16 ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ ಹೃದಯಘಾತದಿಂದ ನಿಧನ

 

 

 

 

ಗುಜರಾತ್:‌ ಸಾವು ಯಾವ ರೂಪದಲ್ಲಿ, ಯಾವ ಘಳಿಗೆಯಲ್ಲಿ ಬರುತ್ತದೆ ಎನ್ನುವುದನ್ನು ಹೇಳಲಾಗದು. ಹೃದ್ರೋಗ ತಜ್ಞರೊಬ್ಬರು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿರುವುದು ವರದಿಯಾಗಿದೆ.

ಗುಜರಾತ್‌ ನ ಪ್ರಮುಖ ಹೃದ್ರೋಗ ತಜ್ಞನಾಗಿ ಗುರುತಿಸಿಕೊಂಡಿದ್ದ ಗೌರವ್ ಗಾಂಧಿ (41) ಮಂಗಳವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

 

 

ಸೋಮವಾರ (ಜೂ.5 ರಂದು) ಸಾಮಾನ್ಯ ದಿನದಂತೆ ಆಸ್ಪತ್ರೆಗೆ ತೆರಳಿ, ರೋಗಿಗಳನ್ನು ಪರೀಕ್ಷೆ ಮಾಡಿದ್ದಾರೆ. ರಾತ್ರಿ ಮನೆಗೆ ಬಂದ ಬಳಿಕ ಊಟ ಮಾಡಿ ಮಲಗಿದ್ದಾರೆ. ಮಂಗಳವಾರ ಮುಂಜಾನೆ 6 ಗಂಟೆಯ ಹೊತ್ತಿಗೆ ಮನೆಯವರು ಅವರನ್ನು ಎಬ್ಬಿಸಲು ಹೋಗುವಾಗ ಗೌರವ್‌ ಪ್ರಜ್ಞೆ ತಪ್ಪಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ʼಆಜ್‌ ತಕ್‌ʼ ವರದಿ ತಿಳಿಸಿದೆ.

ಡಾ. ಗಾಂಧಿಯವರು ತಮ್ಮ ವೈದ್ಯಕೀಯ ಪದವಿಯನ್ನು ಜಾಮ್‌ನಗರದಿಂದ ಪೂರ್ಣಗೊಳಿಸಿ, ಅಹಮದಾಬಾದ್‌ನಲ್ಲಿ ಹೃದ್ರೋಗ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಯನವನ್ನು ಮಾಡಿದರು. ನಂತರ ಅವರು ಅಭ್ಯಾಸ ಮಾಡಲು ತಮ್ಮ ಊರಿಗೆ ಮರಳಿದರು. ಅವರು ಫೇಸ್‌ಬುಕ್‌ನಲ್ಲಿ ‘ಹಾಲ್ಟ್ ಹಾರ್ಟ್ ಅಟ್ಯಾಕ್’ ಅಭಿಯಾನದಲ್ಲಿ ಗುರುತಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಅವರು ವೈದ್ಯಕೀಯ ವೃತ್ತಿಜೀವನದ ಅವಧಿಯಲ್ಲಿ 16,000 ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವರದಿಯಾಗಿದೆ.

[t4b-ticker]

You May Also Like

More From Author

+ There are no comments

Add yours