ಇಸ್ಪಿಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ, ಆರೋಪಿಗಳ ಬಂಧನ

 

 

 

 

ಡಯಲ್ 112ನಿಂದ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ, ಆರೋಪಿಗಳ ಬಂಧನ
*****
ಚಿತ್ರದುರ್ಗ,ಆಗಸ್ಟ್16:
ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಣಸಿನಾಡು ಗ್ರಾಮದಲ್ಲಿ ಆಗಸ್ಟ್ 14ರಂದು ಮಲ್ಲೇಶ್ ರವರ ವಾಸದ ಮನೆಯ ಹತ್ತಿರ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟ ಆಡುತ್ತಿರುವ ಬಗ್ಗೆ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ-112ಗೆ (ಇಆರ್‍ಎಸ್‍ಎಸ್) ಕರೆಬಂದಿದ್ದು, ತಕ್ಷಣವೇ ಇ.ಆರ್.ಎಸ್.ಎಸ್ ಕೇಂದ್ರದ ಸಿಬ್ಬಂದಿಯಾದ ಎನ್.ಎಂ. ಮನೋಹರ್ ರವರು ಹೊಯ್ಸಳ-07 ವಾಹನಕ್ಕೆ ವಿಷಯ ತಿಳಿಸಿದ್ದಾರೆ. ಕೂಡಲೇ ವಾಹನದ ಅಧಿಕಾರಿ ಕುಮಾರ್ ಮತ್ತು ಚಾಲಕ  ಹರೀಶ್ ರವರು ಶ್ರೀರಾಂಪುರ ಪೊಲೀಸ್ ಠಾಣೆಯ ಪಿಎಸ್‍ಐ ರವರಿಗೆ ಮಾಹಿತಿಯನ್ನು ತಿಳಿಸಿ ಅವರ ಮಾರ್ಗದರ್ಶನದಲ್ಲಿ ಹೆಚ್.ಸಿ ಮಹೇಶ್ ಮತ್ತು ಜಾವೇದ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟ ಆಡುತ್ತಿರುವವರನ್ನು ಹಿಡಿದು ಅವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪಿಟ್ ಎಲೆಗಳು, 1.100/- ರೂಗಳ ಹಣವನ್ನು ವಶಕ್ಕೆ ಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಾಟ ಆಡುತ್ತಿರುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಲು ಕಾರಣರಾದ ಶ್ರೀರಾಂಪುರ ಪೊಲೀಸ್ ಠಾಣಾ ಅಧಿಕಾರಿಗಳು, ಜಿಲ್ಲಾ ಇಆರ್‍ಎಸ್‍ಎಸ್ ಕೇಂದ್ರದ ಸಿಬ್ಬಂದಿ ಹಾಗೂ ಹೊಯ್ಸಳ-07 ವಾಹನದ ಪೊಲೀಸ್ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ರಾಧಿಕಾ ಶ್ಲಾಘಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours