ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಇವರಿಂದ ಮಹೇಶ್ ಹಾಗೂ ಗುರುನಾಥ್ ಶಿಕ್ಷಕರಿಗೆ ಸನ್ಮಾನ

 

 

 

 

ಚಿತ್ರದುರ್ಗ: ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಇವರಿಂದ ಮಹೇಶ್ ಹಾಗೂ ಗುರುನಾಥ್ ಶಿಕ್ಷಕರಿಗೆ ಸನ್ಮಾನ
ಪ್ರತಿಯೊಬ್ಬರ ಜೀವನದಲ್ಲಿ ತಂದೆ-ತಾಯಿಗಿಂತಲೂ ಮಹತ್ವದ ಪಾತ್ರ ವಹಿಸುವ ದೈವವೇ ಗುರು. ಮಕ್ಕಳಲ್ಲಿ ಸ್ಪೂರ್ತಿ,ಚೈತನ್ಯ ತುಂಬುತ್ತಾ ಪ್ರತಿ ಹಂತದಲ್ಲೂ ಬೆಂಬಲವಾಗಿ ನಿಂತು ಮಾರ್ಗದರ್ಶನ ನೀಡಿ ಜೀವನ ರೂಪಿಸುವ ಶಕ್ತಿ ಗುರು ಎಂದು ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಹೇಶ್‍ರವರು ತಿಳಿಸಿದರು.
ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಚಿತ್ರದುರ್ಗ ಇವರ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಏಕವರ್ಣಂ ಕಲಿಸಿದಾತಂ ಗುರು ಅಜ್ಞಾನದ ಕತ್ತಲೆ ತೊಡೆದು ಹಾಕಿ ಜ್ಞಾನದ ಬೆಳಕನ್ನು ಚೆಲ್ಲುತ್ತಾ ವಿದ್ಯಾರ್ಥಿಗಳ ಜೀವನ ಬೆಳಗಿಸುವ ಮಹಾಚೈತನ್ಯ ಶಿಕ್ಷಕ.ಶಿಕ್ಷಕರ ದಿನಾಚರಣೆಯಂದು ಶಿಕ್ಷಕರನ್ನು ಗೌರವಿಸುವ ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಕಾರ್ಯ ಶಾಘನೀಯ ಎಂದು ತಿಳಿಸಿದರು.
ದೇಶದ ಪ್ರಗತಿಗಾಗಿ ಶಿಕ್ಷಣ ,ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ದಿ. ಸದೃಢ ಸಮಾಜದ ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಿಗಿದೆ ಹೊಸ ಶಿಕ್ಷಣ ನೀತಿ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಶಿಕ್ಷಕರಾದ ಗುರುನಾಥ್ ರವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಗುರು-ಗುರಿ ಇದ್ದರೆ ಯಶಸ್ಸು ಖಚಿತ. ಜೀವನದ ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳಿಗೆ ದಾರಿದೀಪವಾಗಿಉಜ್ವಲಗೊಳಿಸುವ ಶಿಕ್ಷಕರನ್ನು ನೆನೆಯುವುದು ನಮ್ಮಗಳ ಕರ್ತವ್ಯ ಈ ನಿಟ್ಟಿನಲ್ಲಿ ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಸಾಧಕ ಶಿಕ್ಷಕರಾಗಿರುವ ಶ್ರೀ ಮಹೇಶ್ ಹಾಗೂ ಶ್ರೀ ಗುರುನಾಥ್ ಇವರುಗಳನ್ನು ಸನ್ಮಾನಿಸುವುದರ ಮೂಲಕ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಿದ್ದೇವೆ ಎಂದು ರೋಟರಿ ವಿಂಡ್ ಮಿಲ್ ಸಿಟಿ ಕ್ಲಬ್ ಅದ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಕರುಣ್ ತಿಳಿಸಿದರು.
ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾಥಿಗಳಾದ ಪವಿತ್ರ, ದೀಕ್ಷಿತಾ, ಅನು, ಗಿರಿಜಾ, ಭವ್ಯ ಹಾಗೂ ಜಯಶ್ರೀ ಇವರುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕವಿತಾ ಗಿರೀಶ್, ಸುಮಾ ವೀರೇಶ್, ಅನಿತಾ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ಶಿಕ್ಷಕರು ಪೋಷಕರು ಹಾಜರಿದ್ದರು.

 

 

[t4b-ticker]

You May Also Like

More From Author

+ There are no comments

Add yours