ತುಂಗಾ ಭದ್ರಾ ಕುಡಿಯುವ ನೀರಿನ ಕಾಮಗಾರಿ ತ್ವರಿತವಾಗಿ ಮುಗಿಸಿ: ಶಾಸಕ ಟಿ. ರಘುಮೂರ್ತಿ.

 

 

 

 

 

ಚಳ್ಳಕೆರೆ : ತುಂಗಾ ಭದ್ರಾ ನದಿಯಿಂದ ಕುಡಿಯುವ ನೀರು ಕಲ್ಪಿಸುವ ಕಾಮಗಾರಿಯನ್ನು ತ್ವರಿತವಾಗಿ ಮೂರು ತಿಂಗಳಲ್ಲಿ ಮುಕ್ತಾಯ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.

 

 

ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗ್ರಾಮೀಣ ಭಾಗಗಗಳಲ್ಲಿ ಕುಡಿಯುವ ನೀರು ಶೇಖರಣೆಗಾಗಿ ನಿರ್ಮಾಣ ಮಾಡಲಾಗಿರುವ ಒವರ್ ಟ್ಯಾಂಕ್ ಗಳ ಕ್ಯುವರಿ ಮಾಡಿಲ್ಲ ಎನ್ನುವಂತಹ ದೂರುಗಳ ಸಾರ್ವಜನಿಕರಿಂದ ಕೇಳಪಟ್ಟಿದೇನೆ, ಗ್ರಾಮೀಣ ಭಾಗಗಳಲ್ಲಿ ನಿರ್ಮಾಣ ಮಾಡಲಾಗಿರುವ ಒವರ್ ಟ್ಯಾಂಕ್‌ಗಳ ಕಾಮಗಾರಿ ಮುಕ್ತಾಯವಾದ ಮೇಲೆ ಅದರ ಕ್ಯುವರಿಗೆ ಸರಿಯಾಗಿ ಮಾಡಬೇಕು. ಸರಿಯಾಗಿ ಒವರ್ ಟ್ಯಾಂಕ್ ಗಳು ಕ್ಯುವರಿಗೆ ಆಗದೆ ಇರುವುದರಿಂದ ಅದು ಬೇಗ ಕಳಪೆಯಾಗುತ್ತದೆ. ಒವರ್ ಟ್ಯಾಂಕ್ಯೂ ಗಳು ಕೆಲವು ಕಡೆ ೫ ವರ್ಷಕ್ಕೆ ಶಿಥಿಲಗೊಂಡು ನೆಲಕಚ್ಚುತ್ತಿವೆ. ಒವರ್ ಟ್ಯಾಂಕ್ಯೂ ಗಳು ೫೦ ವರ್ಷಗಳ ಕಾಲ ಬಾಳಿಕೆ ಬರುವಂತೆ ಗುಣಮಟ್ಟದಲ್ಲಿರಬೇಕು ಎಂದರು.
ತಾಲ್ಲೂಕಿನಲ್ಲಿ ನಿರ್ಮಾಣ ಮಾಡಲಾಗಿರುವ ೧೩೮ ಒವರ್ ವಾಟರ್ ಟ್ಯಾಂಕ್ ಗಳಲ್ಲಿ ಯಾವ ಒವರ್ ವಾಟರ್ ಟ್ಯಾಂಕ್‌ಗಳಿಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸಿಲ್ಲವೋ ಅಂತಹ ಒವರ್ ಟ್ಯಾಂಕ್‌ಗಳಿಗೆ ಪೈಪ್ ಲೈಲ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದ ಅವರು ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡಿದಾಗ ರಸ್ತೆ ಕಟ್ ಮಾಡಿರುವ ರಸ್ತೆಯನ್ನು ಸರಿ ಮಾಡಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುಂಗಾ ಭದ್ರಾ ನದಿಯಿಂದ ತಾಲ್ಲೂಕಿನ ಹಳ್ಳಿಗಳಿಗೂ ಕುಡಿಯುವ ನೀರು ಕಲ್ಪಿಸಲು ರಸ್ತೆಗಳ ಪಕ್ಕದಲ್ಲಿ ಪೈಪ್ ಲೈನ್ ಗುಂಡಿಯನ್ನು ತೆಗೆದು ಪೈಪ್ ಲೈನ್ ಅಳವಡಿಸಿದ್ದೀರಾ? ಗುಂಡಿ ತೆಗದಆ ಮಣ್ಣನ್ನು ಪಿಡಬ್ಲೂ ರಸ್ತೆಯಲ್ಲಿ ಹಾಗೇ ಬಿಡದೆ ಸಂಪೂರ್ಣವಾಗಿ ರಸ್ತೆಯಿಂದ ತೆರವು ಮಾಡಬೇಕು. ಅದುಬಿಟ್ಟು ನಿಮ್ಮ ಕಾಮಗಾರಿಯ ಕೆಲಸ ಮುಗಿದ ಮೇಲೆ ರಸ್ತೆಯಲ್ಲಿ ಅರ್ಧ ಮಣ್ಣು ಬಿಟ್ಟು ಹಾಗೇ ಹೋದರೆ ಅದು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಗುಂಡಿ ತೆಗೆಯುವಾಗ ಮಣ್ಣನ್ನು ರಸ್ತೆಗೆ ಹಾಗೇ ಬಿಟ್ಟರೆ ಅಪಘಾತಗಳು ಕೂಡ ಸಂಭವಿಸುತ್ತವೆ. ಮಣ್ಣು ಪಿಡಬ್ಲೂ ರಸ್ತೆಯಲ್ಲಿ ಇರದಂತೆ ಸಂಪೂರ್ಣವಾಗಿ ತೆರವುಮಾಡಬೇಕು, ಇದರ ಬಗ್ಗೆ ಪಿಡಬ್ಲೂ ಅಧಿಕಾರಿಗಳ ಗಮನಹರಿಸಬೇಕು ಎಂದರು.

ಈ ವೇಳೆ ಪಿಡಬ್ಲೂ ವಿಜಯ್ ಬಾಸ್ಕರ್, ಎಇಇ ಕಾವ್ಯ, ಇಂಜಿನಿಯರ್‌ಗಳಾದ ದಯಾನಂದ, ಶೀವಮೂರ್ತಿ, ತಿಪ್ಪೇಸ್ವಾಮಿ, ಸುದೀಪ್, ಗುತ್ತಿದಾರ ವಿಜಯಕುಮಾರ್ ಸೇರಿದಂತೆ ಮುಂತಾದ ಅಧಿಕಾರಿಗಳು ಇದ್ದರು.
===================================

[t4b-ticker]

You May Also Like

More From Author

+ There are no comments

Add yours