ಎರಡು ಕಡೆಗಳಲ್ಲಿ ಅನಾಮಧೇಯ ಶವ ಪತ್ತೆ

 

 

 

 

ಅನಾಮಧೇಯ ಶವಪತ್ತೆ
**
ಚಿತ್ರದುರ್ಗ,ಜೂನ್06:
 ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಗೊಲ್ಲರಹಟ್ಟಿ ಗ್ರಾಮದ ಸಮೀಪ ಕಟ್ ಕಾಲುವೆ ಬಳಿ ಅಂಡರ್ ಪಾಸ್ ಕೆಳಭಾಗದಲ್ಲಿ ಅನಾಮಧೇಯ ವ್ಯಕ್ತಿ ಮೃತಪಟ್ಟ ಪ್ರಕರಣ ಜೂನ್ 02ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
 ಮೃತ ವ್ಯಕ್ತಿಯ ಚಹರೆ ಇಂತಿದೆ. ಅಪರಿಚಿತ ವ್ಯಕ್ತಿ ಚಿಂದಿ ಖಾಲಿ ಬಾಟಲಿ ಹಾಯುವವನು ಆಗಿದ್ದು, ಸುಮಾರು 50 ರಿಂದ 55 ವರ್ಷ ವಯಸ್ಸಿನ ಗಂಡಸು.  ಸುಮಾರು 5 ಅಡಿ  6 ಇಂಚು ಎತ್ತರ. ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಸುಮಾರು 4 ಇಂಚು ಉದ್ದದ ಕಪ್ಪು ಬಿಳಿ ಕೂದಲು ಮುಖದಲ್ಲಿ ಸುಮಾರು 1 ಇಂಚು  ಉದ್ದದ ಕಪ್ಪು ಬಿಳಿ ಬಣ್ಣದ  ಗಡ್ಡ ಮತ್ತು ಉದ್ದ ಮೀಸೆ ಇರುತ್ತದೆ.
ಮೃತ ಅನಾಮಧೇಯ ವ್ಯಕ್ತಿಯ ವಾರಸುದಾರರು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದು ಆರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.
=======
ಅನಾಮಧೇಯ ಶವಪತ್ತೆ
****
ಚಿತ್ರದುರ್ಗ,ಜೂನ್06:
 ಬಾಲೇನಹಳ್ಳಿ ಮತ್ತು ಚಳ್ಳಕೆರೆ ರೈಲು ನಿಲ್ದಾಣಗಳ ಮಧ್ಯೆ ಸುಮಾರು 55 ವರ್ಷದ ಅಪರಿಚಿತ ಗಂಡಸು ಮೃತಪಟ್ಟ ಪ್ರಕರಣ ಜೂನ್ 02ರಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
 ಮೃತನ ಚಹರೆ ಇಂತಿದೆ. ಅಪರಿಚಿತ ಗಂಡಸು ವಯಸ್ಸು ಸುಮಾರು 55-60 ವರ್ಷ. ಎತ್ತರ 4.6 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ತಲೆಯಲ್ಲಿ ಬಿಳಿ ಮತ್ತು  ಕಪ್ಪು ಮಿಶ್ರಿತ ಮೂರು ಇಂಚು ಉದ್ದದ ಕೂದಲು ಹಾಗೂ ಮೂರು ಇಂಚು ಉದ್ದನೆಯ ಗಡ್ಡ ಮೀಸೆ, ನೀಟಾದ ಮೂಗು ಮೂಗು ಹೊಂದಿರುತ್ತಾನೆ. ಬಿಳಿ ಮತ್ತು ನೀಲಿ, ಕಪ್ಪು ಬಣ್ಣದ ಮಿಶ್ರಿತ ಉದ್ದ ಗೆರೆಗಳಿರುವ ತುಂಬು ತೋಳಿನ ಅಂಗಿ, ಸಿಮೆಂಟ್ ಬಣ್ಣದ ಉದ್ದಗೆರೆಗಳಿರುವ ತುಂಬು ತೋಳಿನ ಅಂಗಿ, ಕೆಂಪು ಉಡಿದಾದ, ಕೇಸರಿ ಬಣ್ಣದ ಟವೆಲ್, ನೀಲಿ ಬಣ್ಣದಪಂಚೆ ಧರಿಸಿರುತ್ತಾನೆ.
 ಮೃತರ ವಾರಸುದಾರರು ಯಾರಾದರೂ ಪತ್ತೆಯಾದಲ್ಲಿ ಅಥವಾ ಮೃತನ ಹೋಲಿಕೆಯ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08192-259643 ಅಥವಾ  ಮೊಬೈಲ್ ಸಂಖ್ಯೆ 9480800469, 9480802123 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080-22871291 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

[t4b-ticker]

You May Also Like

More From Author

+ There are no comments

Add yours