ರಾಜ್ಯದ ಮತ್ತೊಬ್ಬ ಸಿಂಗಂ ಖ್ಯಾತಿ ಖಡಕ್ ಪೋಲಿಸ್ ಅಧಿಕಾರಿ ರಾಜಕೀಯಕ್ಕೆ ಎಂಟ್ರಿ

 

 

 

 

ಬೆಳಗಾವಿ: ಕುಡಚಿ ಶಾಸಕ ಪಿ.ರಾಜೀವ್ ಮತ್ತು ಸಚಿವ ಬಿ.ಸಿ.ಪಾಟೀಲ್ ,ಅಣ್ಣಮಲೈ   ಮಾದರಿಯಲ್ಲಿ  ಅಥಣಿ ಮತಕ್ಷೇತ್ರಕ್ಕೆ ಮತ್ತೋರ್ವ ಪೋಲಿಸ್ ಅಧಿಕಾರಿ ರಾಜಕಾರಣದ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯಾರಂತೀರಾ ಇಲ್ಲಿದೆ ನೋಡಿ ಡೀಟೇಲ್ಸ್.

ಅಥಣಿಯಲ್ಲಿ ಪಿಎಸ್ ಐ(PSI) ಆಗಿದ್ದಾಗ ಖಡಕ್ ಪೊಲೀಸ್ ಅಧಿಕಾರಿ ಎಂದೇ ಗುರಿತಿಸಿಕೊಂಡಿದ್ದ ಸದ್ಯ ವಿಜಯಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿದ ಬಸವರಾಜ ಬೀಸನಕೊಪ್ಪ ಈಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. mla

 

 

ಈ ಹಿಂದೆಯೇ ಬಸವರಾಜ ತಮ್ಮ ಪೊಲೀಸ್ ವೃತ್ತಿ ತೊರೆದು ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು.ಸದ್ಯ ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ನಿರ್ಧರಿಸಿರುವ ಅವರು ಈಗಾಗಲೇ ತಮ್ಮ ಸಿಪಿಐ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಜಿ ಡಿಸಿಎಂ ಲಕ್ಷಣ ಸವದಿ, ಶಾಸಕ ಮಹೇಶ್ ಕುಮಠಳ್ಳಿ ಅವರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿರುವ ಅಥಣಿ ಕ್ಷೇತ್ರಕ್ಕೆ ಸದ್ಯ ಖಡಕ್ ಪೊಲೀಸ್ ಅಧಿಕಾರಿ ಅಥಣಿಯ ಸಿಂಗಂ ಎಂದೇ ಖ್ಯಾತಿ ಹೊಂದಿರುವ ಬಸವರಾಜ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು ಸದ್ಯ ಚುನಾವಣೆಯ ಕಾವು ರಂಗೇರುವಂತೆ ಮಾಡಿದೆ. CPI

ಮೂಲತಃ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಸವರಾಜ ಬೀಸನಕೊಪ್ಪ ಪ್ರಬಲ ಪಂಚಮಸಾಲಿ) state news )ಸಮುದಾಯದವರಾಗಿದ್ದು ಅಥಣಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಜಾಸ್ತಿ ಇದ್ದು ಬಸವರಾಜ ಬೀಸನಕೊಪ್ಪ ಅವರಿಗೆ ಯುವಕರ ತಂಡ ಬೆನ್ನಿಗೆ ನಿಂತಿದೆ. ಈ ಎಲ್ಲಾ ಬೆಳವಣಿಗೆಯಿಂದ ಅಥಣಿ ಚುನಾವಣಾ ಕಾವು ರಂಗು ಪಡೆದಿದ್ದು ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಆಶೀರ್ವಾದ ಮಾಡಲಿದ್ದಾನೆ ಎಂದು ಚುನಾವಣೆಯಲ್ಲಿ ಗೊತ್ತಗಲಿದೆ.

[t4b-ticker]

You May Also Like

More From Author

+ There are no comments

Add yours