ಜಗದೀಪ್ ಧನಕರ್‌ ಅಣುಕಿಸಿದ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ

 

 

 

 

ಚಿತ್ರದುರ್ಗ :ಸಂಸತ್‌ನಲ್ಲಿ ಉಪ ರಾಷ್ಟ್ರಪತಿಗಳಾದ  ಜಗದೀಪ್ ಧನಕರ್‌ರವರ ಬಗ್ಗೆ ಅಣುಕಿಸಿ ಅದನ್ನು ವಿಡಿಯೋ  ಮಾಡಿ ವಿಕೃತಿಯನ್ನು ಮೆರದ ಕಾಂಗ್ರೆಸ್ ವಿರುದ್ದ ಇಂದು ಬಿಜೆಪಿ            ( BJP) ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿ ಕಾಂಗ್ರೆಸ್ ಮತ್ತು ಟಿಎಂ.ಸಿ. ಸಂಸದರ ವಿರುದ್ದ ಧಿಕ್ಕಾರವನ್ನು ಕೂಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಕಾರ್ಯದರ್ಶಿ ಮಲ್ಲಿಕಾರ್ಜನ್ ಸಂಸತ್ತಿನಲ್ಲಿ  ಕಾಂಗ್ರೆಸ್ ತನ್ನ ವಿಕೃತಿಯನ್ನು ಮೆರದಿದ್ರೆ, ಅದೊಂದು ಪೂಜ್ಯನೀಯವಾದ ಜಾಗ ಅಲ್ಲಿ ಯಾವ ರೀತಿ ಇರಬೇಕೆಂದು ಕಾಂಗ್ರೆಸ್ ಸಂಸದರಿಗೆ ಗೋತ್ತಿಲ್ಲ, ಉಪ ರಾಷ್ಟçಪತಿಗಳು ಸಂವಿಧಾನದ ಪರ್ಯಾಯವಾದ ವ್ಯಕ್ತಿಯಾಗಿದ್ದಾರೆ ಸಂವಿಧಾನದ ಪರವಾಗಿ ಅಲ್ಲಿಯ ಪೀಠವನ್ನು ಆಲಂಕರಿಸಿದ್ದಾರೆ.

ಎಲ್ಲರೂ  ಗೌರವವನ್ನು ನೀಡಬೇಕಿದೆ ಆದು ಬಿಟ್ಟು ಅವರನ್ನು ತೇಜೋವಧೆ ಮಾಡುವ ಕಾರ್ಯವನ್ನು ಮಾಡಿದ್ದಾರೆ ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.

 

 

 

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಧಿಕಾರವನ್ನು ಕಳೆದುಕೊಂಡು ಹತಾಶರಾಗಿ ಇಂದು ಏನು ಮಾಡಬೇಕೆಂದು ತಿಳಿಯದೆ ಉಪ ರಾಷ್ಟçಪತಿಗಳಿಗೆ ಅವಮಾನ ಮಾಡುವ ಕೆಲಸವನ್ನು ಸಂಸತ್‌ನಲ್ಲಿ ಕಾಂಗ್ರೆಸ್ ಸಂಸದರು ಮಾಡಿದ್ದರೆ. ದೇಶ ಸಂವಿಧಾನದ ರೀತಿಯಲ್ಲಿ ನಡೆಯುತ್ತಿದೆ, ಅದರ ಪ್ರತಿನಿಧಿಯಾಗಿ ಉಪ ರಾಷ್ಟ್ರಗಳಾದ  ಕೆಲಸವನ್ನು ಮಾಡುತ್ತಾರೆ. ಉಪರಾಷ್ಟ್ರಗಳಾದ  ತೀರ್ಮಾನವನ್ನು ಕಾಂಗ್ರೆಸ್ ಪ್ರತಿಭಟಿಸುವ ಹಿನ್ನಲೆಯಲ್ಲಿ ಈ ರೀತಿ ಮಾಡಿದೆ.ಇದು ಅತೀರೇಕಕ್ಕೆ ಹೋಗಿ ಬ್ಯಾನರ್ಜಿ ಎಂಬುವವರು ಉಪರಾಷ್ಟ್ರಗಳಾದ   ಮಿಮಿಕ್ರಿ ಮಾಡುತ್ತಾರೆ. ಆಪಹಾಸ್ಯವಾಗಿ ಅಣುಕು ಪ್ರದರ್ಶನವನ್ನು ಮಾಡುತ್ತಾರೆ. ಈ ಚಿತ್ರಿಕರಣವನ್ನು ರಾಹುಲ್ ಗಾಂಧಿಯವರು ಮಾಡುತ್ತಾರೆ. ಇದನ್ನು ದೇಶದ ಜನತೆ ನೋಡಿದ್ದಾರೆ. ಇದು ಖಂಡನೀಯ ವಿಚಾರವಾಗಿದೆ ಎಂದರು.

