ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಡಯಲ್112 ವಾಹನದ ಪೊಲೀಸರು

 

 

 

 

ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಡಯಲ್112 ವಾಹನದ ಪೊಲೀಸರು
******
ಚಿತ್ರದುರ್ಗ,ಮಾರ್ಚ್23:
ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಬಳಿ ಅಪಘಾತಗೊಂಡ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಹಾಗೂ  ಅಪಘಾತಗೊಂಡ ವಾಹನನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಡಯಲ್ 112 ವಾಹನದ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.
ಮಾರ್ಚ್ 23 ರಂದು ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಬಳಿ ಅಪಘಾತವಾಗಿರುವ ಬಗ್ಗೆ  ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ-112ಗೆ (ಇಆರ್‍ಎಸ್‍ಎಸ್) ಕರೆ ಬಂದಿದ್ದು, ಕೂಡಲೇ ಇಆರ್‍ಎಸ್‍ಎಸ್ ಕೇಂದ್ರದ ಸಿಬ್ಬಂದಿ ಮನೋಹರ್ ರವರು ಹೊಯ್ಸಳ-7 ವಾಹನಕ್ಕೆ ವಿಷಯ ತಿಳಿಸಿದ್ದು,  ಕೂಡಲೇ ಕಾರ್ಯ ವ್ರವೃತ್ತರಾದ ಹೊಯ್ಸಳ-7 ವಾಹನದಲ್ಲಿ ಕರ್ತವ್ಯ ನಿರತರಾದ ಸಿಬ್ಬಂದಿಗಳಾದ ಕುಮಾರ್ ಮತ್ತು ಮಧು ಅವರು ಘಟನಾ ಸ್ಥಳಕ್ಕೆ ಧಾವಿಸಿ   ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಕೂಡಲೇ ಅಂಬುಲೆನ್ಸ್‍ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಕಳುಹಿಸಿಕೊಟ್ಟು, ಅಪಘಾತಗೊಂಡ ವಾಹನನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಹೊಸದುರ್ಗ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಹೊಯ್ಸಳ-7 ವಾಹನದ ಪೊಲೀಸ್‍ರ ಮತ್ತು ಇಆರ್‍ಎಸ್‍ಎಸ್ ಸಿಬ್ಬಂದಿಗಳ ಈ ಕಾರ್ಯವನ್ನು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಶ್ಲಾಘಿಸಿದ್ದಾರೆ. ಸಾರ್ವಜನಿಕರು ಯಾವುದೇ ತುರ್ತು ಸಂದರ್ಭದಲ್ಲಿ ಡಯಲ್-112 ಸಂಖ್ಯೆಗೆ ಕರೆ ಮಾಡಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours