ಗುರುವಂದನಾ ಕಾರ್ಯಕ್ರಮ: ಶತಾಯಿಷಿಗೆ ಸನ್ಮಾನ

 

 

 

 

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಶಿವಪುರ ಸುಕ್ಷೇತ್ರ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ನಿರಂಜನಸ್ವಾಮಿ ಗದ್ದಿಗೆ ಅವದೂತ ಪೀಠದಲ್ಲಿ ಬುಧವಾರ ನಡೆದ ಶ್ರೀ ಅಲಕ್ ನಿರಂಜನ ಸ್ವಾಮಿ, ಶ್ರೀ ಸತ್ಯಪ್ಪ ಸ್ವಾಮಿ ಹಾಗೂ ಶ್ರೀ ಈಗಲು ಸ್ವಾಮಿಯವರ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀ ಗುರುಮಲ್ಲೇಶ್ವರ ಸ್ವಾಮಿ ಶಿಷ್ಯರಾದ ಶತಾಯಿಷಿ ಶ್ರೀ ಜೋಗಣ್ಣಗಳ ಓಬಯ್ಯ ಸ್ವಾಮಿ ಅವರಿಗೆ ಸಾಧು-ಸಂತರು ಹಾಗೂ ಸದ್ಭಕ್ತರ ಸಮ್ಮುಖದಲ್ಲಿ ಸನ್ಮಾಸಲಾಯಿತು.
  ಸನ್ಮಾನ ಸ್ವೀಕರಿಸಿ ಮಾತನಾಡಿದ ಶತಾಯಿಷಿ ಶ್ರೀ ಜೋಗಣ್ಣಗಳ ಓಬಯ್ಯ, ಬಚ್ಚಬೋರನಹಟ್ಟಿ ಗ್ರಾಮ ಶರಣ ಗುರು ಗಾದ್ರಿಲಿಂಗೇಶ್ವರ ಸ್ವಾಮಿಯ ಪುಣ್ಯಭೂಮಿ. ಸಾಧು ಸನ್ಯಾಸಿಗಳ ತವರು ನೆಲ. ಇಲ್ಲಿಗೆ ರಾಜ್ಯದ ಮೂಲೆ ಮೂಲೆಯಿಂದ ಅನೇಕ ಸಾಧು ಸಂತರು ಬಂದು ನೆಲೆಸಿದ ದೈವಭೂಮಿ. ಇಲ್ಲಿಯ ಭಕ್ತರು ಸಾಧು ಸಂತರಿಗೆ ನೀಡುವ ಪ್ರೀತಿ, ಭಕ್ತಿ, ಸೇವೆ ಬಹಳ ಅಗಾಧವಾದುದು ಎಂದು ಸ್ಮರಿಸಿದರು.
ಚೌಳೂರು ಗ್ರಾಮದ ಅಲಕ್ ನಿರಂಜನ ಸ್ವಾಮೀಜಿ ಶಿಷ್ಯ ಶ್ರೀ ಈರಣ್ಣ ಸ್ವಾಮಿ ಮಾತನಾಡಿ, ಶ್ರೀ ನಿರಂಜನ ಸ್ವಾಮಿ ಐಕ್ಯವಾಗುವ ಒಂದು ದಿನ ಮೊದಲೇ ನನಗೆ ಮರಣದ ವಿಷಯ ತಿಳಿಸಿದ್ದು, ಅವರ ಇಚ್ಛೆಯ ಪ್ರಕಾರ ಬಚ್ಚಬೋರನಹಟ್ಟಿ ಗ್ರಾಮದಲ್ಲಿಯೇ ಸಮಾಧಿ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಸುಮಾರು 15 ವರ್ಷಗಳ ಕಾಲ ನಿರಂತರವಾಗಿ ಗುರುವಂದನಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕೂನಬೇವು ಸಿದ್ದರೂಢ ಮಠದ ಮಹಾಲಿಂಗಪ್ಪ ಸ್ವಾಮಿ ಶರಣರು ಮಾತನಾಡಿ, ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಟವಾದುದು. ನಮ್ಮ ಜನ್ಮ ಸಾರ್ಥಕವಾಗಬೇಕಾದರೆ ಸಾಧು-ಸಂತರ ಸೇವೆ, ಗುರುವಂದನಾ ಕಾರ್ಯಕ್ರಮಗಳ ಮೂಲಕ ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿರಂಜನ ಸ್ವಾಮಿ ಗದ್ದಿಗೆ ಟ್ರಸ್ಟ್ ಅಧ್ಯಕ್ಷರಾದ ಜಿ.ಬಿ.ಪಾಲಯ್ಯ, ಉಪಾಧ್ಯಕ್ಷರಾದ ಕೆ.ಪಿ.ಪಾಪಣ್ಣ,  ಕಾರ್ಯದರ್ಶಿ ಡಿ.ಲಕ್ಷ್ಮಣ್ ಹಾಗೂ ಭಕ್ತರಾದ ಬಿ.ಬೋಸಯ್ಯ, ಸಿ.ಬೋರಕ್ಕ, ಶರಣ ಬೋರಯ್ಯ, ಈರಣ್ಣ ಸ್ವಾಮಿ, ಹೆಚ್.ಪಿ.ಪಾಲಯ್ಯ, ಕೆ.ಓ.ರಾಜಣ್ಣ, ವೈ.ಬಿ.ಪಾಲಯ್ಯ ಹಾಗೂ ಭಜನಾ ಮಂಡಳಿ ಸದ್ಭಕ್ತರು ಇದ್ದರು.
ಫೋಟೋ ವಿವರ: ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಬುಧವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀ ಗುರುಮಲ್ಲೇಶ್ವರ ಸ್ವಾಮಿ ಶಿಷ್ಯರಾದ ಶತಾಯಿಷಿ ಶ್ರೀ ಜೋಗಣ್ಣಗಳ ಓಬಯ್ಯ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.
========

 

 

[t4b-ticker]

You May Also Like

More From Author

+ There are no comments

Add yours