1.30 ಕೋಟಿ ರೂ ವೆಚ್ಚದಲ್ಲಿ ಸುಮಾರು 6 ಉದ್ಯಾನವನ ನೂತನವಾಗಿ ನಿರ್ಮಾಣ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

 

 

 

 

ವರದಿ: ಸುರೇಶ್ ಪಟ್ಟಣ್ ಚಿತ್ರದುರ್ಗ ಮಾ. ೧೧
ನಗರಾಭೀವೃದ್ದಿ ಪ್ರಾಧಿಕಾರದಿಂದ ಸುಮಾರು ೧.೩೦ ಕೋಟಿ ರೂ ವೆಚ್ಚದಲ್ಲಿ ಸುಮಾರು ೬ ಉದ್ಯಾನವನ್ನು ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ ಇದೇ ರೀತಿ ನಗರಸಭೆಯ ವ್ಯಾಪ್ತಿಯಲ್ಲಿನ ಪಾರ್ಕಗಳನ್ನು ಸಹಾ ಅಭೀವೃದ್ದಿ ಮಾಡಲಾಗುವುದೆಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ನಗರದ ತುರುವನೂರು ರಸ್ತೆಯ ಕಮ್ಮರೆಡ್ಡಿ ಕಲ್ಯಾಣ ಮಂಟಪದ ಬಳಿ ನಗರಾಭೀವೃದ್ದಿ ಪ್ರಾಧಿಕಾರದಿಂದ ನೂತನವಾಗಿ ನಿರ್ಮಾಣ ಮಾಡಲಾಗುವ ಪಾರ್ಕ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಚಿತ್ರದುರ್ಗ ನಗರದ ವ್ಯಾಪ್ತಿಯಲ್ಲಿ ಬರುವ ಪಾರ್ಕಗಳನ್ನು ನಗರಸಭೆವತಿಯಿಂದ ಅಭಿವೃದ್ದಿ ಮಾಡಲಾಗುತ್ತದೆ ಇದಕ್ಕಾಗಿ ಅನುದಾನವನ್ನು ಆಯವ್ಯಯದಲ್ಲಿ ಇರಿಸಲಾಗಿದೆ. ಇದ್ದಲ್ಲದೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ನಗರದ ಕೆಲವು ಪಾರ್ಕಗಳನ್ನು ಅಭೀವೃದ್ದಿ ಮಾಡಿದ್ದು ಅದರಲ್ಲಿ ಕೆಲವು ಪೂರ್ಣವಾಗಿದ್ದು ಶೀಘ್ರವಾಗಿ ಉದ್ಘಾಟನೆ ಮಾಡಲಾಗುವುದೆಂದು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ರಸ್ತೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದ್ದು, ಕೆಲವೆಡೆ ಪೂರ್ಣವಾಗಿದೆ ಇಂತಹ ಕಡೆಗಳಲ್ಲಿ ಸರ್ಕಲ್ ಗಳಲ್ಲಿ ಹೋವಿನ ಕುಂಡಗಳನ್ನು ಇಟ್ಟು ಸುಂದರವಾಗಿ ಕಾಣುವಂತೆ ಮಾಡಲಾಗುವುದು ಇದಕ್ಕಾಗಿ ತೋಟಗಾರಿಕೆ ಇಲಾಖೆವತಿಯಿಂದ ಟೆಂಡರ್ ಕರೆಯಲಾಗಿದೆ ಎಂದು ಶಾಸಕರು, ಚಿತ್ರದುರ್ಗ ನಗರದ ಹೂರಗಡೆ ಇರುವಂತ ಪಾರ್ಕಗಳನ್ನು ನಗರಾಭೀವೃದ್ದಿ ಪ್ರಾಧಿಕಾರದಿಂದ ನೂತನವಾಗಿ ನಿರ್ಮಾಣ ಮಾಡಲಾಗುವುದು ಹಳೆಯ ಪಾರ್ಕ ಇದ್ದಲ್ಲಿ ಅವುಗಳನ್ನು ಅಭೀವೃದ್ದಿ ಮಾಡಲಾಗುವುದು ಎಂದು ತಿಳಿಸಿದರು.
ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಬದರಿನಾಥ್ ಮಾತನಾಡಿ ನಗರದ ಹೊರಗಡೆ ಇರುವ ಪಾರ್ಕಗಳನ್ನು ನಿರ್ಮಾಣ ಮಾಡುವುದ್ದಲ್ಲದೆ ಅದರಲ್ಲಿ ಜನತೆಗೆ ಬೇಕಾದ ಅಗತ್ಯವಾದ ವಾಕಿಂಗ್ ಮಾಡಲು ಉತ್ತಮವಾದ ಜಾಗ, ಇಂದಿನ ಆಧುನಿಕತೆ ತಕ್ಕಂತೆ ಜಿಮ್, ಕುರ್ಚಿಗಳನ್ನು ಹಾಕುವುದರೊಂದಿಗೆ ನೆರಳಿನ ಸಸಿಗಳನ್ನು ನಡೆಲಾಗುವುದು ಎಂದು ಹೇಳಿದರು.
ನಗರಸಭಾ ಸದಸ್ಯರಾದ ಸುರೇಶ್ ಮಾಜಿ ಸದಸ್ಯ ರಮೇಶ್, ಆಯುಕ್ತರಾದ ವಿಜಯಕುಮಾರ್, ಮುಖಂಡರಾದ ಮಹಡಿ ಶಿವಮೂರ್ತಿ, ವಿಜಯಕುಮಾರ್, ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜಪ್ಪ, ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

[t4b-ticker]

You May Also Like

More From Author

+ There are no comments

Add yours