ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ: ಸುಬ್ರಮಣಿಯನ್ ಸ್ವಾಮಿ

 

 

 

 

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿ ಹಾಗೂ ಹಣಕಾಸು ಇಲಾಖೆಯ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಹಿರಿಯ ಸಂಸದ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ ಎಂದು ಕರೆದಿದ್ದಾರೆ.

ಭಾರತೀಯ ಆರ್ಥಿಕತೆಯು ಜಿಡಿಪಿಯಲ್ಲಿ ವರ್ಷಕ್ಕೆ ಕನಿಷ್ಠ 10 ಪ್ರತಿಶತದಷ್ಟು ಬೆಳೆಯುವ ಸಾಮರ್ಥ್ಯವನ್ನು ಹೊಂದಿದ್ದು, ಇದರಿಂದ ನಿರುದ್ಯೋಗವನ್ನು ಕೊನೆಗೊಳಿಸಬಹುದು ಮತ್ತು 10 ವರ್ಷಗಳಲ್ಲಿ ಬಡತನವನ್ನು ತೊಡೆದು ಹಾಕಬಹುದಾಗಿದೆ.

 

 

ಆದರೆ ಹಣಕಾಸು ಸಚಿವಾಲಯಕ್ಕೆ ಇದರ ಸುಳಿವಿಲ್ಲ. ಪ್ರಧಾನಿ ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರು ಎಂದು ಟ್ವೀಟ್​ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್​ ಮಾಡಿದ್ದಾರೆ. ಈ ಹಿಂದೆ ಕೂಡ ಸುಬ್ರಮಣಿಯನ್ ಸ್ವಾಮಿ, ಕೇಂದ್ರ ಸರ್ಕಾರದ ಬಜೆಟ್ ಸೇರಿದಂತ ಹಲವು ವಿಚಾರಗಳಲ್ಲಿ ಹಣಕಾಸು ಸಚಿವಾಲಯದ ನಡೆಯನ್ನು​ ಟೀಕಿಸಿದ್ದರು.

ಅಲ್ಲದೇ, ಲೋಕಸಭೆಯ ಸದಸ್ಯತ್ವದಿಂದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದಾಗ ದೇಶ-ವಿದೇಶದ ರಾಜಕಾರಣಿಗಳು, ಚಿಂತಕರು ಸೇರಿದಂತೆ ಅಮೇರಿಕಾವ ವಿದೇಶಾಂಗ ಇಲಾಖೆಯೂ ಅನರ್ಹತೆ ಕುರಿತು ಖಂಡಿಸಿತ್ತು. ಆಗ ಸುಬ್ರಮಣಿಯನ್ ಸ್ವಾಮಿ, ಸರ್ಕಾರದ ಕ್ರಮವನ್ನು ಅಮೆರಿಕ ವಿದೇಶಾಂಗ ಇಲಾಖೆ ಖಂಡಿಸಿದೆ. ಇದಕ್ಕೆ ಮೋದಿ ಸರ್ಕಾರದ ಉತ್ತರವೇನು? ಎಂದು ಪ್ರಶ್ನಿಸಿದ್ದರು

[t4b-ticker]

You May Also Like

More From Author

+ There are no comments

Add yours