ಸೇನಾ ಸಿಬ್ಬಂದಿ ಇದ್ದ ಸೇನಾ ಹೆಲಿಕ್ಯಾಪ್ಟರ್ ಪತನ ಎಷ್ಟು ಜನ ಸಾವು ಗೊತ್ತೆ.

 

 

 

 

ಚೆನ್ನೈ, ಡಿ.8- ಸಶಸ್ತ್ರ‌ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ , ಕುಟುಂಬದ ಸದಸ್ಯರು ಮತ್ತು ಸೇನಾ ಸಿಬ್ಬಂದಿ ಇದ್ದ ಸೇನಾ ಹೆಲಿಕ್ಯಾಪ್ಟರ್ ಪತನವಾಗಿ ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮದ್ಯಾಹ್ನ ನಡೆದಿದೆ.

ಹೆಲಿಕ್ಯಾಪ್ಟರ್ ನಲ್ಲಿ 14 ಮಂದಿ ಇದ್ದರು ಎಂದು ತಿಳಿದು‌ ಬಂದಿದ್ದು ಅದರಲ್ಲಿ 11 ಮಂದಿ ಸಾವನ್ನಪ್ಪಿದ್ದು ಮೃತ ದೇಹ ಹೊರ ತೆಗೆಯಲಾಗಿದೆ. ಹಲವರು ಗಂಬೀರ ಗಾಯಗಳಾಗಿರುವ ಘಟನೆ ಮಧ್ಯಾಹ್ಮ 12.20 ರಲ್ಲಿ ನಡೆದಿದೆ.

ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ಅವರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಸೇನಾ ಮೂಲಗಳು ಯಾವುದೇ ಮಾಹಿತಿ ನೀಡಿಲ್ಲ.

ಸಿಡಿಎಸ್ ಜನರಲ್‌ ಬಿಪಿನ್ ರಾವತ್ ಅವರ ಪತ್ನಿ ಹಾಗು ರಾವತ್ ಸಿಬ್ಬಂದಿ ಹೆಲಿಕ್ಯಾಪ್ಟರ್ ನಲ್ಲಿ ಇದ್ದರು. ಸುಲೂರು ಸೇನಾ ಶಿಬಿರದಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಹೆಲಿಕ್ಯಾಪ್ಟರ್ ನೀಲಗಿರಿ ಪ್ರದೇಶದ ಕುಕನೂರಿನಲ್ಲಿ ಪತನವಾಗಿದೆ. ಎಂ. ಸರಣಿಯ ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ ತಿಳಿದು ಬಂದಿಲ್ಲ.

ದೆಹಲಿಯಿಂದ ಸೂಲೂರಿಗೆ ಹೆಲಿಕ್ಯಾಪ್ಟರ್ ಅಗಮಿಸಿ‌ ಅಲ್ಲಿಂದ ಹೆಲಿಕ್ಯಾಪ್ಟರ್ ವೆಲ್ಲಿಂಗ್ಟಂನ್ ಸೇನಾ‌ ಶಿಬಿರಕ್ಕೆ ತೆರಳುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಘಟನೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಮತ್ತಿತರು ಆಗಮಿಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ ಮೃತಪಟ್ಟವರ ಮಾಹಿತಿ ಇನ್ನಷ್ಟೇ ಹೊರ ಬರಬೇಕಾಗಿದೆ‌.

 

 

63 ವರ್ಷದ ಜನರಲ್‌ ಬಿಪಿನ್ ರಾವತ್ ಅವರು 2019 ರ ಜನವರಿಯಲ್ಲಿ ದೇಶದ ಮೊದಲ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವಿಕಾರ ಮಾಡಿದ್ದರು. ಬಲಿಕ ಮಿಲಿಟರ್ ಇಲಾಖೆಗೆ ಮುಖ್ಯಸ್ತರನ್ನಾಗಿಯು ಕೂಡ ನೇಮಕ ಮಾಡಲಾಗಿತ್ತು.

ಸಿಎಂ ಭೇಟಿ:

ಹೆಲಿಕ್ಯಾಪ್ಟರ್ ಪತನವಾದ ಸ್ಥಳಕ್ಕೆ ಸಂಜೆ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಿದ್ದಾರೆ.

ತನಿಖೆಗೆ ಆದೇಶ

ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದ್ದ ಹೆಲಿಕ್ಯಾಪ್ಟರ್ ಪತನವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಆದೇಶ ಮಾಡಿದೆ.
ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ ತಿಳಿದು ಬಂದಿಲ್ಲ.

ಯಾರೆಲ್ಲಾ ಇದ್ದರು

ಪತನವಾದ ಹೆಲಿಕ್ಯಾಪ್ಟರ್ ನಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹಜೀಂದರ್ ಸಿಂಗ್, ಎನ್ ಕೆ ಗುರೇಶ್ವರ್ ಸಿಂಗ್ಣ ಎನ್ ಕೆ ಜಿತೇಂದ್ರ ,ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಬಿ.ಸಾಯಿ ತೇಅ ಹವ್ ಸತ್ಪಾಲ್ ಸೇರಿದಂತೆ ಹದಿನಾಲ್ಕು ಮಂದಿ ಇದ್ದರು.

[t4b-ticker]

You May Also Like

More From Author

+ There are no comments

Add yours