗಳಿಗೆ ಹೊಸ ಸ್ವರೂಪ ಕೊಟ್ಟು ಪುನರ್ರಚನೆ ಮಾಡುತ್ತಿದ್ದೇವೆ. ಸರ್ಕಾರದಿಂದ ಹಣ, ಸಬ್ಸಿಡಿ ಕೇಳುವುದು ಸುಲಭ. ಆದರೆ ಸಾರಿಗೆ ಇಲಾಖೆಯಲ್ಲಿ ಆದಾಯ ನಷ್ಟವಾಗುತ್ತಿದೆ. ಆದಾಯ ಸೋರಿಕೆಯಾಗುತ್ತಿರುವುದನ್ನು ತಡೆಯಬೇಕು ಅಂತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರ ಸಬ್ಸಿಡಿ ಕೊಡುತ್ತಾ ಹೋಗುವುದರಲ್ಲಿ ಅರ್ಥವಿಲ್ಲ. ನೀವೇ ನಿಮ್ಮ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು. ಹೊಸ ಚಿಂತನೆಯನ್ನು ಮಾಡಿ, ಹಳೆಯದನ್ನು ಬಿಟ್ಟುಬಿಡಿ. ಖಾಸಗಿಯವರು ಲಾಭದಲ್ಲಿ ನಡೆಸ್ತಾರೆ, ಸರ್ಕಾರಕ್ಕೆ ಏಕೆ ಆಗಲ್ಲ. ಒಂದು ರೋಡ್ ಮ್ಯಾಪ್ ಮಾಡಿ, ದಕ್ಷತೆಯಿಂದ ಕೆಲಸ ಮಾಡಿ. ಬೇರೆ ದೇಶಗಳಲ್ಲಿ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಕೆ ಹೆಚ್ಚಿದೆ. ನಮ್ಮಲ್ಲೂ ಅದೇ ಮಾದರಿ ಅನುಸರಿಸಬೇಕು ಅಂತ ಬೊಮ್ಮಾಯಿ ಹೇಳಿದರು. ನಂತರ ಬಿಎಂಟಿಸಿಗೆ ಒಂದು ಹೊಸ ವಿನ್ಯಾಸ ಕೊಡಿ ಎಂದು ಸಲಹೆ ನೀಡಿದರು.

[t4b-ticker]

You May Also Like

More From Author

+ There are no comments

Add yours