ಕಾಂಗ್ರೆಸ್ ಪಕ್ಷದವರು ಭದ್ರಾವತಿಯನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ:ಸಚಿವ ರಾಮುಲು.

 

 

 

 

ಚಿತ್ರದುರ್ಗ ಮಾ. ೧೩: ಭದ್ರಾವತಿಯನ್ನು ಕಾಂಗ್ರೆಸ್‌ನವರು ಪಾಕಿಸ್ತಾನ ಮಾಡಲು ಹೊರಟಿದ್ದಾರೆಯೇ? ಎಂದು ಕಾಂಗ್ರೆಸ್ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಪ್ರಶ್ನಿಸಿದರು.

ತಾಲೂಕಿನ ಬೆಳಗಟ್ಟ ಶ್ರೀಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕಾಲ ಚಕ್ರ ಹೀಗೆ ಇರುವುದಿಲ್ಲವೆಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಹೇಳಿದ್ದೆ. ಬಿಜೆಪಿ, ಹಿಂದು ಪರ ಸಂಘಟನೆಯ ಸಾವಿರಾರು ಕಾರ್ಯಕರ್ತರ ವಿರುದ್ಧ ಕೇಸು ಹಾಕಿ ರೌಡಿ ಶೀಟ್ ಒಪನ್ ಮಾಡಿದ್ದೀರಲ್ಲಾ ಆಗ ಎಲ್ಲಿ ಹೋಗಿತ್ತು ನಿಮ್ಮ ಬುದ್ದಿ ಸ್ವಾರ್ಥದಿಂದ ಶಾಸಕ ಸಂಗಮೇಶ್ ಮಗನ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದರು.

 

 

ಕಾಂಗ್ರೆಸ್ ಪಕ್ಷದವರು ಇಂದು ಶಿವಮೊಗ್ಗದಲ್ಲಿ ಶಿವಮೊಗ್ಗ ಚಲೋ ಹಮ್ಮಿಕೊಂಡಿದ್ದಾರೆ ಇದನ್ನು ನೋಡಿದರೆ ಕಾಂಗ್ರೆಸ್‌ನವರು ನೈತಿಕವಾಗಿ ದಿವಾಳಿಯಾಗಿದ್ದಾರೆ.ಈ ಹಿಂದೆ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿದ್ದಾಗ ಆರ್.ಎಸ್.ಎಸ್ ಹಾಗೂ ಹಿಂದೂ ಪರ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಿಸಿದ್ದರು.ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ ಹಾಗೂ ಇತರೆ ಜಿಲ್ಲೆಗಳಲ್ಲಿ ಸುಮಾರು ೪ ಸಾವಿರಕ್ಕೂ ಅಧಿಕ ಹಿಂದೂ ಪರ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಭದ್ರಾವತಿ ಶಾಸಕರ ಮಗನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ನವರು ಬಂಧಿಸಿದ್ದಾರೆ.ಅದಕ್ಕೆ ಬೇರೆದೆ ಅರ್ಥ ಕಲ್ಪಿಸಿ ಶಿವಮೊಗ್ಗ ಚಲೋ ಹಮ್ಮಿಕೊಂಡಿದ್ದಾರೆ.ಕಾಂಗ್ರೆಸ್ ಪಕ್ಷದವರು ಭದ್ರಾವತಿಯನ್ನು ಪಾಕಿಸ್ಥಾನ ಮಾಡಲು ಹೊರಟಿದ್ದಾರೆ.ಕಾಂಗ್ರೆಸ್ ನವರು “ಒನ್ ನೇಷನ್, ಒನ್ ಎಲೆಕ್ಷನ್” ವಿಚಾರದಲ್ಲೂ ಹಾಗೂ ಬಜೆಟ್ ವಿಚಾರದಲ್ಲೂ ಅಧಿವೇಶನದಲ್ಲಿ ಚರ್ಚೆಗೆ ಬರುತ್ತಿಲ್ಲ ಎಂದ ಸಚಿವರು ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲು ನಿಮಗೆ ಯಾವ ನೈತಿಕತೆ ಇದೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ನಾವು ಶ್ರೀರಾಮನ ಹೆಸರಿನಲ್ಲಿ ಅಧಿಕಾರ ಮಾಡುತ್ತೇವೆ ಅದನ್ನು ವಿರೋಧಿಸುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ, ಸಿ.ಡಿ ಪ್ರಕರಣ ಎಸ್.ಐ.ಟಿ ತನಿಖೆಯಲ್ಲಿದ್ದು ರಮೇಶ್ ಜಾರಕಿಹೊಳಿರವರು ಆರೋಪ ಮುಕ್ತರಾಗಲಿದ್ದಾರೆ ಎಂಬ ನಂಬಿಕೆ ಇದೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರಕ್ಕೆ ನಾನು ನನ್ನ ಸ್ವಂತ ತೀರ್ಮಾನದಿಂದ ಬಂದವನಲ್ಲ ಪಕ್ಷದ ತೀರ್ಮಾನದಿಂದ ಬರಬೇಕಾಯಿತು. ಉಸ್ತುವಾರಿ ಬದಲಿಸಿ ಎಂದು ಕೇಳಿಲ್ಲ. ನನ್ನ ಜನ್ಮ ಭೂಮಿ ಬಳ್ಳಾರಿ, ಕರ್ಮ ಭೂಮಿ ಚಿತ್ರದುರ್ಗ ಹಾಗೂ ಬಾಗಲಕೋಟೆ ಎಂದರು. ಸಿಡಿ ಪ್ರಕರಣದಲ್ಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ ಎಂದು ತಿಳಿಸಿ ಮರಾಠರಿಗೆ ಒಂದು ಚೂರು ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ ಎಂದು ನುಡಿದರು.

[t4b-ticker]

You May Also Like

More From Author

+ There are no comments

Add yours