ಪ್ರೀತಿಯಿಂದ ನೋಡುವವರು ಸಂಖ್ಯೆ ಕಡಿಮೆಯಾಗಿದೆ: ಸಚಿವ ಶ್ರೀರಾಮುಲು.

 

 

 

 

ಚಿತ್ರದುರ್ಗ ಮಾ. ೧೩
ಇಂದಿನ ದಿನಮಾನದಲ್ಲಿ ಪ್ರೀತಿಯಿಂದ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸಮಾಜ ಕಲ್ಯಾಣ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀರಾಮುಲು ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿನ ಶ್ರೀ ಗುರು ಕರಿಸಿದ್ದೇಶ್ವರಜ್ಜಯ್ಯಸ್ವಾಮಿ ಮಠದ ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಇಲ್ಲಿನ ತಾಯಿಯವರಾದ ಶ್ರೀ ಅಮ್ಮಮಹದೇವಮ್ಮನವರು ಹಲವಾರು ವರ್ಷಗಳಿಂದ ನನಗೆ ಪರಿಚಯದವರಾಗಿದ್ದು, ಈ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿದ್ದರು ಅದರೆ ಕಾರಣಾಂತರದಿಂದ ಬರಲಾಗಿರಲಿಲ್ಲ, ಈ ಕ್ಷೇತ್ರದಲ್ಲಿ ನಾಳೆ ರಥೋತ್ಸವ ನಡೆಯಲಿದ್ದು ಅಗ ನಾನು ಬರಬೇಕಿತ್ತು ಆದರೆ ನಾಳೆ ವಿಧಾನ ಸಭೆಯ ಅಧೀವೇಶನ ನಡೆಯುವುದರಿಂದ ಅಲ್ಲಿ ಭಾಗವಹಿಸಬೇಕಿರುವುದರಿಂದ ರಥೋತ್ಸವದ ಮುನ್ನಾ ದಿನ ಬಂದಿದ್ದೇನೆ ಎಂದರು.
ಇಂದಿನ ದಿನಮಾನದಲ್ಲಿ ಪ್ರೀತಿಯನ್ನು ನೀಡುವವರ ಸಂಖ್ಯೆ ಕಡಿಮೆಯಾಗಿದೆ. ನಮಗೂ ತಾಯಿಯವರಿಗೂ ಸಂಬಂಧ ಇಲ್ಲ ಆದರೂ ಸಹಾ ಅವರು ನನನ್ನು ಮಗನ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಬೆಟ್ಟದ ಮೇಲಿನ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಸಂಬಂಧ ಇಲ್ಲ ಆದರೆ ಎರಡು ಸೇರಿದರೆ ಮಾತ್ರ ಸೊಗಸಾಗಿ ಇರುತ್ತದೆ ಎಂದ ಸಚಿವರು, ಇದೇ ರೀತಿ ತಾಯಿಯೂ ಪ್ರೀತಿಯನ್ನು ತೋರಿಸುವುದರ ಮೂಲಕ ರಾಜಕಾರಣದಲ್ಲಿ ಶ್ರೇಯಸ್ಸ ಸಿಗಲಿ ಎಂದು ಪೂಜೆಯನ್ನು ಮಾಡಿದ್ದಾರೆ ಇದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಮಹಾ ಶಿವರಾತ್ರಿ ಮಹೋತ್ಸವದ ಅಂಗವಾಗಿ ಗೋಪೂಜೆ, ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ರುದ್ರಾಭೀಷೇಕ, ರುದ್ರ ಹೋಮ ನಡೆದಿದ್ದು, ಅಮ್ಮನವರಿಗೆ ಉಡಿ ತುಂಬುವ ಕಾರ್ಯವನ್ನು ನೇರವೇರಿಸಲಾಯಿತು. ಇದರೊಂದಿಗೆ ನವಗ್ರಹ ಪೂಜೆ, ಹೂವಿನ ಪಲ್ಲಕ್ಕಿ ಉತ್ಸವವನ್ನು ನೇರವೇರಿ ಸಲಾಯಿತು.
ಈ ಸಂದರ್ಭದಲ್ಲಿ ಭಕ್ತಾಧಿಗಳಾದ ಸೋಮಶೇಖರ್, ಜಯಪಾಲಯ್ಯ, ಕಲ್ಲಂ ಸೀತರಾಮರೆಡ್ಡಿ, ನೆಲ್ಲಿಕಟ್ಟೆ ಸಿದ್ದೇಶ್, ಶಶೀಧರ್ ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours