ಜಿಲ್ಲೆಯಾದ್ಯಂತ 11 ಇಆರ್‍ಎಸ್‍ಎಸ್ ವಾಹನಗಳು ಸೇವೆಗೆ ಮೀಸಲು
ತುರ್ತು ಸಹಾಯ ಸ್ಪಂದನ ವ್ಯವಸ್ಥೆ ಆರಂಭ

 

 

 

 

ಚಿತ್ರದುರ್ಗ, ಜನವರಿ27:
ಸಾರ್ವಜನಿಕರು ಪೊಲೀಸ್ ನೆರವು ಬೇಕಾದಲ್ಲಿ, ಅಗ್ನಿ ದುರಂತ ಸಂಭವಿಸಿದ್ದಲ್ಲಿ ಮತ್ತು ಇತರೆ ವಿಪತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಯದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.
 ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಇಆರ್‍ಎಸ್‍ಎಸ್) ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
 ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ((One India One Emergency Nuber-112) ತುರ್ತು ಸಹಾಯ ಸ್ಪಂದನ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತಂದಿದ್ದು, ಈ ಪರಿಕಲ್ಪನೆಯನ್ನು ಕರ್ನಾಟಕ ರಾಜ್ಯದಲ್ಲಿಯು ಸಹ ಅನುಷ್ಠಾನಗೊಳಿಸಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಚಾಲನೆ ನೀಡಲಾಗುತ್ತಿದೆ ಎಂದರು.

 

 

112 ತುರ್ತು ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿದಾಗ ಕೇವಲ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, ತ್ವರಿತವಾಗಿ ಅವರ ಸಮಸ್ಯೆಗೆ ಸ್ಪಂದಿಸಲಾಗುವುದು. ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದಾಗ ಬೆಂಗಳೂರಿನಲ್ಲಿರುವ Public Safety Answering Point (PSAP) ಕೇಂದ್ರದಲ್ಲಿ ಕರೆ ಸ್ವೀಕರಿಸಿ ಕರೆ ಮಾಡಿದವರ ಸ್ಥಳದ ಆಧಾರದ ಮೇಲೆ ಸಂಬಂಧಪಟ್ಟ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಕರೆಯನ್ನು ಕೂಡಲೇ ವರ್ಗಾಯಿಸಲಾಗುತ್ತದೆ.  ತಕ್ಷಣ ಜಿಲ್ಲಾ ಕೇಂದ್ರದಲ್ಲಿ ಕರೆ ಮಾಡಿದ ವ್ಯಕ್ತಿಯ ವಿವರಗಳನ್ನು ಪಡೆದು ವ್ಯಕ್ತಿ ಇರುವ ಸ್ಥಳಕ್ಕೆ ಇಆರ್‍ಎಸ್‍ಎಸ್ ಗಾಗಿ ಮೀಸಲಿರುವ ವಾಹನದಲ್ಲಿ ಪೊಲೀಸ್ ಅಧಿಕಾರಿಗನ್ನು ಕಳುಹಿಸಿ ಕರೆ ಮಾಡಿದವರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.
 ಚಿತ್ರದುರ್ಗ ಜಿಲ್ಲೆಯಲ್ಲಿ ಇಆರ್‍ಎಸ್‍ಎಸ್ ಕಾರ್ಯಕ್ಕಾಗಿಯೇ ಆಧುನಿಕ ತಂತ್ರಜ್ಞಾನವುಳ್ಳ 11 ಇಆರ್‍ಎಸ್‍ಎಸ್ ವಾಹನಗಳನ್ನು ಮೀಸಲಿರಿಸಿದ್ದು, ಈ ವಾಹನದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ದಿನದ 24 ಗಂಟೆಯೂ ಸೇವೆ ಒದಗಿಸಲಿದೆ ಎಂದರು.
ತುರ್ತು ಸೇವೆ ಪಡೆಯುವ ವಿಧಾನ: ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ. ಫೋನ್‍ನಲ್ಲಿ 112 ನಂಬರಿಗೆ ಕರೆ ಮಾಡುವುದು, 112 india ಮೊಬೈಲ್ ಆಪ್ ಮೂಲಕ ವಿನಂತಿಸಬಹುದು. www.ka.ners.in  ಜಾಲತಾಣದ ಮೂಲಕ ವಿನಂತಿಸಬಹುದು. Erss112ktk@ksp.gov.in ಗೆ ಇ-ಮೇಲ್ ಕಳುಹಿಸಬಹುದು. ಪ್ಯಾನಿಕ್ ಅಲರ್ಟ್‍ಗಾಗಿ ಸಾಮಾನ್ಯ ಮೊಬೈಲ್ (ಕೀ ಪ್ಯಾಡ್ ಪೋನ್) ಪೋನಿನಲ್ಲಿ “5” ಅಥವಾ “9” ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡುವುದು, ಪ್ಯಾನಿಕ್ ಅಲರ್ಟ್‍ಗಾಗಿ ಸಾಮಾನ್ಯ ಮೊಬೈಲ್ ಪೋನಿನಲ್ಲಿ (ಕೀ ಪ್ಯಾಡ್ ಪೋನ್) ಪವರ್ ಬಟನ್ ಅನ್ನು 3 ಅಥವಾ 5 ಬಾರಿ ವೇಗವಾಗಿ ಪ್ರೆಸ್ ಮಾಡುವುದು ಈ ವಿಧಾನಗಳಿಂದ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ತುರ್ತು ಸೇವೆಗಳನ್ನು ಪಡೆಯಬಹುದು ಎಂದರು.

[t4b-ticker]

You May Also Like

More From Author

+ There are no comments

Add yours