ಹಿಂದುಳಿದ ವರ್ಗದಿಂದ ಬಂದಂತಹ ಉಪ ರಾಷ್ಟçಪತಿಗಳನ್ನು ಕಾಂಗ್ರೆಸ್ ಅವಮಾನ ಮಾಡುವ ಉದ್ದೇಶದಿಂದ ಈ ರೀತಿಯಾಗಿ ಮಾಡಿದೆ ಇವರು ಹಿಂದುಳಿದ, ರೈತ ನಾಯಕನಾಗಿ ಹೋರಾಟದ ಮೂಲಕ ರಾಜಕೀಯಕ್ಕೆ ಬಂದರು, ಈ ಹಿಂದೆ ಕಾಂಗ್ರೇಸ್‌ನಲ್ಲಿದ್ದ ಇವರು ತದ ನಂತರ ಬಿಜೆಪಿಗೆ ಬಂದು ಸಂಸದರಾಗಿ ಈಗ ಉಪ ರಾಷ್ಟಪತಿಗಳಾಗಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಈ ರೀತಿಯಾಗಿ ಅವಮಾನ ಮಾಡಿದ್ದಾರೆ. ಎಂದ ಮಲ್ಲಿಕಾರ್ಜನ್, ಇವರು ಕಾಂಗ್ರೆಸ್‌ನಲ್ಲಿದ್ದಾಗ ಅವರ ಬಗ್ಗೆ ಒಳ್ಳೆಯ ಅಭೀಪ್ರಾಯ ಇತ್ತು ಆದರೆ ಅವರು ಬಿಜೆಪಿಗೆ ಬಂದ ನಂತರ ಈಗ ಅವರ ಅಭೀಪ್ರಾಯ ಬದಲಾಗಿ ಅವರಿಗೆ ಅವಮಾನ ಮಾಡಿದ್ದಾರೆ. ಇದು ಸಂವಿಧಾನ ಪೀಠಕ್ಕೆ ಮತ್ತು ದೇಶದ ಜನತೆಗೆ ಮಾಡಿದ ಅವಮಾನವಾಗಿದೆ ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.

ಬೇರೆ ರಾಜ್ಯಗಳಲ್ಲಿ ಆಗಿರುವ ವಿವಿಧ ಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಪ್ರತಿಕ್ರಿಯೆಯನ್ನು ನೀಡಿದೆ ಅದರೆ ಬೆಳಗಾವಿಯಲ್ಲಿ ನಡೆದ ಮಹಿಳೆಯ ದೌರ್ಜನ್ಯದ ಬಗ್ಗೆ ಮಾತ್ರ ರಾಹುಲ್ ಗಾಂಧಿಯವರು ಇದುವರೆವಿಗೂ ಯಾವುದೇ ರೀತಿಯ ಮಾತನ್ನು ಸಹಾ ಆಡಿಲ್ಲ, ಇದು ನಾಚಿಕೇಯ ವಿಚಾರವಾಗಿದೆ ಎಂದ ಮುಂದಿನ ದಿನದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತಿ ಕಡಿಮೆ ಸ್ಥಾನ ಸಿಗುತ್ತದೆ ಎಂಬ ವರದಿಯಂತೆ ಕಾಂಗ್ರೆಸ್ ಈ ರೀತಿಯಾಗಿ ಆಡುತ್ತಿದೆ ಎಂದರು.

ಇದನ್ನೂ ಓದಿ: ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಎಲ್ಲಾ ಫೈನಲ್

ಈ ಪ್ರತಿಭಟನೆಯಲ್ಲಿ ಬಿಜೆಪಿ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಶಂಭು, ಪ್ರದೀಪ್, ಶೈಲಾ, ನಾಗರಾಜು, ಮನೋಜ್, ಪಾಂಡು, ಯಶವಂತ, ಕಿರಣ್, ಗೀರೀಶ್, ಲತಾ, ಸಂಜಯ್, ಕಾಂತರಾಜ್ ಪ್ರಕಾಶ್ ಓ ಗೌರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours