ಮಡಿಕೇರಿ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪುನರುಚ್ಛರಿಸಿದ್ದಾರೆ.
ಸೋಮವಾರ ಮಡಿಕೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾತುಗಳು ಮತ್ತು ಈ ಬಗ್ಗೆ ಯಡಿಯೂರಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಈಗಲೂ ನಮ್ಮ ನಾಯಕರು. ಆದರೆ ಹೈಕಮಾಂಡ್ ತೀರ್ಮಾನ ಬಗ್ಗೆ ನಮಗೇನೂ ಗೊತ್ತಿಲ್ಲ. ಒಂದು ವೇಳೆ ಸಿಎಂ ಬದಲಾದರೆ ಸಚಿವ ಸಂಪುಟವೂ ಪುನಾರಚನೆ ಆಗುತ್ತದೆ. ಐದು ಬಾರಿ ಶಾಸಕನಾಗಿ ಗೆದ್ದಿರುವ ನಾನು ಕೂಡ ಈ ಸಂದರ್ಭದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ ಎಂದರು
ಯಡಿಯೂರಪ್ಪ ರಾಜೀನಾಮೆ ಕೊಟ್ಟು ತಮ್ಮ ಮಗನಿಗೆ ಅಧಿಕಾರ ಹಸ್ತಾಂತರಿಸುತ್ತಾರೆ ಎಂದು ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದ ಅಪ್ಪಚ್ಚು ರಂಜನ್, ಬಿಜೆಪಿಯಲ್ಲಿ ಹೈಕಮಾಂಡ್ ಸೂಚನೆಯೇ ಅಂತಿಮ. ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. 80ರ ದಶಕದಿಂದಲೂ ಬಿಜೆಪಿಯಲ್ಲಿಇದ್ದೇನೆ. ಸಿಎಂ ಬದಲಾದರೆ ಸಚಿವ ಸಂಪುಟವೂ ಬದಲಾಗಬೇಕು ಎನ್ನುವುದು ನನ್ನ ನಿಲುವು ಎಂದರು
[t4b-ticker]
+ There are no comments
Add yours