ಮಧ್ಯಪ್ರದೇಶ: ಮಧ್ಯಪ್ರದೇಶದ ಉಜ್ಜಯಿನಿಯ ಕಚ್ರೋಡ್ನಲ್ಲಿ ಹೆತ್ತ ತಾಯಿಯೇ ತನ್ನ 3 ತಿಂಗಳ ಮಗಳನ್ನು ಹತ್ಯೆ ಮಾಡಿದ್ದಾಳೆ ಎಂಬುದು ತನಿಖೆ ಮೂಲಕ ಬೆಳಕಿಗೆ ಬಂದಿದೆ. ಅಕ್ಟೋಬರ್ 12 ರಂದು ಸ್ವತಃ ತನ್ನ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ಮಗು ಕಾಣೆಯಾಗಿದೆ ಎಂದು ಮನೆಯವರಿಗೆ ತಿಳಿಸಿದ್ದಾಳೆ. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗು ಸಿಗದೇ ಇದ್ದಾಗ ಪೊಲೀಸ್ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪಕ್ರರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದರು. 10 ದಿನಗಳ ಕಾಲ ಪ್ರತಿದಿನ ತಾಯಿ ಠಾಣೆಗೆ ತೆರಳಿ ಮಗು ಹುಡುಕಿಕೊಂಡುವಂತೆ ಕಣ್ಣೀರು ಹಾಕುತ್ತಾ ನಾಟಕವಾಡಿದ್ದಾಳೆ. ನನ್ನ ಮಗು ಸಿಗದೇ ಇದ್ದರೆ ನಾನು ಸತ್ತು ಹೋಗುತ್ತೇನೆ ಎಂದು ನಾಟಕವಾಡಿದ್ದಾಳೆ ಎಂಬ ಕಟು ಸತ್ಯ ತನಿಖೆಯ ಮೂಲಕ ಹೊರ ಬಂದಿದ್ದು ಹೆತ್ತ ತಾಯಿಯ ಈ ಕೃತ್ಯಕ್ಕೆ ಬಾಳಿ ಬದುಕಬಬೇಕಿದ್ದ ಕಂದಮ್ಮ ಇನ್ನಿಲ್ಲದಾಗಿದೆ.
[t4b-ticker]
+ There are no comments
Add yours