ಪೆಟ್ರೋಲ್ ಡಿಸೇಲ್ ಬೆಲೆಗಳ‌ ಇಳಿಕೆ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು.

 

 

 

 

ನವದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಸ್ಥಿರವಾಗಿದ್ರೆ, ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನ ಕಡಿಮೆ ಮಾಡುವ ಸ್ಥಿತಿಯಲ್ಲಿರುತ್ತವೆ ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಶನಿವಾರ ಹೇಳಿದ್ದಾರೆ.

ಇನ್ನು ತೈಲ ಕಂಪನಿಗಳ ಮುಂಬರುವ ತ್ರೈಮಾಸಿಕ ಫಲಿತಾಂಶಗಳು ಉತ್ತಮವಾಗಿರುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

 

 

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪೆಟ್ರೋಲ್ ಬೆಲೆಗಳ ಬಗ್ಗೆ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಪುರಿ, ಈ ವಿಷಯದ ಬಗ್ಗೆ ಯಾವುದೇ ಘೋಷಣೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು. ನಂತರ ಏನು ಮಾಡಬಹುದೆಂದು ನಾವು ನೋಡುತ್ತೇವೆ ಎಂದು ಅವ್ರು ಹೇಳಿದರು.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಕಳೆದ ತ್ರೈಮಾಸಿಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಅವರು ಕೆಲವು ನಷ್ಟಗಳನ್ನ ಸರಿದೂಗಿಸಿದ್ದಾರೆ ಎಂದು ಅವ್ರು ಹೇಳಿದರು. ಅವ್ರು ತಮ್ಮ ಸಾಂಸ್ಥಿಕ ಜವಾಬ್ದಾರಿಯನ್ನ ಚೆನ್ನಾಗಿ ನಿರ್ವಹಿಸಿದ್ದಾರೆ. ನಾವು ಮುಂದೆ ಸಾಗುವಾಗ, ಏನು ಮಾಡಬಹುದು ಎಂಬುದನ್ನ ನಾವು ನೋಡುತ್ತೇವೆ ಎಂದರು.

ತೈಲ ಬೆಲೆಯನ್ನ ಸ್ಥಿರವಾಗಿಡಲು ಒತ್ತು
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಏಪ್ರಿಲ್ 22ರಿಂದ ತೈಲ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗದಂತೆ ನೋಡಿಕೊಂಡಿದೆ ಎಂದು ಬಿಜೆಪಿ ನಾಯಕ ಹೇಳಿದರು. ಗ್ರಾಹಕರಿಗೆ ತೊಂದರೆಯಾಗದಂತೆ ಸರ್ಕಾರ ಮತ್ತಷ್ಟು ನೋಡಿಕೊಳ್ಳುತ್ತದೆ ಎಂದರು. ಪ್ರತಿಪಕ್ಷಗಳು ‘ರೆವಾರಿ ರಾಜಕೀಯ’ದಲ್ಲಿ ತೊಡಗಿವೆ ಎಂದು ಆರೋಪಿಸಿದ ಪುರಿ, ಒಬ್ಬರು ಎಲ್ಲವನ್ನೂ ‘ಉಚಿತವಾಗಿ’ ನೀಡಬಹುದು. ಆದ್ರೆ, ಉಚಿತಗಳ ರಾಜಕೀಯವು ಅಪಾಯಕಾರಿ ಪ್ರದೇಶವನ್ನ ಪ್ರವೇಶಿಸುತ್ತದೆ ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours