ಕಲುಷಿತ ನೀರು ಸೇವನೆಗೆ ಮೂರನೇ ಬಲಿ

 

 

 

 

ಚಿತ್ರದುರ್ಗ:ಚಿತ್ರದುರ್ಗ  ನಗರದ ಹೊರವಲಯವಾದಲ್ಲಿರುವ  ಕವಾಡಿಗರಹಟ್ಟಿಯ  ಬಡಾವಣೆಯ ಜನರಲ್ಲಿ  ನಿನ್ನೆಯಿಂದ  ಆತಂಕ ಮನೆ ಮಾಡಿದ್ದು ನಿವಾಸಿಗಳಿಗೆ  ಒಂದು ರೀತಿ‌  ಭೀತಿಯ ವಾತವರಣ ನಿರ್ಮಾಣವಾಗಿದ್ದು  ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು  ಸಂಖ್ಯೆ 78 ಕ್ಕೆ ಏರಿಕೆ ಆಗಿದೆ.

 

 

ನಗರದಲ್ಲಿ ಎಲ್ಲಾ ಕಡೆ ನೀರು ಸರಬರಾಜು ಆಗುವುದು ಸಾಮಾನ್ಯ ಆದರೆ  ಹಲವು ವರ್ಷಗಳಿಂದ. ನೀರು ಸರಬರಾಜು ಆಗುವ ತಟ್ಟಿಗಳನ್ನು ಸ್ವಚ್ಚತೆ ಮಾಡಿದೆ ಇರುವುದು ನೀರು ಕಲುಷಿತವಾಗಲು ಸಾಧ್ಯ ಎಂಬುದು ಬಂದು ಕಡೆಯಾದರೇ ಆ ಭಾಗಕ್ಕೆ ಮಾತ್ರ ಹೇಗೆ   ಕಲುಷಿತ ನೀರು ಸರಬರಾಜು ಆಯಿತು ಎಂಬುದು ಎಲ್ಲಾರಿಗೂ ಯಕ್ಷ ಪ್ರಶ್ನೆಯಾಗಿದೆ‌.  ಜನರು ಈ ಘಟನೆಯಿಂದ ಭಯಭೀತರಾಗಿದ್ದು  ನೀರು ಕುಡಿಯಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಸ್ವಸ್ಥರಾದವರ ಸಂಖ್ಯೆ ಏರುತ್ತಲೇ ಇದ್ದು ಕಲುಷಿತ  ನೀರಿನ ಸೇವೆನೆಯಿಂದ  ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 18 ಹಾಗೂ ಬಸವೇಶ್ವರ ಆಸ್ಪತ್ರೆಗೆ 60 ಜನರನ್ನು  ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಮಂಜುಳಾ(23) ಅವರ ಕುಟುಂಬಸ್ಥರು ಅವರ  ಸಾವಿಗೆ ಪರಿಹಾರ ನೀಡದೆ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡಲ್ಲವೆಂದು ಭಾರೀ  ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಪರಿಹಾರದ ಚೆಕ್ ನೀಡಬೇಕು. ನೀರಗಂಟಿಯನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೊಳಲ್ಕೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಮಾಡಿ ಪ್ರತಿಭಟನೆಗೆ ಸ್ಥಳೀಯರು ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ  ಪೊಲೀಸರು ಮನವೊಲಿಸಲು ಮುಂದಾಗಿದ್ದಾರೆ.
ಮತ್ತೊಬ್ಬ  ಚಿತ್ರದುರ್ಗದ ವ್ಯಕ್ತಿ ರಘು ಕಲುಷಿತ ನೀರು ಸೇವಿಸಿ  ಫ್ರಿಡ್ಜ್  ರಿಪೇರಿ ಮಾಡಲು ನಿತ್ಯ ಎಂದಿನಂತೆ ಕೆಲಸಕ್ಕಾಗಿ  ಬೆಂಗಳೂರಿಗೆ ತೆರಳಿದಾಗ ವಾಂತಿ-ಭೇದಿ ಕಾಣಿಸಿಕೊಂಡು‌ ಬೆಂಗಳೂರಿನಲ್ಲಿ ಮೃತಪಟ್ಟರು. ರಘು ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮೃತದೇಹವನ್ನು ಚಿತ್ರದುರ್ಗಕ್ಕೆ ತರಲಾಗುತ್ತಿದೆ.
ಗ್ರಾಮದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಗೊಂಡು 25 ವರ್ಷ ಕಳೆದರೂ ನೀರಿನ ಟ್ಯಾಂಕ್ ನ್ನ  ಒಮ್ಮೆಯೂ  ಸ್ವಚ್ಛಗೊಳಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು. ಇದೀಗ ಗ್ರಾಮದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿರುವುದರಿಂದ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
ಇಡೀ ಬಡಾವಣೆಯಲ್ಲಿ ಆತಂಕ, ಭೀತಿಯ ವಾತಾವಾರಣ ನಿರ್ಮಾಣವಾಗಿದೆ. ಇನ್ನು ಗ್ರಾಮದಲ್ಲಿದ್ದ ಶುದ್ಧ ಕುಡಿಯುವ  ನೀರಿನ ಘಟಕದ  ಗಾಜಿಗೆ ಕಲ್ಲು ತೂರಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಭೇಟಿ :
