ಚಿತ್ರದುರ್ಗ: ಕಳೆದ ವರ್ಷ ಪೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿದ್ದ ಮುರುಘಾ ಶರಣರು ಕಳೆದ ಐದು ದಿನಗಳ ಹಿಂದೆಯಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ ಇಂದು ಮತ್ತೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru) ಪೊಲೀಸರು ಬಂಧಿಸಿ ಚಿತ್ರದುರ್ಗಕ್ಕೆ ಕರೆತಂದಿದ್ದರು. ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆಯದ ಕಾರಣ ಅವರನ್ನ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಚಿತ್ರದುರ್ಗದ ಗ್ರಾಮಾಂತರ ಠಾಣೆಯ ಪೊಲೀಸರು ಡಿವೈಎಸ್ಪಿ ನೇತೃತ್ವದಲ್ಲಿ ಮಧ್ಯಾಹ್ನ ಬಂಧಿಸಿದ್ದರು. ಆದರೆ ಈ ಬಂಧನಕ್ಕೆ ಹೈಕೋರ್ಟ್ (High Court) ತಡೆ ನೀಡಿದೆ. ಮುರುಘಾ ಶರಣರನ್ನ ಚಿತ್ರದುರ್ಗಕ್ಕೆ ಕರೆತಂದಿರುವುದು ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಪ್ರತಿಪಾದಿಸಿದೆ. ಅಲ್ಲದೆ ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿವ ಮೂಲಕ ಮುರುಘಾ ಶರಣರು ನಾಳೆ ಬಿಡುಗಡೆಗೊಳ್ಳಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ನಗರ ಮತ್ತು ಈ ಹಳ್ಳಿಗಳಲ್ಲಿ ನಾಳೆ ಕರೆಂಟ್ ಇರಲ್ಲ
ಅರೆಸ್ಟ್ ಮಾಡಲು ಆದೇಶ ನೀಡಿದ್ದ ಜಿಲ್ಲಾ ನ್ಯಾಯಾಲಯ
2ನೇ ಪೋಕ್ಸೊ ಕೇಸ್ನಲ್ಲಿ ಜಾಮೀನಿ ಪಡೆಯದ ಕಾರಣ ಸರ್ಕಾರಿ ಪರ ವಕೀಲರ ಅರ್ಜಿ ಮೇರೆಗೆ ಮುರುಘಾ ಶ್ರೀಗಳ ವಿರುದ್ಧ ಬಂಧನದ ವಾರೆಂಟ್ ನೀಡಿತ್ತು. ಹಾಗಾಗಿ ದಾವಣಗೆರೆಯ ವಿರಕ್ತಾ ಮಠದಲ್ಲಿದ್ದ ಮುರುಘಾ ಶರಣರನ್ನ ಸೋಮವಾರ ಚಿತ್ರದುರ್ಗ ಪೊಲೀಸರು ಬಂಂಧಿಸಿ, ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನ ಡಿಸೆಂಬರ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು.
ಹೈಕೋರ್ಟ್ ಆದೇಶ ಉಲ್ಲಂಘನೆ
ಆದರೆ ಈ ಬಂಧನದ ಆದೇಶದಿಂದ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಮುರುಘಾ ಶರಣರ ವಕೀಲರು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಬಂಧನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮೊದಲ ಪೋಕ್ಸೋ ಪ್ರಕರಣದಲ್ಲಿ ಷರತ್ತುಬದ್ದ ಜಾಮೀನು ನೀಡಿದ್ದ ಹೈಕೋರ್ಟ್, 2ನೇ ಪೋಕ್ಸೋ ಕೇಸ್ನಲ್ಲಿ ಬಾಡಿ ವಾರೆಂಟ್ ಇರುವುದರಿಂದ ಜೈಲಿನಲ್ಲಿ ಇರಿಸಲು ಸಾಧ್ಯವಿಲ್ಲ. ಅಲ್ಲದೆ 2ನೇ ಪೋಕ್ಸೋ ಪ್ರಕರಣ ಇನ್ನೂ ವಿಚಾರಣೆ ನಡೆಯುತ್ತಿದೆ ಎಂದು ಬಿಡುಗಡೆಗೆ ಆದೇಶ ನೀಡಿದೆ.
+ There are no comments
Add yours