ಕನ್ನಡ ರಾಜ್ಯೋತ್ಸವ-ಯೋಗ ಉತ್ಸವ
**********
ಚಿತ್ರದುರ್ಗ: ಪತಂಜಲಿ ಯೋಗ (Yoga) ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ, ಯುವ ಭಾರತ್ ಪತಂಜಲಿ ಕಿಸಾನ್ ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ-ಯೋಗ ಉತ್ಸವ ಉಚಿತ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ತರಬೇತಿ ಶಿಬಿರವನ್ನು ಇದೇ ನವೆಂಬರ್ 21 ರಿಂದ 30 ರವರೆಗೆ 10 ದಿನಗಳ ಶಿಬಿರವನ್ನು ಪ್ರತಿ ನಿತ್ಯ ಬೆಳಿಗ್ಗೆ 5.30 ರಿಂದ 7 ರವರೆಗೆ ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ಆರ್ಯ ಈಡಿಗ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ:ಮುರುಘಾ ಶರಣರಿಗೆ ಮರಳಿ ಸಂಕಷ್ಟ, ಬಂಧನಕ್ಕೆ ಕೋರ್ಟ್ ಆದೇಶ
ಬಿಎಸ್ಟಿ ಜಿಲ್ಲಾಧ್ಯಕ್ಷ ದೇವಾನಂದ ನಾಯ್ಕ್ ಅಧ್ಯಕ್ಷತೆ ವಹಿಸುವರು. ಆರ್ಯ ಈಡಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಜೀವನ್, ನಗರಸಭೆ ಸದಸ್ಯೆ ಎಸ್.ಇ.ತಾರಕೇಶ್ವರಿ, ಪತ್ರಕರ್ತ ಟಿ.ತಿಪ್ಪೇಸ್ವಾಮಿ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಎನ್.ಎ.ವೆಂಕಟೇಶ್ ರೆಡ್ಡಿ, ಹೆಚ್.ಎ.ರವಿ, ಆರ್.ಲೋಕೇಶ್ ರೆಡ್ಡಿ, ಎನ್.ಆರ್.ಗೋವಿಂದರೆಡ್ಡಿ, ಶೋಭಾ ತಿರುಮಲ ರೆಡ್ಡಿ, ಆರ್.ಎ.ಶ್ರೀರಾಮರೆಡ್ಡಿ, ಡಾ.ಕೆ.ಪಿ.ಮಲ್ಲಪ್ಪ, ಡಾ.ಜಿ.ಡಿ.ರಶ್ಮಿ, ಕೆ.ಆರ್.ವಿಜಯಕುಮಾರ್ ಭಾಗವಹಿಸುವರು.
ಯೋಗ ಶಿಕ್ಷಕರಾದ ಜಿ.ಶ್ರೀನಿವಾಸ್, ಎನ್.ಕೆಂಚವೀರಪ್ಪ, ಲಲಿತಾ ಬೇದ್ರೆ ಶಿಬಿರ ನಡೆಸಿಕೊಡುವರು. ಶಿಬಿರಾರ್ಥಿಗಳು ಯೋಗ ತರಬೇತಿಗೆ ಯೋಗ ಮ್ಯಾಟ್ ಅಥವಾ ಜಮಾಖಾನದೊಂದಿಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಘಟನಾ ಕಾರ್ಯದರ್ಶಿ ಜೆ.ಎಸ್.ಗುರುಮೂರ್ತಿ ಮೊ-9449145416, ಖಜಾಂಚಿ ನವೀನ್ ಮೊ-9901585905 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ
+ There are no comments
Add yours