ಕಲುಷಿತ ನೀರು ಸೇವನೆಯಿಂದ ನಿನ್ನೆ  ಮೃತಪಟ್ಟಿದ್ದ  ಮಹಿಳೆಯ ಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ  ದಿವ್ಯ ಪ್ರಭು ಜಿ.ಆರ್‌.ಜೆ, ಎಸ್ಪಿ ಪರಶುರಾಮ್  ಹಾಗೂ ತಹಶೀಲ್ದಾರ್ ನಾಗವೇಣಿ ಮತ್ತು  ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಬಾಕ್ಸ್:
ಸಚಿವರು ಹತ್ತು ಲಕ್ಷ ಪರಿಹಾರ ಘೋಷಿಸಿದ್ದಾರೆ. ಪೋಸ್ಟ್ ಪಿಎಂ  ವರದಿ ಬಂದ ನಂತರ ನಿಯಮಾನುಸಾರ ಕ್ರಮ ವಹಿಸಲಾಗುವುದು‌.
ರೋಗಿಗಳು ಆರೋಗ್ಯ ಸ್ಥಿರವಾಗಿದೆ. ಕಾಲ ಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟಿರುವ ಮಹಿಳೆಯ ಸಂಬಂಧಿಕರಿಗೆ ಶವ ಸಂಸ್ಕಾರಕ್ಕೆ ನಿರಾಕರಿಸಿದ್ದರಯ ಆದರೆ ಮನವೊಲಿಸಿದ್ದು  ಅಂತ್ಯ ಸಂಸ್ಕಾರಕ್ಕೆ  ಒಪ್ಪಿಸಿದ್ದೇವೆ. ಎಲ್ಲ ಟ್ಯಾಂಕ್ ಸ್ವಚ್ಚತೆ ಮಾಡಿಸುತ್ತಿದ್ದೇವೆ. ಈ ಪ್ರಕರಣ ಬಗ್ಗೆ  ಬೆಳಗ್ಗೆ ಸಿಎಂ ಅವರು  ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರಕರಣದ ತನಿಖೆ ಮಾಡಲು  ತನಿಖಾ ಸಮಿತಿ ರಚಿಸಲಾಗಿದೆ‌.  ಡಿಯುಡಿಸಿ, ಆರ್ಡಬ್ಯುಎಸ್, ಕೆಯುಡಬ್ಯೆಸ್ ಅಧಿಕಾರಿಗಳ ತಂಡ ಇದೆ. ಮೂರು ದಿನದಲ್ಲಿ ವರದಿ ಕೊಡಲು ಸೂಚಿಸಿದ್ದೇವೆ. ವರದಿ ಬಂದ ನಂತರ
ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಸಿಎಂ ಸೂಚನೆ ನೀಡಿದ್ದಾರೆ. ಇಬ್ಬರು ಮೃತಪಟ್ಟಿದ್ದು  ರಘು ಬೆಂಗಳೂರಿನಲ್ಲಿ ಮೃತಪಟ್ಟಿದ್ದು ಪಿಎಂ ವರದಿ ಬರಬೇಕಿದೆ. ವಡ್ಡರಸಿದ್ದವ್ವನಹಳ್ಳಿ ಪ್ರವೀಣ್ ಎಂಬುವವರು ಮೃತಪಟ್ಟಿರುವ ವರದಿ ಬಂದಿದೆ ಅದೂ ಪಿಎಂ ಆಗಬೇಕು ಎಲ್ಲಾ ಮಾಹಿತಿ ಪಡೆದು ನಿಯಮಾನುಸಾರ  ಪರಿಹಾರ ನೀಡಲಾಗುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ‌.
ದಿವ್ಯಪ್ರಭು ಜಿ.ಆರ್.ಜೆ.
ಜಿಲ್ಲಾಧಿಕಾರಿಗಳು ಚಿತ್ರದುರ್ಗ
ಬಾಕ್ಸ್ :
ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದೆ. ಎಫ್ಎಸ್ಎಲ್ ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು.
ನೀರಗಂಟಿ ಬಗ್ಗೆ ಗ್ರಾಮಸ್ಥರು ಆರೋಪಿಸಿದ್ದು  ವಿಚಾರಣೆ ನಡೆಸುತ್ತೇವೆ.ಮೇ 2022 ರಲ್ಲಿ ಪೋಕ್ಸೋ ಪ್ರಕರಣ ಆಗಿತ್ತು. ಅದರ ಆಧಾರದಲ್ಲಿ ಕೂಡಾ ತನಿಖೆ ನಡೆಯುತ್ತೇವೆ.
ಪರಶುರಾಮ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರ
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಚಕ್ ವಿತರಣೆ:
ಕಲುಷಿತ ನೀರನ್ನು ಸೇವಿಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು  ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಬೇಟಿ ಮಾಡಿ ಸಂತ್ವಾನ ಹೇಳಿ ಇವರಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುವಂತೆ ಸೂಚಿಸಿದರು.
 ನಂತರ ಕವಾಡಿಗರಹಟ್ಟಿಗೆ  ಬೇಟಿ ನೀಡಿ ಈ ಪ್ರಕರಣದಲ್ಲಿ ವೃತ ಪಟ್ಟವರ ಮನೆಗೆ ಭೇಟಿ  ನೀಡಿ ಅವರ ಕುಟುಂಬಕ್ಕೆ‌ ಸಂತ್ವಾನ ಹೇಳಿ ಎರಡು  ಮೃತ ಕುಂಟುಂಬ ವರ್ಗದವರಿಗೆ ತಲಾ 50 ಸಾವಿರ ರೂ.ಗಳ ವೈಯಕ್ತಿಕ ಪರಿಹಾರ ಚಕ್ ವಿತರಿಸಿದರು.
[t4b-ticker]

You May Also Like

More From Author

+ There are no comments

Add yours