ಕೋಟೆ ನಾಡಿನ ಎಲ್ಲಾ ರಸ್ತೆಗಳು 2 ವರ್ಷಗಳಲ್ಲಿ ಪೂರ್ಣ ಜನರ ಸಹಕಾರವಿರಲಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ : ನಗರದ ಎಲ್ಲಾ ಒಳ ರಸ್ತೆಗಳನ್ನು ಸುಧಾರಿಸಿಕೊಂಡು ನಂತರ ಮುಖ್ಯ ರಸ್ತೆಯನ್ನು ಗುಣಮಟ್ಟದಿಂದ ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ ಸರಸ್ವತಿ ಪುರಂ ಎರಡನೇ ಕ್ರಾಸ್ ಬಳಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ನಗದಲ್ಲಿ ಐಯುಡಿಪಿ ಲೇ ಹೌಟ್ , ಸರಸ್ವತಿಪುರಂ, ಗಾಂಧಿನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 1 ಕೋಟಿ 60 ಲಕ್ಷ ವೆಚ್ಚದಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿವೆ. ಸರಸ್ವತಿ ಪುರಂ ಎರಡನೇ ಹಂತದ ರಸ್ತೆ ಕಾಮಗಾರಿಯನ್ನು ಅಮೃತ್ ಯೋಜನೆಯಲ್ಲಿ ಮಾಡಲಾಗುತ್ತಿದೆ. ಪ್ರವಾಸಿಮಂದಿರದಿಂದ ಗಾಂಧಿವೃತ್ತ, ಗಾಂಧಿವೃತ್ತದಿಂದ ಮಾಳಪ್ಪನಹಟ್ಟಿವರೆಗೂ ರಸ್ತೆ ಅಗಲೀಕರಣ ಕಾಮಗಾರಿ 85 ಕೋಟಿ ರೂ ವೆಚ್ಚದಲ್ಲಿ ನಡೆಸಲಾಗುತ್ತಿದೆ‌ ಎಂದರು. ಮತ್ತು ನಗರಕ್ಕೆ ದಿನದ 24/7 ದಿನ ಅಮೃತ್ ಯೋಜನೆಯಲ್ಲಿ 112 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಳಿಯ ಯುನಿಯನ್ ಪಾರ್ಕ ಹೊಸದಾಗಿ ನಿರ್ಮಿಸಲಾಗಿದೆ. ಅದರಲ್ಲಿ ಕಲರ್ ಸಿಂಕಲೇರ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಗ್ಯಾಸ ಸಿಲಿಂಡರ್ ಹೊತ್ತು ತರುವ ಅವಶ್ಯಕತೆ ಇಲ್ಲ. ತಮ್ಮ ಮನೆಗೆ ಗ್ಯಾಸ್ ಕಲೆಕ್ಷನ್ ನೀಡುತ್ತೇವೆ.. ಅದು ಸಹ ಮೀಟರ್ ಮೂಲಕ ಬಿಲ್ ಕಟ್ಟಬೇಕಾಗುತ್ತದೆ ಇನ್ನು 1-2 ವರ್ಷದಲ್ಲಿ ಎಲ್ಲಾ ಕೆಲಸ ಮುಗಿಯುತ್ತದೆ. ಗ್ಯಾಸ್ ಲೈನ್ ನಗರದ 3-4 ವಾರ್ಡ್ ಗಳಲ್ಲಿ ಕೆಲಸ ಆರಂಭವಾಗಿದೆ. ಚಳ್ಳಕೆರೆ ಬಳಿಯ ಹಳೆಯ ಬೆಂಗಳೂರು ರಸ್ತೆಯನ್ನು 8 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಚಳ್ಳಕೆರೆ ಸರ್ಕಲ್ ಅಗಲೀಕರಣ ಮಾಡಲಾಗುತ್ತಿದೆ. ನಗರಸಭೆ ಹಣದಲ್ಲಿ ಯುಜಿಡಿ ಕಲೆಕ್ಷನ್ ಮತ್ತು ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದರು. ನಗರದ ಹೊಸ ಲೇ ಹೌಟ್ ಮತ್ತು ಇತರೆ ಪಾರ್ಕ್ ಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. 9 ಕೋಟಿ ವೆಚ್ಚದಲ್ಲಿ ಇಕ್ಸ್ಟೇನಷನ್ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು. ನಗರಸಭೆ ಪೌರಯುಕ್ತ ಹನುಮಂತರಾಜು, ನಗರಸಭೆ ಸದಸ್ಯ ಬಾಸ್ಕರ್, ಕುಡಿಯುವ ನೀರಿನ ಇಂಜಿನಿಯರ್ ವಿಭಾಗದ ಚೇತನಾ, ಮುಖಂಡರು ಇದ್ದರು.

[t4b-ticker]

You May Also Like

More From Author

+ There are no comments

Add yours