ವೃದ್ದರಿಗೆ, ಅಂಗವಿಕಲರಿಗೆ ಅಲೆದಾಡಿಸಿದರೆ ಸಹಿಸಲ್ಲ ಅಧಿಕಾರಿಗಳಿಗೆ ತಹಶೀಲ್ದಾರ್ ಎನ್.ರಘಮೂರ್ತಿ ತರಾಟೆ

 

 

 

 

ಚಳ್ಳಕೆರೆ : ತಾಲ್ಲೂಕು ಕಚೇರಿಯ ಹಳೆಯ ಕಟ್ಟಡದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕೋರೋನಾ ನಿಯಮಗಳು ಉಲ್ಲಂಘಿಸಿ ಗುಂಪಾಗಿ ಜನರು ಸೇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಗಳನ್ನು ಬುಧವಾರ ತಹಶೀಲ್ದಾರ್ ಎನ್.ರಘುಮೂರ್ತಿ ತರಾಟೆಗೆ ತೆಗದುಕೊಂಡರು.

 

 

ತಾಲೂಕು  ಕಚೇರಿಯ ಹಳೆಯ ಕಟ್ಟಡದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಜಾತ್ರೆಯಂತೆ ನಿಂತಿರುವುದನ್ನು ಗಮನಿಸಿದ ತಹಶೀಲ್ದಾರ್  ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಕೋರೋನಾ ನಿಯಮಗಳನ್ನು ಪಾಲನೆ‌ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ತಹಶೀಲ್ದಾರ್ ಒಬ್ಬರ ಜವಾಬ್ದಾರಿ ಅಲ್ಲ ಎಲ್ಲ ಅಧಿಕಾರಿಗಳ ಕಚೇರಿಗೆ ಬಂದ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಬೇಕು. ಅದುಬಿಟ್ಟು ಗುಂಪಾಗಿ-ಗುಂಪಾಗಿ ಜನರನ್ನು ಸೇರಿಸಿಕೊಂಡು ಕಾರ್ಯ ನಿರ್ವಹಿಸಿದರೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿವಿಧ ಕೆಲಸ ಕಾರ್ಯ ಗಳಿಗೆ ತಾಲೂಕು ಕಚೇರಿಗೆ ಗ್ರಾಮೀಣ ಭಾಗಗಳಿಂದ ಬರುತ್ತಾರೆ. ಅಂತಹವರನ್ನು ಪ್ರತಿದಿನ ಕಚೇರಿಗೆ ಅಲೆದಾಡಿಸಬೇಡಿ ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಬೇಕು. ಜನರನ್ನು ಗುಂಪು-ಗುಂಪಾಗಿ ಸೇರಿಸಿಕೊಳ್ಳದೆ ಎಲ್ಲರಿಗೂ ಟೋಕನ್ ಕೊಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ ಅವರು ವೃದ್ದರೊಬ್ಬರೊನ್ನು ನೋಡಿ ಈ ಇಳಿ ವಯಸ್ಸಿನ ವೃದ್ದರನ್ನು ಕಚೇರಿಗೆ ಅಲೆದಾಡಿಸಬೇಡಿ, ಆರೋಗ್ಯ ಸರಿಯಿಲ್ಲದವರನ್ನು, ಅಂಗವಿಕಲರ ಕೆಲಸ ಕಾರ್ಯಗಳನ್ನು ಬೇಗ ಮುಗಿಸಿ ಮನೆಗೆ ಕಳಿಸಿ. ಅವರನ್ನು ಕಚೇರಿ ಬಳಿ ಕಾಯಿಸಬೇಡಿ ಎಂದು ಅಧಿಕಾರಿಗಳಿಗೆ ‌‌ಖಡಕ್ ಸೂಚನೆ  ನೀಡಿದರು.

[t4b-ticker]

You May Also Like

More From Author

+ There are no comments

Add yours