ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಮತ ನೀಡದವರು ಸಹ ನಮ್ಮವರೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಮತ ನೀಡದವರು ಸಹ ನಮ್ಮವರೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಹೇಳಿದರು. 

ತಾಲೂಕಿನ ಇಂಗಳದಾಳ್ ಗ್ರಾಮದಲ್ಲಿ ಭಾನುವಾರ  ಮಾರಿಕಾಂಭ ಸಮಿತಿ ವತಿಯಿಂದ‌ ಏರ್ಪಡಿಸಿದ್ದ  ಸಮುದಾಯ ಭವನ ಮತ್ತು ವಾಲ್ಮೀಕಿ  ಭವನ  ಉದ್ಘಾಟನೆ ಕಾರ್ಯಕ್ರಮದಲ್ಲಿ‌ ಮಾತನಾಡಿದರು. 
ಇಂಗಳದಾಳ್ ನಲ್ಲಿ  ಸಮುದಾಯ ಭವನಕ್ಕೆ 25 ಲಕ್ಷ ಅನುದಾನ ನೀಡಿದ್ದೇನೆ. ಅದು ಕಡಿಮೆ ಬಂದ ಕಾರಣಕ್ಕೆ ಮತ್ತೆ ವಾಲ್ಮೀಕಿ ಭವನ ನಿರ್ಮಾಣಕ್ಕೆ 10 ಲಕ್ಷ ನೀಡಿದ್ದೇನೆ. ಸುತ್ತಮುತ್ತಲಿನ ನೂರಾರು ಹಳ್ಳಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮಾರಿಕಾಂಭ ಸಮಿತಿ ಸದಸ್ಯರು ನನ್ನ ಬಳಿ ಬಂದ ಹಣ ಕೇಳಿದಾಗ ನಾನು ಹಣ ನೀಡಿದ್ದೇನೆ. ಎಲ್ಲಾ ಜನಾಂಗದವರು ಬಳಸಿಕೊಳ್ಳಲಿ ಮತ್ತು ಉತ್ತಮವಾಗಿ ನಿರ್ವಹಣೆ ಮಾಡಿ ಎಂದರು. ಎನ್.ವೈ ಹನುಂಮತಪ್ಪ ಮತ್ತು  ಕಾಪರ್ ಮೈನ್ಸ್ ನವತು ಸಹ ಹಣ ನೀಡಿದ್ದಾರೆ. ಜೊತೆಗೆ ಅನೇಕ ದಾನಿಗಳು ಸಹ ಹಣ ನೀಡಿ ಸುಂದರ ಭವನವಾಗಿದೆ.  ಊರಿನ ಜನರು ರಸ್ತೆ  ಸನಸ್ಯೆ  ಬಗ್ಗೆ ಹೇಳಿದಾಗ ಬೃಹತ್ ಅಗಲೀಕರಣ ಮಾಡಿ ಸಿ.ಸಿ.ರಸ್ತೆ ಮಾಡಿಸಿದ್ದೇನೆ. 7 ಕೋಟಿ ವೆಚ್ಚದಲ್ಲಿ ಜೋಡಿ ಚಿಕ್ಕೆನಹಳ್ಳಿ  ಯರೆಹಳ್ಳಿವರೆಗೂ ರಸ್ತೆಗೆ ಹಣ ನೀಡಿದ್ದು ಕಡಿಮೆ ಬಂದರೆ ಇನ್ನಷ್ಟು ಹಣ ನೀಡುತ್ತೇನೆ.  ಇಂಗಳದಾಳ್ ವ್ಯಾಪ್ತಿಯಲ್ಲಿ 50 ಲಕ್ಷ ಚಕ್ ಡ್ಯಾಂ ಸಹ ಮಾಡಿದ್ದು ಅದು ಸ್ವಲ್ಪ ಸಮಸ್ಯೆ ಆಗಿದೆ ಎಂದು ತಿಳಿದಿದ್ದು ಸರಿಪಡಿಸುವುದು ಮತ್ತು ಕೊಠಡಿ ನಿರ್ಮಾಣಕ್ಕೆ ಕೋವಿಡ್ ಮುಗಿದ ನಂತರ ಬನ್ನಿ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಭದ್ರ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆಯಲ್ಲಿ ಚಿತ್ರದುರ್ಗ ತಾಲೂಕಿನ 10 ಕೆರೆಗಳು ಬಿಟ್ಟು ಹೋಗಿದ್ದು ಅದರಲ್ಲಿ ಕುರಮರಡಿಕೆರೆ ಸಹ  ಇದ್ದು ಇದಕ್ಕೆ   ಮುಖ್ಯಮಂತ್ರಿ ಬಳಿ ಚರ್ಚೆ ನಡಸಿ ಸೇರಿಸುತ್ತೇನೆ ಎಂದು ಭರವಸೆ ನೀಡಿದರು. ಒಂದು ವೇಳೆ ಎಲ್ಲಾರೂ ಸೇರಿ ಮುಖ್ಯಮಂತ್ರಿ ಬೇಟಿ ಮಾಡಬೇಕಾದ ಸಂದರ್ಭ ಬಂದರರ ಹೇಳುತ್ತೇನೆ. ಊರಿನ ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಏಕೆ ಚುನಾವಣೆ ಸಂದರ್ಭದಲ್ಲಿ ಮತ ಹಾಕುವುದಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾರೂ ಸಹ ಊರಿನ ಅಭಿವೃದ್ಧಿಗೆ ಕೈ ಜೋಡಿಸಿ ಸದಾ ನಿಮ್ಮ ಜೊತೆಯಲ್ಲಿ ನಾನು ಇದ್ದೇನೆ ಎಂದು ಹೇಳಿದರು.

