ನಾವು ಸ್ವಂತ ಬಲದ ಮೇಲೆ ಪರಿಷತ್ ಚುನಾವಣೆ ಎದುರಿಸುತ್ತೇವೆ: ಸಿಎಂ ಬಸವರಾಜ್ ಬೊಮ್ಮಾಯಿ

 

 

 

 

 

ಚಿತ್ರದುರ್ಗ26:ನಾವು ಸ್ವಂತ ಬಲದ ಮೇಲೆ ಪರಿಷತ್ ಚುನಾವಣೆ ಎದುರಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

 

 

ಅವರು ಚಿತ್ರದುರ್ಗದಲ್ಲಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲು ಇದು ಸಾರ್ವತ್ರಿಕ ಚುನಾವಣೆಯಲ್ಲ, ಆಯಾ ಸಂದರ್ಭಕ್ಕೆ ಚುನಾವಣೆಗಳು ಬರುತ್ತವೆ ಫಲಿತಾಂಶವೂ ಬರುತ್ತವೆ. ಜೆಡಿಎಸ್ ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬೆಂಬಲ ಪಡೆಯುತ್ತೇವೆ. ಬೇರೆ ಪಕ್ಷಗಳು ಕೊಟ್ಟರೆ ಸ್ವೀಕರಿಸುತ್ತೇವೆ. ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಅಂತ ಕಾಂಗ್ರೆಸ್ ನವರು ಹೇಳುತ್ತಾರೆ.ಬಿಜೆಪಿ ಕಾಂಗ್ರೆಸ್ ಒಳ ಒಪ್ಪಂದ ಎಂದು ಜೆಡಿಎಸ್ ನವರು ಹೇಳುತ್ತಾರೆ, ದೇವೇಗೌಡರು ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷವನ್ನು ಪ್ರತಿನಿಧಿಸಿದ್ದರು, ಅವರು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ರಾಜಕಾರಣ ಮಾಡುತ್ತಾರೆ. ನಾವು ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಮಾಡುತ್ತೇವೆ.

ಕೇಂದ್ರದ ಮೂರು ಕೃಷಿ ಕಾಯ್ದೆ ವಾಪಾಸ್ ಪಡೆದಿದೆ ನೀವು ಈಗಾಗಲೇ ಕೆಲವು ಕಾಯ್ದೆ ಜಾರಿಗೆ ತಂದಿದ್ದರೀ ಈ ಬಗ್ಗೆ ತಮ್ಮ ಮುಂದಿನ ತೀರ್ಮಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಮುಂದೆ ನಡೆಯುವಂತಹ ಸಂಸತ್ತಿನ ಅಧಿವೇಶನ ಯಾವ ಕಾಯ್ದೆ ಯಾವ ರೀತಿ ರಿವೀಲ್ ಆಗುತ್ತದೆ ಎಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು

ಈ ಬಾರಿ ಎಂಎಲ್ ಸಿ ಚುನಾವಣೆಯಲ್ಲಿ ಚಿತ್ರದುರ್ಗ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಚಿತ್ರದುರ್ಗಕ್ಕೆ ಮತ್ತೊಂದು ಮಂತ್ರಿ ಸ್ಥಾನ ಕೊಡಲಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಬಗ್ಗೆ ವರಿಷ್ಠರ ಜೊತೆ ಚರ್ಚೆ ಮಾಡಿ ಆ ಮೇಲೆ ಅದು ನಿರ್ಧಾರವಾಗುತ್ತದೆ ಎಂದರು
ಪ್ರದೇಶಿಕ ಪಕ್ಷದ ಬಗ್ಗೆ ಕೇಳಲಾದ ಪ್ರಶ್ನೆಗೆ
ದೇವೇಗೌಡರೂ ರಾಷ್ಟ್ರೀಯ ಪಕ್ಷದಲ್ಲಿಯೇ ಇದ್ದರು, ರಾಷ್ಟ್ರಪಕ್ಷಗಳು ರಾಷ್ಟ್ರೀಯ ಮಟ್ಟದ ವಿಚಾರ ಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಾರೆ, ರಾಷ್ಟ್ರೀಯ ಹಿತ ದೃಷ್ಠಿಯಿಂದ ನಾವು ಕೆಲಸ ಮಾಡುತ್ತೇವೆ, ಪ್ರಾದೇಶಿಕ ಪಕ್ಷಗಳು ಪ್ರಾದೇಶಿಕ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತವೆ, ನಾವು ರಾಜ್ಯದ ಹಿತಾಸಕ್ತಿಯ ಜೊತೆ ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತೇವೆ. ಜನ ಸ್ವರಾಜ್ ಯಾತ್ರೆ ನಾವು ಮೊದಲೇ ನಿಗದಿ ಮಾಡಿದ್ದೇವು ನಮಗೆ ಪ್ರವಾಹ ಬರುತ್ತದೆ ಎಂದು ಗೊತ್ತಿರಲಿಲ್ಲ, ಆ ಕಾರ್ಯಕ್ರಮ‌ ಪೂರಕವಾಗಿ ನಿಗದಿತವಾಗಿತ್ತು. ನೆರೆ ಬಂದು ಎರಡೇ ದಿನದಲ್ಲಿ ಆ ಪ್ರದೇಶಗಳಿಗೆ ಸಿಎಂ ಹಾಗೂ ಸಚಿವರು ಹೋಗಿದ್ದೇವು ಇವರು ಎಷ್ಟು ದಿವಸಗಳಿಗೆ ಹೋಗಿದ್ದರು, ಪರಿಹಾರ ನೀಡುವುದರಲ್ಲಿ ನಾಲ್ಕೈದು ತಿಂಗಳಾಗುತ್ತಿತ್ತು. ಆದರೆ ಈಗ ಆ ಸ್ಥಿತಿ ಇಲ್ಲ ನಾನು ನಿನ್ನೆ ತಾನೇ ಹಣಕಾಸು ಇಲಾಖೆ ಕಾರ್ಯದರ್ಶಿಯವರಿಗೆ ಸೂಚನೆಯನ್ನು ಕೊಟ್ಟಿದ್ದೇನೆ,
ಮಳೆಹಾನಿ ಪರಿಹಾರ ವರದಿ ತಂತ್ರಾಂಶದಲ್ಲಿ ಅಪ್ಲೋಡ್ ಆಗಿ ವರದಿ ಬಂದು ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿ ಪರಿಹಾರ. ರೈತರ ಖಾತೆಗೆ ಹೋಗುವಂತೆ ಕ್ರಮ ವಹಿಸಲಾಗಿದೆ
ಇದಕ್ಕೆ ಉದಾಹರಣೆ ದಾವಣಗೆರೆಯಲ್ಲಿ ಈಗಾಗಲೇ 97 ಲಕ್ಷ ರೂಪಾಯಿಗಳು ರೈತರ ಖಾತೆಗೆ ಇದೇ ನವೆಂಬರ್ ಮಾಹೆಯ ಮಳೆಯಿಂದ ಹಾನಿಯಾದ ನಷ್ಟದ ಪರಿಹಾರವಾಗಿ ಹಣ ಅವರ ಖಾತೆಗೆ ಹೋಗಿದೆ ಎಂದು ಹೇಳಿದರು.ಸಚಿವರದಾ ಬೈರತಿ ಬಸವರಾಜ್ ,  ಶಾಸಕರಾದ    ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಎಂಎಲ್ಸಿ  ನಾರಾಯಣಸ್ವಾಮಿ, ಚಿದನಾಂದಗೌಡ , ರವಿಕುಮಾರ್ ಇದ್ದರು.

[t4b-ticker]

You May Also Like

More From Author

+ There are no comments

Add yours