ಜಿಲ್ಲೆಯಲ್ಲಿ ಶೇ.80ರಷ್ಟು ಕೋವಿಡ್-19 ರೋಗ ಗುಣಮುಖ: ಡಿಹೆಚ್‍ಒ ಡಾ.ಫಾಲಾಕ್ಷ

 

 

 

 

ಚಿತ್ರದುರ್ಗ, ಅಕ್ಟೋಬರ್12:
ಜಿಲ್ಲೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಶೇ.80ರಷ್ಟು ಕೋವಿಡ್-19 ರೋಗದಿಂದ ಗುಣಮುಖ ಹೊಂದಿದ್ದು, ಇಲ್ಲಿಯವರೆಗೆ ಮರಣದ ಸಂಖ್ಯೆ 45 ಆಗಿದ್ದು, ಮರಣದ ದರ ಕೂಡ ಶೇ.0.69 ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ತಿಳಿಸಿದರು.
 ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪಾಪೇನಹಳ್ಳಿ, ಲಿಂಗದಹಳ್ಳಿ ಗ್ರಾಮಗಳಿಗೆ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಅವರು ಭೇಟಿ ನೀಡಿ ಕೋವಿಡ್-19 ಪ್ರಕರಣ ಮತ್ತು ಐಎಲ್‍ಐ, ಸಾರಿ ಪ್ರಕರಣಗಳು ಇರುವ ಮನೆಗಳಿಗೆ ಭೇಟಿ ಆರೋಗ್ಯ ವಿಚಾರಿಸಿದರು.
 ಜಿಲ್ಲೆಯಲ್ಲಿ ಇದುವರೆಗೆ 9652 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 8177 ಪ್ರಕರಣಗಳು ಕೋವಿಡ್-19 ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 1383 ಸಕ್ರಿಯ ಪ್ರಕರಣಗಳು ಇದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
 ಜಿಲ್ಲೆಯಲ್ಲಿ 1900 ಗಂಟಲು ದ್ರವ ಪರೀಕ್ಷೆಗೆ ಗುರಿ ನಿಗದಿಪಡಿಸಿದ್ದು, ಸಂಪೂರ್ಣವಾಗಿ ಗುರಿಯನ್ನು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಜವಾಬ್ದಾರಿಯಿಂದ ಮತ್ತು ಆರ್‍ಆರ್‍ಟಿ ತಂಡದಿಂದ ಗುರಿಯನ್ನು ಸಾಧಿಸಿರುತ್ತಾರೆ. ಇನ್ನೂ ಮುಂದಿನ ದಿನಗಳಲ್ಲಿ ತಂಡಗಳ ಸಂಖ್ಯೆ ಹೆಚ್ಚಿಸಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರ ರೋಗ ಪತ್ತೆ ಮತ್ತು ರೋಗಕ್ಕೆ ಶೀಘ್ರ ಚಿಕಿತ್ಸೆಯಿಂದ ಕೋವಿಡ್-19ನನ್ನು ತಡೆಗಟ್ಟಬಹುದು. ಶೇ.11ರಷ್ಟು ತೀವ್ರತರ ರೋಗದ ಲಕ್ಷಣಗಳು ಇದ್ದು, ಅದನ್ನು ಶೇ.5ಕ್ಕಿಂತ ಕಡಿಮೆಗೊಳಿಸಲು ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮೇಲ್ವಿಚಾರಕ ಹನುಮಂತಪ್ಪ, ಆರ್‍ಆರ್‍ಟಿ ತಂಡದವರು, ಆಶಾ ಕಾರ್ಯಕರ್ತರು ಹಾಜರಿದ್ದರು.
ಫೋಟೋ ವಿವರ: ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪಿಯ ಪಾಪೇನಹಳ್ಳಿ, ಲಿಂಗದಹಳ್ಳಿ ಗ್ರಾಮಗಳಿಗೆ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಅವರು ಕೋವಿಡ್-19 ಪ್ರಕರಣ, ಐಎಲ್‍ಐ, ಸಾರಿ ಪ್ರಕರಣಗಳು ಇರುವ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

 

 

[t4b-ticker]

You May Also Like

More From Author

+ There are no comments

Add yours