 

 

ಮಾರಿಕಾಂಭ ಸಮಿತಿ     ಪಿ.ಓ.ತಿಮ್ಮಯ್ಯ ಮಾತನಾಡಿ  ಎನ್.ವೈ.ಹನುಮಂತಪ್ಪ ಅವರು ಈ ಭವನಕ್ಕೆ ಬುನಾದಿ ಹಾಕಿದ್ದರು. ಅವರು ಬರಬೇಕಿತ್ತು ಕಾರಣಂತರಗಳಿಂದ ಬರಲು ಆಗಿಲ್ಲ ಎಂದು ಸ್ಮರಿಸಿದರು. ಶಾಸಕ ತಿಪ್ಪಾರೆಡ್ಡಿ ಅವರು  35 ಲಕ್ಷ ಹಣ ನೀಡಿ ಈ ಬೃಹತ್ ಭವನ‌ ನಿರ್ಮಾಣಕ್ಕೆ  ಅವರ ಸಹಕಾರ ಎಂದು ಮರೆಯಲು ಸಾಧ್ಯವಿಲ್ಲ ಎಂದರು.

 ಮಾರಿಕಾಂಭ ಸಮಿತಿ ಕಾರ್ಯ   ಜಿ.ತಿಪ್ಪೇಸ್ವಾಮಿ ಮಾತನಾಡಿ ಶಾಸಕರು ಸದಾ ನಮ್ಮ  ಊರಿನ ಬಗ್ಗೆ ಪ್ರೀತಿ ಇದೆ. ಇಡೀ ಸಮುದಾಯ ಭವನ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ನಮ್ಮ ಊರು ಮರೆಯಲ್ಲ. ಸುಂದರ ಸಮುದಾಯ ಭವನಕ್ಕೆ ಶಾಸಕರು ಉದ್ಘಾಟನೆ ಮಾಡಿರುವುದು ನಮಗೆ ಸಂತೋಷ ತಂದಿದೆ. ಶಾಸಕರು ವಧು -ವರ ಕೊಠಡಿಗೆ ಹಣ ನೀಡಿದರೆ ಅವರ ಅನುದಾನದಲ್ಲಿ ಸಂಪೂರ್ಣ ಕಾಮಗಾರಿ ಆಗುತ್ತದೆ ಎಂದು ಮನವಿ ಮಾಡಿದರು.

ನಿವೃತ್ತ ಬಿಇಒ.ಎಸ್.ಪಾಲಯ್ಯ ಮಾತನಾಡಿ ಚಿತ್ರದುರ್ಗ  ಕಂಡ ಅದ್ಭುತ ಶಾಸಕರು ಅಭಿವೃದ್ಧಿ ಪರವಾದ ಶಾಸಕರು ತಿಪ್ಪಾರೆಡ್ಡಿ ಎಂದರು. ನಿವೃತ್ತ ನ್ಯಾಯದೀಶರಾದ ಎನ್.ವೈ ಹನುಂಮತಪ್ಪ ಅವರು ಸಹ ಅನುದಾನ ನೀಡಿದ್ದು ಅವರು ಹಾಕಿದ ಅಡಿಗಲ್ಲುಘಳಿಗೆ ಚನ್ನಾಗಿದೆ ಎಂದರ.  ಮಾರಿಕಾಂಭ ಸಮಿತಿಯ ಅಧ್ಯಕ್ಷರಾದ ಪಿ.ಕೆ.ರಾಮಪ್ಪ, ಉಪಾಧ್ಯಕ್ಷ ಜಿ.ಟಿ.ಓಬಣ್ಣ, ಗೌರವ ಅಧ್ಯಕ್ಷ ಬಗ್ಗಲು ತಿಪ್ಪಯ್ಯ,  ಸಂಘಟನ ಕಾರ್ಯದರ್ಶಿ ಪಿ.ಟಿ.ತಿಪ್ಪೇಸ್ವಾಮಿ. ಖಜಾಂಚಿ ಕೆ.ಟಿ.ಗಾದ್ರಪ್ಪ,  ಉದ್ಯಮಿ ವೀರೇಶ್ ನಾಯಕ, ಉಪ ತಹಶಿಲ್ದಾರ ಜಗದೀಶ್, ಬಿ.ಅಶೋಕ, ಹೆಚ್. ನಾಗರಾಜ್, ಜಿ.ಟಿ‌.ನಾಗರಾಜ್, ಅಂಗಡಿ ಹನುಮಂತಪ್ಪ, ಟಿ. ಜಯರಾಮ್,  ಸಿದ್ದಪ್ಪ, ಮಹಂತೇಶ್, ಫಿಲ್ಟರ್ ರಾಮಣ್ಣ, ದಿವಾಕರ್, ರಾಜಣ್ಣ , ಅಜಯ್ , ನಿಂಗರಾಜ್, ಪೂಜಾರ್ ಭೀಮಣ್ಣ ಮತ್ತು ಗ್ರಾಮಸ್ಥರು ಇದ್ದರು.

[t4b-ticker]

You May Also Like

More From Author

+ There are no comments

Add yours