ಸ್ವಚ್ಚತೆಯಿಂದ ಸಾಂಕ್ರಾಮಿಕ ರೋಗಗಳು ದೂರ-ಜೆ.ಟಿ.ಹನುಮಂತರಾಜ್

 

 

 

 

ಪ್ರವಾಸೋದ್ಯಮ ದಿನಾಚರಣೆ: ಚಂದ್ರವಳ್ಳಿಯಲ್ಲಿ ಸ್ವಚ್ಛತಾ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ
ಸ್ವಚ್ಚತೆಯಿಂದ ಸಾಂಕ್ರಾಮಿಕ ರೋಗಗಳು ದೂರ-ಜೆ.ಟಿ.ಹನುಮಂತರಾಜು.
ಚಿತ್ರದುರ್ಗ, ಸೆಪ್ಟೆಂಬರ್28:
ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಾಂಕ್ರಾಮಿಕ ರೋಗಗಳಿಂದ ದೂರವಿಡಲು ಸ್ವಚ್ಚತಾ ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆಯುತ್ತವೆ. ಸ್ವಚ್ಚತೆಯಿಂದ ಸಾಂಕ್ರಾಮಿಕ ರೋಗಳನ್ನು ದೂರವಿಡಬಹುದು ಎಂದು ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಅಭಿಪ್ರಾಯಪಟ್ಟರು.
 ನಗರದ ಚಂದ್ರವಳ್ಳಿಯಲ್ಲಿ ಭಾನುವಾರ ಜಿಲ್ಲಾಡಳಿತ, ನಗರಸಭೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಹಾಗೂ ಸ್ವಚ್ಚತೆಗೆ ಆದ್ಯತೆ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಸಿ ಜ್ಯೋತಿರಾಜ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪ್ರವಾಸೋದ್ಯಮ ಅನ್ನ ಕೊಡುವ ಉದ್ಯಮವಾಗಿದೆ. ಚಿತ್ರದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ನನಗೆ ಅನ್ನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ನೆಲದ ಋಣವನ್ನು ತೀರಿಸುತ್ತೇನೆ ಎಂದು ಹೇಳಿದರು.
 ಪ್ರವಾಸೋದ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ನಾಡು-ನುಡಿ ಮತ್ತು ಸಂಸ್ಕøತಿಯ ಪರಂಪರೆಯನ್ನು ಹಾಗೂ ಪ್ರಾಚೀನ ಗತವೈಭವ ಸಾರುವ ಕುರುಹುಗಳು ಪ್ರವಾಸಿ ತಾಣಗಳಾಗಿದ್ದು, ಈ ತಾಣಗಳಿಗೆ ದಕ್ಕೆ ಆಗದ ರೀತಿಯಲ್ಲಿ ಮುಂದಿನ ಪೀಳಿಗೆಯವರಿಗೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದರು.
 ಪ್ರಧಾನ ಮಂತ್ರಿಯವರ ಸ್ವಚ್ಚ ಭಾರತದ ಆದರ್ಶ ಕಲ್ಪನೆಯನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರವಾಸಿಗರಲ್ಲಿ ಮನವಿ ಮಾಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಚಂದ್ರವಳ್ಳಿಯಲ್ಲಿ ಸ್ವಚ್ಚತಾ ಅಭಿಯಾನ, ಸಸಿ ನೆಡುವ ಕಾರ್ಯಕ್ರಮ ಹಾಗೂ ಕರಪತ್ರಗಳ ಮೂಲಕ ಕೋವಿಡ್-19 ಮತ್ತು ಪ್ರವಾಸಿ ತಾಣಗಳ ಸ್ಚಚ್ಚತೆ ಹಾಗೂ ಪ್ರವಾಸಿಗರ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುವ ಮೂಲಕ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಯಿತು.
ಸ್ಥಳೀಯರಾದ ಕೃಷ್ಣಪ್ಪ ಅವರು ಕೊರೊನಾ ರೋಗದ ಬಗ್ಗೆ ತಾವೇ ರಚಿಸಿದ ಲಾವಣಿ ಹಾಡುವ ಮೂಲಕ ಜಾಗೃತಿ ಮೂಡಿಸಿದರು.
 ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗೋಪಾಲ್, ಜಿಲ್ಲಾ ಪ್ರವಾಸೋದ್ಯಮ ಸಮಲೋಚಕ ಜಹೀರ್‍ಖಾನ್, ನಗರಸಭೆ ಸಿಬ್ಬಂದಿ, ಪ್ರವಾಸಿ ಮಿತ್ರರು, ಪ್ರವಾಸಿ ಮಾರ್ಗದರ್ಶಿಗಳು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours