ಹಿರೋ ಮತ್ತು ಹೋಂಡ ಕಂಪನಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಟಿವಿಎಸ್

 

 

 

 

ವಿಶೇಷ ವರದಿ:
ದೇಶದಲ್ಲಿ ಜನಪ್ರಿಯ  ದ್ವಿಚಕ್ರ ವಾಹನ ತಯಾರಕ ಕಂಪನಿಗಳೆಂದು ಗುರುತಿಸಿಕೊಂಡಿರುವ  ಹೀರೋ ಮೋಟೊಕಾರ್ಪ್, ಟಿವಿಎಸ್, ಬಜಾಜ್ ಆಟೋ ಸೇರಿದಂತೆ ವಿವಿಧ ಕಂಪನಿಗಳು ಜನವರಿ 2023ರ ಮಾರಾಟ ವಿವರವನ್ನು ಬಿಡುಗಡೆ ಮಾಡಿವೆ. ಬೆಳವಣಿಗೆಯಲ್ಲಿ ಕುಸಿತಕಂಡರೂ ಹೀರೋ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಹೋಂಡ ಜೊತೆಗೆ ಟಿವಿಎಸ್ ಎರಡು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದಾರೆ.
 
ಚಿತ್ರದುರ್ಗ ಜಿಲ್ಲೆಯಲ್ಲಿ ಟಿವಿಎಸ್ ಕಂಪನಿಯು ಹೋಂಡ ಮತ್ತು ಹಿರೋ ಸ್ಕೂಟರ್ ಕಂಪನಿಗಳಿಗೆ  ಚಿತ್ರದುರ್ಗ ನಗರದ ಶ್ರೀ ಅಹೋಬಲ ಟಿವಿಎಸ್ ಕಂಪನಿಯು ಉಳಿದ ಎಲ್ಲಾ  ದ್ವಿಚಕ್ರ ವಾಹನಗಳ ಕಂಪನಿಗೆ ಭಾರಿ ಪೈಪೋಟಿ ನೀಡುವ ಮೂಲಕ‌ ಸದ್ದು ಮಾಡುತ್ತಿದೆ. ಒಂದಲ್ಲ ಒಂದು ಗ್ರಾಹಕ ಪ್ರಿಯವಾದ ಸ್ಕೀಂ ರೂಪಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು ಹೀರೋ ಮತ್ತು ಹೋಂಡಕ್ಕೆ ಸೆಡ್ಡು ಹೊಡೆಯುತ್ತಿದೆ.
 
ಕಳೆದ ಒಂದು ವರ್ಷಗಳ ಹಿಂದೆ ಚಿತ್ರದುರ್ಗ ನಗರದಲ್ಲಿ  ಟಿವಿಎಸ್ ಎಂದರೆ ಹುಡುಬೇಕಿತ್ತು. ಆದರೆ ಇಂದು ದುರ್ಗದ ತುಂಬಾ ಶ್ರೀ ಅಹೋಬಲ ಟವಿಎಸ್ ದ್ದೆ ಸದ್ದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.  
ಉತ್ತಮ ಸರ್ವಿಸ್ ಮತ್ತು ಗ್ರಾಹಕನ್ನು  ಸೆಳೆಯತ್ತ ಶ್ರೀ ಅಹೋಬಲ ಟಿವಿಎಸ್ ದಿನದಿಂದ ದಿನಕ್ಕೆ  ಹಿರೋ ಮತ್ತು ಹೋಂಡಕ್ಕೆ ಹೆಚ್ಚು ಕಡಿಮೆ ಸಮಬಲದ ಪೈಪೋಟಿ ನೀಡುತ್ತಿದೆ.
 
ಹೀರೋ ಮೋಟೊಕಾರ್ಪ್: 3,49,437 ಯುನಿಟ್:
ದೇಶದ ಅತಿದೊಡ್ಡ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, ಕಳೆದ ಜನವರಿಯಲ್ಲಿ ಬರೋಬ್ಬರಿ 3,49,437 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ವರ್ಷದಿಂದ ವರ್ಷದ (YoY) ಬೆಳವಣಿಗೆಯನ್ನು ಗಮನಿಸಿದಾಗ ಅದು ಕಡಿಮೆಯಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. 2022ರ ಜನವರಿಯಲ್ಲಿ 3,80,476 ಯುನಿಟ್ ಮಾರಾಟ ಮಾಡಲು ಯಶಸ್ವಿಯಾಗಿತ್ತು. ಕೆಲವೇ ದಿನಗಳ ಹಿಂದೆ, ಕಂಪನಿಯು ಹೀರೋ Xoom 110cc ಸ್ಕೂಟರ್ ಅನ್ನು ರೂ.68,599 ಬೆಲೆಗೆ ಬಿಡುಗಡೆ ಮಾಡಿತ್ತು.
 
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2,78,143 ಯುನಿಟ್:
ಹೋಂಡಾ ಕಂಪನಿಯು ಜನವರಿ ತಿಂಗಳ ಮಾರಾಟದ ಅಂಕಿಅಂಶದ ವರದಿಯನ್ನು ಪ್ರಕಟಿಸಿದ್ದು, 2,78,143 ಯುನಿಟ್ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಿದೆ. ಆದರೆ, ವರ್ಷದಿಂದ ವರ್ಷದ (YoY) ಮಾರಾಟ ಪ್ರಮಾಣದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ. 2022ರ ಜನವರಿಗೆ ಹೋಲಿಕೆ ಮಾಡಿದರೆ, ಶೇಕಡ 11.8% ಇಳಿಕೆಯಾಗಿದೆ. ಇತ್ತೀಚೆಗೆ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ಆವೃತ್ತಿಯನ್ನು ರೂ.80,537 ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಮಾಡಿತ್ತು.
 
 

ಟಿವಿಎಸ್ ಮೋಟಾರ್ಸ್ 2,64,710 ಯುನಿಟ್:
ಹೀರೋ ಮೋಟೊಕಾರ್ಪ್ ಹಾಗೂ ಹೋಂಡಾ ಕಂಪನಿಗಳು ಮಾರಾಟದಲ್ಲಿ ನಷ್ಟ ಅನುಭವಿಸುತ್ತಿವೆ. ಆದರೆ, ಟಿವಿಎಸ್ ಯಶಸ್ಸಿನತ್ತ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಕಳೆದ ಜನವರಿಯಲ್ಲಿ 2,64,710 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ಉತ್ತಮ ಪ್ರಗತಿಯನ್ನು ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ (YoY) ಶೇಕಡ 57.8% ಬೆಳವಣಿಗೆಯನ್ನು ಸಾಧಿಸಿದೆ. 2022ರ ಡಿಸೆಂಬರ್ ಗೆ ಹೋಲಿಸಿದರೆ, ತಿಂಗಳ ಸೇಲ್ ನಲ್ಲೂ ಒಳ್ಳೆಯ ಸಾಧನೆಯನ್ನೇ ಮಾಡಿದ್ದು, ಶೇಕಡ 16.3% ಪ್ರಗತಿಯನ್ನು ದಾಖಲಿಸಿದೆ. ತನ್ನ ಉದ್ಯಮವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಸಿಂಗಾಪುರ ಮೂಲದ ION ಮೊಬಿಲಿಟಿಯಲ್ಲಿ ಬಂಡವಾಳ ಹಾಕಲು ಮುಂದಾಗಿದೆ. 

 

 

[t4b-ticker]

You May Also Like

More From Author

+ There are no comments

Add yours